ನವದೆಹಲಿ:ಎಫ್​ಡಿಐ ನೀತಿ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (ಎಫ್​ಇಎಂಎ) ಉಲ್ಲಂಘಿಸಿದ ಆರೋಪ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಹಾಗೂ ಫ್ಲಿಪ್​ಕಾರ್ಟ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್​ಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಎಫ್​ಡಿಐ ನೀತಿ ಮತ್ತು ಎಫ್​ಇಎಂಎ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಈ ಕಂಪನಿಗಳ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ವಿವಿಧ ದೂರುಗಳನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಫ್ಲಿಪ್​ಕಾರ್ಟ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ನಡುವಿನ ಒಪ್ಪಂದದಲ್ಲಿ ಎಫ್​ಡಿಐ ನೀತಿ ಉಲ್ಲಂಘನೆ, ಉತ್ಪಾದನೆಯಲ್ಲಿ ಎಫ್​ಡಿಐಗೆ ಸಂಬಂಧಿಸಿದ ನೀತಿಯ ಉಲ್ಲಂಘನೆ ಸೇರಿ ಸಿಎಐಟಿಯು ನಾಲ್ಕು ದೂರುಗಳನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ದೇಶಾದ್ಯಂತದ ಎಲ್ಲ ವ್ಯಾಪಾರಿಗಳು 2021 ವರ್ಷವನ್ನು ಭಾರತೀಯ ವ್ಯಾಪಾರ್ ಸಮ್ಮಾನ್ ವರ್ಷ ಎಂದು ಆಚರಿಸುತ್ತಾರೆ ಹಾಗೂ ಇ-ಕಾಮರ್ಸ್ ದೈತ್ಯ ಸಂಸ್ಥೆಗಳ ದಬ್ಬಾಳಿಕೆಯನ್ನು ಕೊನೆಗೊಳಿಸುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಸಿಎಐಟಿ ಹೇಳಿದೆ. ಭಾರತೀಯ ವ್ಯಾಪಾರಿಗಳ ವ್ಯವಹಾರಗಳನ್ನು ವಿಸ್ತರಿಸಲು ಡಿಜಿಟಲ್ ಮಾರ್ಕೆಟ್ ಮತ್ತು ಪಾವತಿಯ ಹೊಸ ವಿಧಾನಗಳನ್ನು ಅಳವಡಿಕೊಳ್ಳಲು ಉತ್ತೇಜಿಸುವುದಾಗಿ ಸಿಎಐಟಿ ತಿಳಿಸಿದೆ.
ಗೂಗಲ್ ಪೇ ವಿರುದ್ಧ ದೂರು
ಗೂಗಲ್​ನ ಆನ್​ಲೈನ್ ಪಾವತಿ ವ್ಯವಸ್ಥೆಯಾದ ಜಿ ಪೇ, ಗ್ರಾಹಕರ ಆಧಾರ್ ಮತ್ತು ಬ್ಯಾಂಕಿಂಗ್ ಮಾಹಿತಿಗಳನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ. ಇದು ವಿವಿಧ ಕಾನೂನುಗಳ ಉಲ್ಲಂಘನೆ ಯಾಗಿದೆ ಎಂದು ಅರ್ಜಿದಾರ ಅಭಿಜಿತ್ ಮಿಶ್ರಾ ಹೇಳಿದ್ದಾರೆ. ಜಿ ಪೇ ವಿರುದ್ಧ ಅರ್ಜಿದಾರರು ಹಿಂದೆ ಸಲ್ಲಿಸಿದ್ದ ಅರ್ಜಿಗಳ ಸಹಿತ ಇತರ ಎಲ್ಲ ಪಿಐಎಲ್​ಗಳ ಬಗ್ಗೆ ಒಂದು ಅಫಿಡವಿಟ್ ಸಲ್ಲಿಸುವಂತೆ ನ್ಯಾ. ವಿಭು ಬಖ್ರು ಮತ್ತು ಪ್ರತೀಕ್ ಜಲಾನ್ ಇದ್ದ ಪೀಠ ನಿರ್ದೇಶಿಸಿದೆ. ಜನವರಿ 14ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 10 =
Remember me
