ನವದೆಹಲಿ: ನ್ಯಾಯಾಂಗ ನಿಂದನೆ ಕೇಸ್​ನಲ್ಲಿ ಕೋರ್ಟ್ ವಿಧಿಸಿದ್ದ ಒಂದು ರೂಪಾಯಿ ದಂಡ ಕಟ್ಟೋದಿಲ್ಲ. ಹೊಸ ನ್ಯಾಯಪೀಠ ಹೊಸದಾಗಿ ಕೇಸ್ ವಿಚಾರಣೆ ನಡೆಸಲಿ ಎಂದು ಮೇಲ್ಮನವಿ ಹಕ್ಕನ್ನು ಪ್ರತಿಪಾದಿಸಲು ಮುಂದಾಗಿದ್ದಾರೆ ನ್ಯಾಯವಾದಿ ಪ್ರಶಾಂತ್ ಭೂಷಣ್!
ಎರಡು ಟ್ವೀಟ್ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ಪ್ರಕರಣದಲ್ಲಿ ಒಂದು ರೂಪಾಯಿ ದಂಡಕ್ಕೆ ಒಳಗಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಶನಿವಾರ “ಮೇಲ್ಮನವಿ ಸಲ್ಲಿಸುವ ಹಕ್ಕು” ಬಳಸಿಕೊಂಡಿದ್ದಾರೆ. ಆ ಮೂಲಕ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅವರು, ನ್ಯಾಯಾಂಗ ನಿಂದನೆಯ ಮೂಲಕ ಕೇಸ್​ ಅನ್ನೇ ವಿಸ್ತೃತ ಮತ್ತು ಬೇರೆಯದೇ ಆದ ನ್ಯಾಯಪೀಠದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ತೆರಿಗೆ ವಂಚನೆ ಕೇಸ್ – ಎ.ಆರ್.ರೆಹಮಾನ್​ಗೆ ಮದ್ರಾಸ್ ಹೈಕೋರ್ಟ್ ನೋಟಿಸ್​
ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಿರುದ್ಧದ ಆಕ್ಷೇಪಾರ್ಹ ಟ್ವೀಟ್​ಗಳಿಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್​ಗೆ 1 ರೂ. ದಂಡ ಕಟ್ಟುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸೆ.15ರ ಒಳಗಾಗಿ ದಂಡ ಕಟ್ಟದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 3 ವರ್ಷಗಳ ಕಾಲ ವಕೀಲಿಕೆಗೆ ನಿಷೇಧ ಹೇರಲಾಗುವುದು ಎಂದು ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಆಗಸ್ಟ್ 31ರಂದು ತಿಳಿಸಿತ್ತು. ಆದರೆ, ಲಾಯರ್​ ಕಾಮಿನಿ ಜೈಸ್ವಾಲ್ ಅವರ ಮೂಲಕ ಹೊಸ ಮೇಲ್ಮನವಿಯನ್ನು ಸಲ್ಲಿಸಿರುವ ಪ್ರಶಾಂತ್ ಭೂಷಣ್​, ಡಿಕ್ಲರೇಷನ್ ಅನ್ನೂ ಮಾಡಿದ್ದು, ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:1 ರೂಪಾಯಿ ಮತ್ತು ಪ್ರಶಾಂತ್ ಭೂಷಣ್ ಅವರ ಮೊದಲ ಪ್ರತಿಕ್ರಿಯೆ!
ಟ್ವೀಟ್​ನಲ್ಲಿ ಏನಿತ್ತು:ಜೂನ್ 27ರ ಟ್ವೀಟ್​ನಲ್ಲಿ, ‘ಭವಿಷ್ಯದ ಇತಿಹಾಸಕಾರರು 2014ರಿಂದ 2020ರ ತನಕ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಹೇಗೆ ಘಾಸಿಗೊಳಿಸಲಾಯಿತು ಎಂಬುದನ್ನು ದಾಖಲಿಸುವ ವೇಳೆ, ಅದರಲ್ಲಿ ಸುಪ್ರೀಂಕೋರ್ಟ್​ನ ಪಾಲುದಾರಿಕೆ ಮತ್ತು ಮುಖ್ಯವಾಗಿ 4 ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನೂ ದಾಖಲಿಸಬಹುದು’ ಎಂದು ಭೂಷಣ್ ಬರೆದುಕೊಂಡಿದ್ದರು. ಜೂನ್ 29ರಂದು ಸಿಜೆಐ ಎಸ್.ಎ. ಬೊಬ್ಡೆ ಕುರಿತ ಟ್ವೀಟ್​ನಲ್ಲಿ, ‘ಲಾಕ್​ಡೌನ್​ನಿಂದಾಗಿ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ದೇಶದ ಪ್ರಜೆಗಳು ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ. ಇಂಥಾ ಸನ್ನಿವೇಶದಲ್ಲಿ, ನಾಗ್ಪುರದ ಬಿಜೆಪಿ ಮುಖಂಡನೊಬ್ಬನಿಗೆ ಸೇರಿದ 50 ಲಕ್ಷ ರೂಪಾಯಿಯ ಬೈಕನ್ನು ಸಿಜೆಐ ರೈಡ್ ಮಾಡುತ್ತಿದ್ದಾರೆ. ನೋಡಿ, ಮಾಸ್ಕ್, ಹೆಲ್ಮೆಟ್ ಎರಡನ್ನೂ ಧರಿಸಿಲ್ಲ!’ ಎಂದು ಟೀಕಿಸಿದ್ದರು. ವಿಚಾರಣೆ ವೇಳೆ ‘ಭೂಷಣ್​ಗೆ ಶಿಕ್ಷೆ ನೀಡಬಾರದು, ಎಚ್ಚರಿಕೆ ನೀಡಿ ಬಿಟ್ಟು ಬಿಡಬೇಕು’ ಎಂದು ಕೇಂದ್ರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಿನಂತಿಸಿಕೊಂಡಿದ್ದರು. (ಏಜೆನ್ಸೀಸ್)
ನ್ಯಾಯಾಂಗ ನಿಂದನೆ ಕೇಸ್ – ಪ್ರಶಾಂತ್ ಭೂಷಣ್​ಗೆ 1 ರೂಪಾಯಿ ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
