ಮುಂಬೈ:ಕರೊನಾ ಸೋಂಕಿನ ಪರೀಕ್ಷೆಗಳಿಗೆ ಬೋಗಸ್ ವರದಿಗಳನ್ನು ನೀಡುತ್ತಿದ್ದ 11 ಖಾಸಗಿ ಲ್ಯಾಬೋರೇಟರಿಗಳ ಅಕ್ರೆಡಿಟೇಷನ್ಅನ್ನು ಮಹಾರಾಷ್ಟ್ರದ ಅಮರಾವತಿ ಜಿಲ್ಲಾಧಿಕಾರಿಗಳು ರದ್ದು ಮಾಡಿದ್ದಾರೆ. ಕರೊನಾ ರಾಪಿಡ್ ಆಂಟಿಜೆನ್ ಟೆಸ್ಟ್​ ನಡೆಸುತ್ತಿದ್ದ ಈ ಲ್ಯಾಬ್​ಗಳು ಹಲವು ನಕಲಿ ವರದಿಗಳನ್ನು ನೀಡಿದ್ದಲ್ಲದೆ ಐಸಿಎಂಆರ್​ ಪೋರ್ಟಲ್​ಗೆ ಸಮಯಕ್ಕೆ ಸರಿಯಾಗಿ ವರದಿ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಬೋಗಸ್​​ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​(ಐಸಿಎಂಆರ್) ಮಾರ್ಗಸೂಚಿಗಳನ್ನು ಪಾಲಿಸದಿರುವ ಬಗ್ಗೆ ಅಮರಾವತಿ ಜಿಲ್ಲೆಯ ಕೆಲವು ಖಾಸಗಿ ಲ್ಯಾಬ್​ಗಳ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಜಿಲ್ಲಾಡಳಿತ 11 ಲ್ಯಾಬ್​ಗಳಿಗೆ ನೀಡಲಾದ ಮಾನ್ಯತೆಯನ್ನು ವಾಪಸ್​ ಪಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಹರಿಯಾಣ : ‘ಅವಿಶ್ವಾಸ’ವನ್ನು ಮಣಿಸಿದ ಬಿಜೆಪಿ-ಜೆಜೆಪಿ ಸರ್ಕಾರ
ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಅವರು, ಅಕೋಲಾ, ಅಮರಾವತಿ ಮತ್ತು ವಾಶಿಮ್​ ಜಿಲ್ಲೆಗಳಲ್ಲಿ ನಡೆದಿರುವ ಆರ್​ಟಿಪಿಸಿಆರ್​ ಪರೀಕ್ಷೆಗಳ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ರಾಪಿಡ್​ ಆಂಟಿಜನ್ ಟೆಸ್ಟ್​ ಶೇ. 30-35 ನಿಖರವಾದ ಡಯಾಗ್ನಸಿಸ್​ ಮಾಡಿದರೆ, ಆರ್​ಟಿಪಿಸಿಆರ್​ ಪರೀಕ್ಷೆಗಳು ಶೇ.60-65 ರಷ್ಟು ನಿಖರ ಮಾಹಿತಿಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !
ಅಭಿಮಾನಿಗೆ ಎಸಿ ಸರ್ವೀಸ್​ ಫ್ರೀ ! ಇದು ಹೃತಿಕ್ ರೋಶನ್​ ಜಾದೂ !
ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × three =
Remember me
