ಕಳೆದ ವರ್ಷ ಜಮ್ಮಕಾಶ್ಮೀರದ ವಿಶೇಷ ಸ್ಥಾನ ರದ್ದಾದ ದಿನದಿಂದಲೂ ಗೃಹಬಂಧನದಲ್ಲಿಯೇ ಇದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದಾರೆ. ಅದರ ಬೆನ್ನಲ್ಲೇ ತೀವ್ರ ವಿವಾದವನ್ನೂ ಸೃಷ್ಟಿಸಿದ್ದಾರೆ.
ಮುಫ್ತಿ ನಮ್ಮ ರಾಷ್ಟ್ರ ಧ್ವಜದ ವಿರುದ್ಧ ಮಾತನಾಡಿ, ಅವಮಾನ ಮಾಡಿದ್ದಾರೆ ಎಂದು ಆಕ್ರೋಶಗೊಂಡಿರುವ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೆಹಬೂಬಾ ಮುಫ್ತಿಯ ಕಚೇರಿ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ತ್ರಿವರ್ಣ ಧ್ವಜವನ್ನು ಹಾರಿಸುತ್ತ ಮುಫ್ತಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇನ್ನೂ ಅನೇಕರು ಜಮ್ಮುಕಾಶ್ಮೀರ, ಶ್ರೀನಗರದ ರಸ್ತೆಗಳಲ್ಲಿ ತಿರಂಗ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಇಂದು ಬೆಳಗ್ಗೆ ಮುಫ್ತಿ ಅವರ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರ್ತಿ ಸೇರಿ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ಪೊಲೀಸರ ವಿರುದ್ಧ ಕಿಡಿಕಾರಿದ್ದು, ನೀವು ಈ ರಾಷ್ಟ್ರದ ಧ್ವಜ ಹಾರಿಸುತ್ತಿರುವವರನ್ನು ಬಂಧಿಸುತ್ತಿದ್ದೀರಿ. ಅಷ್ಟಕ್ಕೂ ಯಾಕೆ ನನ್ನನ್ನು ಅರೆಸ್ಟ್ ಮಾಡುತ್ತಿದ್ದೀರಿ? ಅಂಥ ಅಪರಾಧ ನಾನೇನು ಮಾಡಿದ್ದೇನೆ ಎಂದು ಕೂಗಾಡಿದ್ದಾರೆ.
ಇದನ್ನೂ ಓದಿ:ಪ್ರಾದೇಶಿಕ, ಜಾಗತಿಕ ಶಕ್ತಿಯಾಗಿರುವ ಭಾರತವನ್ನು ಸ್ವಾಗತಿಸುತ್ತೇವೆ ಎಂದ ಅಮೆರಿಕ
ಅಷ್ಟೇ ಅಲ್ಲ ಮುಫ್ತಿ ರಾಷ್ಟ್ರದ ಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಜಮ್ಮುಕಾಶ್ಮೀರ ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮುಫ್ತಿ ಅವರು ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಅವರ ಪಿಡಿಪಿ ಪಕ್ಷದ ಮಾನ್ಯತೆ ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ.
ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ್ದ ಮುಫ್ತಿ, ಜಮ್ಮುಕಾಶ್ಮಿರದ ಧ್ವಜ ಮತ್ತೆ ಹಾರಾಡುವಂತಾದ ಮೇಲೆ ನಾನು ಈ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸುತ್ತೇನೆ ಎಂದಿದ್ದರು.ಕೇಂದ್ರ ಸರ್ಕಾರದವರು ಸಂವಿಧಾನವನ್ನು ಅಪವಿತ್ರಗೊಳಿಸಿದ್ದಾರೆ. ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ? ನನ್ನ ಪಾಲಿಗೆ ಧ್ವಜ ಎಂದರೆ ಜಮ್ಮುಕಾಶ್ಮೀರದ್ದು. ಈ ದೇಶದೊಂದಿಗೆ ನಮ್ಮ ಸಂಬಂಧ ಬೆಸೆದಿದ್ದು ಕೂಡ ಇದೇ ಧ್ವಜ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ತಮ್ಮ ಟೇಬಲ್​ ಮೇಲೆ ಮುಂಭಾಗದಲ್ಲಿ ಜಮ್ಮುಕಾಶ್ಮೀರದ ಧ್ವಜವನ್ನು ಇಟ್ಟು ಸುದ್ದಿಗೋಷ್ಠಿಗೆ ಕುಳಿತಿದ್ದರು.
ಇದನ್ನೂ ಓದಿ:3 ವರ್ಷದ ಬಾಲಕಿಯನ್ನು ಅಪಹರಿಸಿದವ ಪಾರಾಗಲು ರೈಲು ಹತ್ತಿದ…ಆದರೆ ಅಲ್ಲೇ ಕಾದಿತ್ತು ಬಿಗ್​ ಶಾಕ್​ !
ಇನ್ನು ಯಾವಾಗ ಇಲ್ಲಿ ಜಮ್ಮುಕಾಶ್ಮೀರದ ಧ್ವಜ ಹಾರಾಡುತ್ತದೆಯೋ ಅಂದೇ ಇಡೀ ರಾಷ್ಟ್ರದ ತ್ರಿವರ್ಣ ಧ್ವಜವನ್ನೂ ಹಾರಿಸಲಾಗುವುದು. ಅಲ್ಲಿಯವರೆಗೂ ಹಾರಿಸುವುದಿಲ್ಲ ಎಂದು ಮುಫ್ತಿ ಹೇಳಿದ್ದರು. ( ಏಜೆನ್ಸೀಸ್​)
ಕಾರ್ಗಿಲ್​ ಯುದ್ಧದಲ್ಲಿ ಸೈನಿಕರಿಗೆ ಆಹಾರ, ಶಸ್ತ್ರಾಸ್ತ್ರ ನೀಡಲಿಲ್ಲ- ಕಂಬನಿ ಮಿಡಿದ ಮಾಜಿ ಪಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
