ನವದೆಹಲಿ:ಸೊಸೆ ಮತ್ತು ಆಕೆಯ ಬಾಯ್​ಫ್ರೆಂಡ್​ ನಡುವಿನ ಸೆಕ್ಸ್​ ಚಾಟ್ಸ್​ ಪತ್ತೆಹಚ್ಚಿದ್ದೇ ಹಿರಿಯ ದಂಪತಿ ರಾಧ್ಯೆ ಶ್ಯಾಮ್​ ವರ್ಮ ಮತ್ತು ಆತನ ಪತ್ನಿ ವೀಣಾ ಭೀಕರ ಹತ್ಯೆಗೆ ಕಾರಣ ಎಂಬುದನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಆಸ್ತಿ ವಿವಾದವಲ್ಲಬಾಯ್​ಫ್ರೆಂಡ್​ ಜತೆ ಸೆಕ್ಸ್​ ಕುರಿತು ವಾಟ್ಸ್​ಆ್ಯಪ್​ ಮೂಲಕ ಸೊಸೆ ಮೋನಿಕಾ ಸಾಕಷ್ಟು ಸಂಭಾಷಣೆ ನಡೆಸಿರುವುದು ಗೊತ್ತಾದ ಬೆನ್ನಲ್ಲೇ ಆಕೆಯ ಮೊಬೈಲ್​ ಅನ್ನು ಅತ್ತೆ-ಮಾವ ತನ್ನ ವಶಕ್ಕೆ ಪಡೆದುಕೊಂಡಿದ್ದರು. ತಮ್ಮ ಪುತ್ರ ರವಿಗೆ ಸೊಸೆ ವಂಚನೆ ಮಾಡುತ್ತಿದ್ದಾಳೆ ಎಂಬ ಆಕ್ರೋಶ ಹಿರಿಯ ದಂಪತಿಯಲ್ಲಿತ್ತು. ಮೊಬೈಲ್​ ಕಿತ್ತುಕೊಂಡ ದ್ವೇಷಕ್ಕೆ ಪ್ರತಿಯಾಗಿ ಮೋನಿಕಾ (30) ಅತ್ತೆ-ಮಾವನನ್ನೇ ಕೊಲೆ ಮಾಡಿದ್ದು, ಆಕೆಯನ್ನು ಬುಧವಾರ (ಏ.12) ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಹಲವು ಭಯಾನಕ ಸಂಗತಿಗಳನ್ನು ಮೋನಿಕಾ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ. ಇದಕ್ಕೂ ಮುನ್ನ ಆಸ್ತಿ ವಿವಾದ ಕೊಲೆ ಕಾರಣ ಎಂದು ನಂಬಲಾಗಿತ್ತು.
ಇದನ್ನೂ ಓದಿ:ಲಂಕಾದಿಂದ ಚೀನಾಕ್ಕೆ 1 ಲಕ್ಷ ಮಂಗಗಳ ರಫ್ತು? ಸಾಲ ತೀರಿಸಲು ಹೊಸ ಮಾಗೋಪಾಯ ಕಂಡುಕೊಳ್ಳುತ್ತಿರುವ ದ್ವೀಪರಾಷ್ಟ್ರ
ಪ್ರಿಯಕರನ ಜತೆ ಸೇರಿ ನಿರ್ಧಾರಫೋನ್​ ಕಿತ್ತು ಇಟ್ಟುಕೊಂಡರು ಮೋನಿಕಾ ತನ್ನ ಬಾಯ್​ಫ್ರೆಂಡ್​ ಜತೆ ವಿವಾಹೇತರ ಸಂಬಂಧ ಮುಂದುವರಿಸಿದ್ದಳು. ಆದರೆ, ಎಲ್ಲದಕ್ಕೂ ಅಡ್ಡಿಯಾಗಿದ್ದ ಅತ್ತೆ-ಮಾವನನ್ನು ಮುಗಿಸಲು ಪ್ರಿಯಕರ ಆಶಿಶ್​ ಜತೆ ಸೇರಿ ಮೋನಿಕಾ ನಿರ್ಧಾರ ಮಾಡಿದ್ದಳು.
ಸೆಕ್ಸ್​ ಚಾಟ್ಸ್​ ಆಗಿ ಬದಲಾವಣೆಅಂದಹಾಗೆ ಮೋನಿಕಾ ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾಳೆ ಮತ್ತು ಮದುವೆಗೆ ಮೊದಲು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸವನ್ನು ತೊರೆದು ಮದುವೆಯಾದ ನಂತರ ಪತಿಯೊಂದಿಗೆ ವಾಸಿಸುತ್ತಿದ್ದಳು. ಆದರೆ, ಲಾಕ್‌ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೋನಿಕಾ ಸಕ್ರಿಯಳಾಗಿದ್ದಳು. 2020ರ ಆಗಸ್ಟ್​ ತಿಂಗಳಲ್ಲಿ ಮೋನಿಕಾ ಆಶಿಶ್ ಅವರನ್ನು ಜಾಲತಾಣದ ಮೂಲಕ ಭೇಟಿಯಾಳು. ಆರಂಭದಲ್ಲಿ ಸಹಜವಾಗಿದ್ದ ಚಾಟ್​ಗಳು, ಇಬ್ಬರ ನಡುವೆ ಬೆಳೆದಂತೆ ಬೇರೆ ರೂಪ ಪಡೆದುಕೊಂಡಿರು. ನಂತರ ಚಾಟ್​ಗಳು ಲೈಂಗಿಕ ಚಾಟ್‌ಗಳಾಗಿ ಮಾರ್ಪಟ್ಟಿತು.
