ನವದೆಹಲಿ:ಡೇಟಿಂಗ್​ನಲ್ಲಿದ್ದ ಯುವತಿಯನ್ನು ಕೊಲೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್​ನಲ್ಲಿಟ್ಟಿದ್ದ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಈ ಪ್ರಕರಣದ ವಿಚಾರವಾಗಿ ಆರೋಪಿಯಿಂದ ಇನ್ನಷ್ಟು ಮಾಹಿತಿಗಳು ಒಂದೊಂದಾಗೇ ಹೊರಬರುತ್ತಿವೆ. ನಿರಂತರ ತನಿಖೆ ನಡೆಸುತ್ತಿರುವ ಪೊಲೀಸರು, ಇದೀಗ ಆರೋಪಿ ಹೇಳಿರುವ ಹೇಳಿಕೆಯಿಂದ ದಂಗಾಗಿ ಹೋಗಿದ್ದಾರೆ.
ಆರೋಪಿ ಅಫ್ತಾನ್ ಅಮೀನ್ ಆರು ತಿಂಗಳ ಹಿಂದೆ ಕೊಲೆ ಮಾಡಿದ್ದ. ಇದೀಗ ಪೊಲೀಸರ ತನಿಖೆಯ ವೇಳೆ, ನಾನು ಪ್ರತಿ ದಿನ ಅಮೇರಿಕಾದ ಕ್ರೈ ಸಂಬಂಧಿ ‘ಡೆಕ್ಸ್ಟರ್’ (Dexter) ಕಾರ್ಯಕ್ರಮ ನೋಡುತ್ತಿದ್ದೆ. ಇದರಿಂದ ಪ್ರೇರೇಪಿತನಾಗಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಇದಲ್ಲದೇ, ಕತ್ತರಿಸಿರುವ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ವಿಲೇವಾರಿ ಮಾಡಲು 18 ದಿನ ತಗುಲಿದೆ. ಈ ವೇಳೆ ಮೃತದೇಹ ಕೊಳೆತು ವಾಸನೆ ಬರಬಾರದೆಂದು ಹೆಚ್ಚು ಅಗರಬತ್ತಿ ಉರಿಸಿದ್ದೇನೆ ಎಂದು ಹೇಳಿರುವ ಅಂಶ ವರದಿಯಾಗಿದೆ.
ಕೊಲೆಯಾದ ಶ್ರದ್ಧಾ ಮತ್ತು ಅಫ್ತಾನ್ ಅಮೀನ್ ಎಂಬಾತ ಲಿವಿಂಗ್ ಇನ್ ರಿಲೇಷನ್​ನಲ್ಲಿ ಕೆಲವು ಸಮಯದಿಂದ ಒಟ್ಟಾಗಿದ್ದರು. ಶ್ರದ್ಧಾ ದೆಹಲಿಯ ಅಂತಾರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ. ಅಲ್ಲಿ ಪರಿಚಯವಾದ ಹುಡುಗ ಅಫ್ತಾನ್ ಅಮೀನ್. ಇಬ್ಬರ ಪರಿಚಯ ನಿಧಾನವಾಗಿ ಪ್ರೀತಿಯತ್ತ ತಿರುಗಿದೆ. ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು.
ಶ್ರದ್ಧಾ ಮತ್ತು ಅಫ್ತಾನ್ ತಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸಿದ್ದಾರೆ. ಆದರೆ ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಲ್ಲ. ಈ ವೇಳೆ ಇಬ್ಬರೂ ಮನೆಯಿಂದ ಹೊರಬಂದು ದೆಹಲಿಯ ಫ್ಲಾಟ್ ಒಂದರಲ್ಲಿ ಒಟ್ಟಾಗಿ ವಾಸಿಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಬಿರುಕು ಮೂಡಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಕಳೆದ ಮೇ ತಿಂಗಳಿನಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ನಂತರದಲ್ಲಿ ಅಫ್ತಾಬ್ ಅಮೀನ್ ಶ್ರದ್ಧಾಳನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ನಂತರ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಮನೆಯ ಫ್ರಿಡ್ಜ್​​ನಲ್ಲಿಟ್ಟಿದ್ದಾನೆ.
ಮನೆಯವರ ವಿರೋಧ ಲೆಕ್ಕಿಸದೇ ಮುಸ್ಲಿಂ ಯುವಕನ ಜತೆ ಹೋದ ಯುವತಿಯ ಗತಿ ಏನಾಯ್ತು ನೋಡಿ!
ಶ್ರದ್ಧಾಳನ್ನು ಕೊಲೆ ಮಾಡಿ, ದೇಹದ ತುಂಡುಗಳನ್ನು ಫ್ರಿಡ್ಜ್​ನಲ್ಲಿಟ್ಟಿದ್ದ ಆರೋಪಿ, ಮುಂದಿನ 18 ದಿನಗಳಲ್ಲಿ ದೆಹಲಿಯ ವಿವಿಧ ಸ್ಥಳಗಳಲ್ಲಿ ದೇಹದ ತುಂಡುಗಳನ್ನು ಎಸೆದಿದ್ದಾನೆ. ಬೆಳಗ್ಗೆ 2 ಗಂಟೆಗೆ ಯಾರಿಗೂ ಗೊತ್ತಾಗದ ರೀತಿ ಮೃತದೇಹದ ತುಂಡುಗಳನ್ನು ಮನೆಯಿಂದ ಹೊರಸಾಗಿಸಿದ್ದಾನೆ.
26 ವರ್ಷದ ಶ್ರದ್ಧಾ ತನ್ನ ಕುಟುಂಬದ ಫೋನ್ ಕರೆಗಳಿಗೆ ಪ್ರತಿಕ್ರಿಯಿಸದೇ ಇರುವುದನ್ನು ಅರಿತ ಪೋಷಕರು, ಮಗಳನ್ನು ನೋಡಲೆಂದು ದೆಹಲಿಯಲ್ಲಿ ತಂಗಿದ್ದ ಫ್ಲಾಟ್​ಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ಮಗಳು ಇರದಿರುವುದನ್ನು ಅರಿತ ಪೋಷಕರು, ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಪಹರಣದ ಆರೋಪದಲ್ಲಿ ದೂರು ದಾಖಲಿಸಿಕೊಂಡು, ಅಫ್ತಾಬ್ ಅಮೀನ್​ನ್ನು ವಿಚಾರಣೆಗೆ ಒಳಪಡಿಸಿದ್ದು, ಒಂದೊಂದೇ ಬೆಚ್ಚ ಬೀಲುವಂತಹ ಮಾಹಿತಿಗಳು ಹೊರಬರುತ್ತಿವೆ.
ನಾವಿಬ್ಬರು ಡೇಟಿಂಗ್​ನಲ್ಲಿದ್ದೆವು. ಈ ವೇಳೆ ಶ್ರದ್ಧಾ ನನ್ನನ್ನು ಮದುವೆಯಾಗು ಎಂದು ಪ್ರತಿದಿನ ಒತ್ತಾಯಿಸುತ್ತಿದ್ದಳು. ಇದು ನಮ್ಮಬ್ಬರ ನಡುವೆ ಹಲವು ಬಾರಿ ಜಗಳಕ್ಕೆ ಕಾರಣವಾಗಿತ್ತು. ಈ ವೇಳೆ ಕೊಲೆ ನಡೆದಿದೆ ಎಂದು ಆರೋಪಿ ಅಫ್ತಾಬ್ ಅಮೀನ್​ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
