ಪಣಜಿ:ಸ್ನೇಹಿತನ ಪತ್ನಿಯನ್ನೇ ಗೆಸ್ಟ್​ಹೌಸ್​ವೊಂದಕ್ಕೆ ಕರೆತಂದು ಕೊಲೆ ಮಾಡಿ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿ ಪರಾರಿಯಾಗಿದ್ದ ಕೊಲೆಗಾರ ಕೊನೆಗೆ ಗೂಗಲ್​ ಪೇ ವಹಿವಾಟಿನಿಂದಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಹಾರಾಷ್ಟ್ರದ ಸಾವಂತ್ವಾಡಿಯ ಶ್ರೇಯಾ ಶೈಲೇಶ್​ ಮದ್ಖೋಳ್ಕರ್ (30) ಎಂಬಾಕೆ ಕೊಲೆಗೀಡಾದ ಮಹಿಳೆ. ಗಣೇಶ್ ವರ್ನೋಡ್ಕರ್ ಎಂಬಾತನೇ ಕೊಲೆ ಆರೋಪಿ. ಗೋವಾದಲ್ಲಿ ಈ ಕೊಲೆ ಪ್ರಕರಣ ನಡೆದಿದ್ದು, ಕೊನೆಗೂ ಕೊಲೆಗಾರ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.
ಈತ ಶ್ರೇಯಾಳನ್ನು ಮೇ 9ರಂದು ಗೋವಾದ ಅರಂಬೋಲ್ ಎಂಬಲ್ಲಿನ ಗೆಸ್ಟ್​ಹೌಸ್​ಕೆ ಕರೆದುಕೊಂಡಿದ್ದ ಬಂದಿದ್ದ. ಬಳಿಕ ಆಕೆಯನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಗೆಸ್ಟ್​​ಹೌಸ್​ ಬಾಡಿಗೆಗೆ ತೆಗೆದುಕೊಳ್ಳುವಾಗ ತನ್ನ ವಿವರಗಳನ್ನು ನೀಡದ ಆರೋಪಿ, ಆಕೆಯ ಐಡಿ ವಿವರ ನೀಡಿ ಬುಕ್ ಮಾಡಿದ್ದ. ಹೀಗಾಗಿ ಪೊಲೀಸರಿಗೆ ಕೊಲೆ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.
ಆದರೆ ಆರೋಪಿ ಗೆಸ್ಟ್​ಹೌಸ್​ ಬಿಲ್ ಪಾವತಿಸುವಾಗ ಗೂಗಲ್​ ಪೇ ಮೂಲಕ ಹಣ ಟ್ರಾನ್ಸ್​ಫರ್​ ಮಾಡಿದ್ದ. ಈ ವಹಿವಾಟಿನ ವಿವರಗಳನ್ನು ಕಲೆ ಹಾಕಿದ ಗೋವಾದ ಪೆರ್ನೆಂ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಮೇ 9ಕ್ಕೆ ಗೆಸ್ಟ್​ಹೌಸ್​ಗೆ ಬಂದಿದ್ದ ಆರೋಪಿ, 13ರಂದು ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಮೇ 16ರಂದು ಶವ ಕೊಳೆತು ವಾಸನೆ ಬಂದು ರೂಮ್​ಬಾಯ್​ ಮಾಲೀಕರಿಗೆ ತಿಳಿಸಿದ್ದರಿಂದ ಪ್ರಕರಣ ಬಯಲಾಗಿದೆ. ಆರೋಪಿ ಆಕೆಯನ್ನು ಕರೆದುಕೊಂಡು ಬಂದಿದ್ಯಾಕೆ, ಕೊಲೆ ಮಾಡಿದ್ಯಾಕೆ ಎಂಬಿತ್ಯಾದಿ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಮಂಡ್ಯ ಹುಡುಗ್ರ ಅಭಿಮಾನ ನೋಡಿ ‘ಓ ಮೈ ಗಾಡ್’ ಎಂದ ಸನ್ನಿ ಲಿಯೋನ್​!; ನಿಮಗಾಗಿ ರಕ್ತದಾನ ಮಾಡುವೆ ಅಂದ್ರು ನಟಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