ಮನೆ ಬದಲಿಸುವ ನಿರ್ಧಾರಆಶಿಶ್​ ಮತ್ತು ಮೋನಿಕಾ ಹಲವಾರು ಬಾರಿ ಹೋಟೆಲ್‌ಗಳಲ್ಲಿ ಸಹ ಭೇಟಿಯಾದರು. ಮೋನಿಕಾಗೆ ಮದುವೆಯಾಗಿ ಮಗುವಿದೆ ಎಂದು ತಿಳಿದಿದ್ದ ಆಶಿಶ್ ಮನೆಯವರು ಈ ಸಂಬಂಧವನ್ನು ವಿರೋಧಿಸಿದ್ದರು. ಪತಿ ರವಿ, ಪತ್ನಿ ಮೋನಿಕಾ ಮತ್ತು ಆಶಿಶ್​ ನಡುವಿನ ಸೆಕ್ಸ್ ಚಾಟ್ಸ್ ನೋಡಿದಾಗ ಸಮಸ್ಯೆ ಉಲ್ಬಣಿಸಿತು. ಇದಾದ ನಂತರ ರವಿಯ ಪಾಲಕರು ಮೋನಿಕಾ ಮೇಲೆ ನಿಗಾ ಇಡಲು ಪ್ರಾರಂಭಿಸಿದರು. ಗೋಕುಲಪುರಿಯಲ್ಲಿರುವ ತಮ್ಮ ಮನೆಯನ್ನು ಮಾರಿ ದ್ವಾರಕಾಗೆ ಹೋಗಿ ನೆಲೆಸುವ ಅತ್ತೆ-ಮಾವನ ನಿರ್ಧಾರವೇ ಕೊಲೆ ಸಂಚನ್ನು ಕಾರ್ಯಗತಗೊಳಿಸಲು ಪ್ರೇರೇಪಿಸಿತು ಎಂದು ಮೋನಿಕಾ ವಿಚಾರಣೆ ಸಮಯದಲ್ಲಿ ಬಾಯ್ಬಿಟ್ಟಿದ್ದಾಳೆ.
ಇದನ್ನೂ ಓದಿ:ಟಿಕೆಟ್ ಘೋಷಣೆ ಬಳಿಕವೂ ಇಲ್ಲ ತಕರಾರು: ಹರಿ-ಹರರ ಸಂಗಮ ಕ್ಷೇತ್ರದಲ್ಲಿ ತ್ರಿಮೂರ್ತಿಗಳ ಒಗ್ಗಟ್ಟು !
ಸಂಚು ಮಾಡಿ ಹತ್ಯೆಮೋನಿಕಾ ತನ್ನ ಪ್ರಿಯಕರ ಮತ್ತು ಆತನ ಸ್ನೇಹಿತರ ನೆರವಿನಿಂದ ಹಿರಿಯ ದಂಪತಿಯ ಕೊಲೆ ಮಾಡಿಸಿದ್ದಾಳೆ. ನಿವೃತ್ತ ಉಪ-ಪ್ರಾಂಶುಪಾಲರಾದ ರಾಧೇಯ್ ಶ್ಯಾಮ್ ವರ್ಮ ಮತ್ತು ಅವರ ಪತ್ನಿ ವೀಣಾ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು ಮತ್ತು ಮೋನಿಕಾ ಹಾಗೂ ಅವರ ಪತಿ ಮತ್ತು ಮಗ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮೋನಿಕಾ ತನ್ನ ಗೆಳೆಯ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಮನೆಯ ಟೆರೇಸ್ ಮೇಲೆ ಬಚ್ಚಿಟ್ಟು ರಾತ್ರಿ ವೃದ್ಧ ದಂಪತಿಯ ಮಲಗುವ ಕೋಣೆಗೆ ನುಗ್ಗಿಸಿ, ಕತ್ತು ಸೀಳಿ ಹತ್ಯೆ ಮಾಡಿಸಿದ್ದಾಳೆ. ಫೆಬ್ರವರಿ 20ರಂದು ಎಲ್ಲರು ಸೇರಿ ಸಭೆ ನಡೆಸಿ, ಕೊಲೆಗೆ ಸಂಚು ರೂಪಿಸಿದ್ದರು ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.(ಏಜೆನ್ಸೀಸ್​)
ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…

ರಿಷಿಕಾ ಈಗ ‘ಓಕೆ ಮಗಾ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eighteen =
Remember me
