ಗುರುಗ್ರಾಮ್:ಜೂಮ್ ಆ್ಯಪ್ ಮೂಲಕ ಬುಕ್ ಮಾಡಿದ ನಂತರ ಇಬ್ಬರು ಬಂದು ಪಾಲಂ ವಿಹಾರ್ ಪ್ರದೇಶದ ನಿವಾಸಿಯೊಬ್ಬರಿಂದ ಕ್ರೆಟಾ ಕಾರನ್ನು ತೆಗೆದುಕೊಂಡು ಹೋಗಿ, ಅನಂತರ ಜಿಪಿಎಸ್​ ಕಿತ್ತಾಕಿ ಎಸ್ಕೇಪ್​ ಆಗಿರುವ ಘಟನೆ ಹರ್ಯಾಣದ ಗುರುಗ್ರಾಮ್​ ಬಳಿ ನಡೆದಿದೆ.
ಇದನ್ನೂ ಓದಿ:ನನ್ನ ಮಗನಿಗೆ ಗಲ್ಲು ಶಿಕ್ಷೆ ನೀಡಿ: ಮಗನ ವಿರುದ್ಧವೇ ಸಾಕ್ಷಿ ಹೇಳಿದ ತಾಯಿ..
ಈ ಕುರಿತು ಭಿವಾನಿಯ ಜತನ್ ಮಂಡಿ ನಿವಾಸಿ ಅನಿಕೇತ್ ಎಂಬವರು,ರಾಜಸ್ಥಾನದ ಬೆಹ್ರೋಡ್‌ನ ಧಿಲೌತ್ ಗ್ರಾಮದ ನಿವಾಸಿ ನಿತೀಶ್ ಯಾದವ್, ಬಬ್ಲು ಯಾದವ್ ಮತ್ತು ಗಿಗ್ಲಾನಾ ಗ್ರಾಮದ ಪಂಕಜ್ ಸಿಂಗ್ ಎಂಬುವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅನಿಕೇತ್​ ಜೂಮ್ ಕಾರ್ ಅಪ್ಲಿಕೇಶನ್‌ನಲ್ಲಿ ತಮ್ಮ ಕಾರನ್ನು ನೋಂದಾಯಿಸಿಕೊಂಡಿದ್ದೆ. ಈ ಅಪ್ಲಿಕೇಶನ್ ವೈಯಕ್ತಿಕ ಬಳಕೆಗಾಗಿ ಜನರಿಗೆ ಕಾರುಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಪಂಕಜ್ ಸಿಂಗ್ ತಮ್ಮ ಐಡಿ ಬಳಸಿ ಆ್ಯಪ್ ಮೂಲಕ ಕಾರನ್ನು ಬುಕ್ ಮಾಡಿದ್ದರು. ಇದಾದ ನಂತರ ನಿತೀಶ್ ಮತ್ತು ಬಬ್ಲು ಯಾದವ್ ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಅನಿಕೇತ್ ಬಳಿ ಬಂದು ರಾಜಸ್ಥಾನಕ್ಕೆ ಹೋಗುವುದಾಗಿ ಹೇಳಿ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಆಗಸ್ಟ್ 27ರಂದು ಕಾರನ್ನು ಹಿಂತಿರುಗಿಸಬೇಕಾಗಿತ್ತು. ಆದರೆ ಆಗಸ್ಟ್ 26ರ ರಾತ್ರಿಯೇ ಕಾರಿನಲ್ಲಿ ಅಳವಡಿಸಲಾದ ಜಿಪಿಎಸ್ ಸಿಸ್ಟಮ್ ಅನ್ನು ಕಿತ್ತುಹಾಕಿದ ಆರೋಪಿಗಳು ತಮ್ಮ ಫೋನ್​ ಸ್ವಿಚ್ ಆಫ್ ಮಾಡಿದ್ದಾರೆ.
ಇದನ್ನೂ ಓದಿ:2 ಗಂಟೆಯಲ್ಲಿ ಮಗಳ ಮದುವೆ: ಅಷ್ಟರಲ್ಲಿ ಕುಸಿದು ಬಿದ್ದ ಅಪ್ಪ, ಆಮೇಲೆ ನಡೆದಿದ್ದು ದುರಂತ..
ಕಾರಿನ ಕೊನೆಯ ಸ್ಥಳವು ರಾಜಸ್ಥಾನದ ಬೆಹ್ರೋಡ್‌ನಲ್ಲಿ ಪತ್ತೆಯಾಗಿದೆ. ಆರೋಪಿಗಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಇಷ್ಟು ದಿನ ಕಾಯ್ದ ನಂತರ ಕಾರು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಪಾಲಮ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತಂಡ ಕ್ರಮ ಕೈಗೊಳ್ಳುತ್ತಿದೆ ಎಂದು ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ದೀಪಕ್ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 2 =
Remember me
