
ಮುಂಬೈ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪತ್ನಿ ಮತ್ತು ಸೋದರಳಿಯನನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಇದನ್ನೂ ಓದಿ:ರೆಸ್ಟೊರೆಂಟ್​​​ನಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ಗಾಯಕಿ; ಅಷ್ಟೊಂದು ಕಷ್ಟ ಇದ್ಯಾ ಮೇಡಂ? ಎಂದ ಫ್ಯಾನ್ಸ್​​
ಭರತ್ ಗಾಯಕ್‌ವಾಡ್ ( 57) ಎಸಿಪಿ ಹಾಗೂ ಮೃತರಲ್ಲಿ ಇಬ್ಬರನ್ನು ಪೊಲೀಸ್ ಅಧಿಕಾರಿಯ ಪತ್ನಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ಗುರುತಿಸಲಾಗಿದೆ.ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅವರು ಸೋಮವಾರ ಪುಣೆ ನಗರದ ತನ್ನ ಮನೆಯಲ್ಲಿ ತನ್ನ ಪತ್ನಿ ಮತ್ತು ಸೋದರಳಿಯನನ್ನು ಗುಂಡಿಕ್ಕಿ ಕೊಂದಿದ್ದು, ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 2ಕೋಟಿ ರೂ. ಬೆಲೆ ಬಾಳುವ ವಜ್ರದ ಉಂಗುರವನ್ನು ನಟಿ ತಮನ್ನಾಗೆ ಉಡುಗೊರೆ ನೀಡಿದ ಸ್ಟಾರ್​​ ನಟನ ಪತ್ನಿ
ಇಂದು ಮುಂಜಾನೆ 3.30ರ ಸುಮಾರಿಗೆ ಪುಣೆಯ ಬ್ಯಾನರ್ ಪ್ರದೇಶದ ಎಸಿಪಿ ಭರತ್ ಗಾಯಕ್‌ವಾಡ್ ಅವರ ಬಂಗಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಗಾಯಕ್ವಾಡ್ ಅಮರಾವತಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ನಂತರ ಮನೆಗೆ ಮರಳಿದ್ದರು.
ಇದನ್ನೂ ಓದಿ:ಇಂಡಿಯಾ ಗೇಟ್ ಮುಂದೆ ತನ್ನ ಗೆಳೆಯನಿಗೆ ಮುತ್ತು ಕೊಟ್ಟ ‘ದಿ ವಿಲನ್’ ನಟಿ ಆಮಿ ಜಾಕ್ಸನ್
ಸೋಮವಾರ ಮುಂಜಾನೆ 3.30 ರ ಸುಮಾರಿಗೆ ಎಸಿಪಿ ಮೊದಲು ತನ್ನ ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾನೆ . ಗುಂಡಿನ ಸದ್ದು ಕೇಳಿ ಓಡಿ ಬಂದು ಮಗ ಮತ್ತು ಸೋದರಳಿಯ ಬಾಗಿಲು ತೆರೆದಾಗ ಗಾಯಕ್ವಾಡ್ ಅವರು ತಮ್ಮ ಸೋದರಳಿಯ ಮೇಲೆ ಗುಂಡು ಹಾರಿಸಿದ್ದಾರೆ.ಬಳಿಕ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಯಾಪ್ ಧರಿಸುವುದರಿಂದ ಕೂದಲು ಉದುರುವುದು ನಿಜವೇ?
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:9 + 16 =
Remember me
