ನವದೆಹಲಿ:ಈಕೆ ಆ್ಯಸಿಡ್ ದಾಳಿಯಿಂದಾಗಿ ತನ್ನ ಎರಡೂ ಕಂಗಳನ್ನು ಕಳೆದುಕೊಂಡಿದ್ದಾಳೆ, ರೂಪವನ್ನೂ ಕಳೆದುಕೊಂಡಿದ್ದಾಳೆ. ಅದಾಗ್ಯೂ ಸ್ನೇಹಿತನೊಬ್ಬ ಈಕೆಯನ್ನು ಮದುವೆಯಾಗಿದ್ದು, ಇಬ್ಬರ ಮದುವೆ ಈಗ ಬಹಳಷ್ಟು ಜನರಷ್ಟೇ ಅಲ್ಲ ಸರ್ಕಾರದ ಗಮನವನ್ನೂ ಸೆಳೆದಿದೆ.
ಹೌದು.. ಒಡಿಶಾದ ‘ಛಪಾಕ್’​ ಹುಡುಗಿ ಎಂದೇ ಖ್ಯಾತಿ ಪಡೆದಿರುವ 29 ವರ್ಷದ ಪ್ರಮೋದಿನಿಯನ್ನು ಹಳೆಯ ಗೆಳೆಯ ಸರೋಜ್ ಸಾಹು ಮಂಗಳವಾರ ಮದುವೆಯಾಗಿದ್ದು, ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಒಡಿಶಾದ ಜಗತ್​ಸಿಂಗ್​ಪುರ ಜಿಲ್ಲೆಯಲ್ಲಿ ನಡೆದ ಈ ಮದುವೆಗೆ ಅಲ್ಲಿನ ರಾಜ್ಯಪಾಲ ಗಣೇಶಿ ಲಾಲ್​ ಮಾತ್ರವಲ್ಲದೆ ಶಿಕ್ಷಣ ಸಚಿವ ಸಮೀರ್​ ದಾಸ್ ಕೂಡ ಆಗಮಿಸಿ ಶುಭ ಹಾರೈಸಿದ್ದಾರೆ. ಯೋಧ ಸಂತೋಷ್​ ಬೇದಾಂತ ಎಂಬಾತ 2009ರಲ್ಲಿ ತನ್ನ ಒಮ್ಮುಖ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಸಿಟ್ಟಾಗಿ ಪ್ರಮೋದಿನಿ ಮೇಲೆ ಆ್ಯಸಿಡ್ ಎರಚಿದ್ದ. ಆಗ ಎರಡೂ ಕಣ್ಣುಗಳನ್ನು ಕಳೆದುಕೊಂಡು ಮುಖ ವಿಕಾರಗೊಂಡಿದಷ್ಟೇ ಅಲ್ಲದೆ ಪ್ರಮೋದಿನಿ ಶೇ. 80 ಸುಟ್ಟಗಾಯಗಳಿಗೆ ಒಳಗಾಗಿದ್ದರು.
ಒಬ್ಬ ಪುರುಷ ಈಕೆಯ ಬದುಕನ್ನು ನರಕಗೊಳಿಸಿದರೆ ಮತ್ತೊಬ್ಬ ಪುರುಷ ಸರೋಜ್​ ಸಾಹು ಈಕೆ ಆ ನರಕದಿಂದ ಹೊರಬರುವಲ್ಲಿ ಪ್ರಮುಖ ಪಾತ್ರವಹಿಸಿದ್ದ. 2009ರ ಏಪ್ರಿಲ್​ 18ರಂದು ಆ್ಯಸಿಡ್ ದಾಳಿಗೆ ಒಳಗಾಗಿದ್ದ ಪ್ರಮೋದಿನಿ ಕಟಕ್​ ಎಸ್​ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸುಮಾರು ಐದು ವರ್ಷಗಳ ಕಾಲ ಚಿಕಿತ್ಸೆ ಪಡೆಯಬೇಕಾಗಿತ್ತು. ಹೀಗೆ ಚೇತರಿಸಿಕೊಳ್ಳುವಷ್ಟರಲ್ಲಿ ಹೈರಾಣಾಗಿ ಬದುಕಿನ ಬಗ್ಗೆಯೇ ಬೇಸರಗೊಂಡಿದ್ದ ಪ್ರಮೋದಿನಿಗೆ 2016ರಲ್ಲಿ ಸರೋಜ್ ಸಾಹು ಪರಿಚಯವಾಗಿ, ಸ್ನೇಹ ಬೆಳೆದಿತ್ತು. 2018ರ ಪ್ರೇಮಿಗಳ ದಿನದಂದು ಇವರಿಬ್ಬರೂ ವಿವಾಹವಾಗುವುದೆಂದು ನಿಶ್ಚಯಿಸಿದ್ದರು. ಇದೀಗ ಮಂಗಳವಾರ ಮದುವೆ ಆಗಿದ್ದಾರೆ.
ಆ್ಯಸಿಡ್ ದಾಳಿ ಬಳಿಕ ನನ್ನ ಬದುಕು ಅಕ್ಷರಶಃ ನರಕವಾಗಿತ್ತು. ಎಂಥ ಕೆಟ್ಟ ಕಲ್ಪನೆಯಲ್ಲೂ ನನಗೆ ಹೀಗೆಲ್ಲ ಆಗುತ್ತದೆ ಎಂದು ಅನಿಸಿರಲಿಲ್ಲ. ನಾನು ಮುಂದೆ ಬದುಕು ಸಾಗಿಸುತ್ತೇನೆ ಎಂಬ ನಂಬಿಕೆಯೇ ಹೋಗಿತ್ತು. ಅಂಥ ಸಂದರ್ಭದಲ್ಲಿ ಸರೋಜ್​ ಗೆಳೆಯನಾಗಿ ಸಿಕ್ಕಿದ್ದು, ಅವರು ಈಗ ಎಲ್ಲರಿಗೂ ಮಾದರಿ ಆಗಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಖುಷಿಯ ದಿನ ಎಂದು ಈಕೆ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಟ್ಟೆಯೊಳಗೆ ಮುಚ್ಚಾಯ್ತು.. ಖಾಸಗಿ ಅಂಗಗಳಲ್ಲೂ ಅಡಗಿಸಿಯಾಯ್ತು.. ಈಗ ಪೇಸ್ಟ್​ ರೂಪದಲ್ಲಿ ತಂದಳೀಕೆ!

ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್​ಗೆ ಅಷ್ಟು ಭಯವಾಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
