ಹೈದರಾಬಾದ್​:ತನ್ನ ಜಮೀನಿನ ಬದುಗಳ ಮೇಲಿದ್ದ ಮರಗಳನ್ನು ಕಡಿಯುವ ವಿಚಾರವಾಗಿ ರಿವಾಲ್ವರ್‌ನಿಂದ ಗುಂಡು ಹಾರಿಸಿ ಓರ್ವ ಯುವಕನನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಖಳನಟ ಭೂಪಿಂದರ್ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ವೈದ್ಯರ ಕುಟುಂಬದಲ್ಲಿ 4 ಸಾವು – ಖಿನ್ನತೆ, ಕೊಲೆ, ಆತ್ಮಹತ್ಯೆಯೇ?…ಏನಿದರ ರಹಸ್ಯ?ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಭೂಪಿಂದರ್ ಸಿಂಗ್ ಮತ್ತು ಆತನ ಅನುಯಾಯಿಯನ್ನು ಬಂಧಿಸಿದ್ದಾರೆ.ವಿವರ ಹೀಗಿದೆ..ಯುಪಿಯ ಕೌಂಕೇಡ ಖಾದ್ರಿ ಗ್ರಾಮದಲ್ಲಿ ಭೂಪಿಂದರ್ ಸಿಂಗ್ ತೋಟದ ಮನೆ ಇದೆ. ಇದರ ಪಕ್ಕದಲ್ಲಿ ಗುರ್ದೀಪ್ ಸಿಂಗ್ ವಾಸವಾಗಿದ್ದಾರೆ. ಎರಡೂ ಜಮೀನಿನ ಗಡಿಯಲ್ಲಿ ಅಂದರೆ ಬದುಗಳ ಮೇಲೆ ಕೆಲವು ಮರಗಳಿವೆ. ಭಾನುವಾರ ಆ ಮರಗಳನ್ನು ತೆಗೆಯುವ ಸಲುವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಕೋಪದ ಭರದಲ್ಲಿ, ಭೂಪಿಂದರ್ ಸಿಂಗ್ ತನ್ನ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದು, ಗುರುದೀಪ್ ಸಿಂಗ್, ಅವರ ಪತ್ನಿ ಮೀರಾಬಾಯಿ ಮತ್ತು ಮಗ ಬೂಟಾ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಮತ್ತೊಬ್ಬ ಪುತ್ರ ಗೋವಿಂದ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭೂಪಿಂದರ್ ಸಿಂಗ್ ಯಾರು?:ಭೂಪಿಂದರ್ ಸಿಂಗ್ ಜೈ ಮಹಾಭಾರತ ಧಾರಾವಾಹಿಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಏಕ್ ಹಸೀನಾ ಥಿ, ತೇರೆ ಶೆಹರ್ ಮೇ, ಮಧುಬಾಲಾ- ಏಕ್ ಇಷ್ಕ್ ಏಕ್ ಜಾನೂನ್ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾನೆ.
ಆತ ಹೆಚ್ಚಾಗಿ ತೆಲುಗು ಚಲನಚಿತ್ರಗಳಲ್ಲಿ ವಿಲನ್ ಪಾತ್ರಗಳನ್ನು ನಿರ್ವಹಿಸಿದ್ದಾನೆ. ತಮ್ಮುಡು, ಅಣ್ಣಾಯ, ದೇವಿ ಪುತ್ರುಡು, ಭಲೇವಡಿವಿ ಬಸು, ವಿಲನ್, ಅಂಜಿ, ಶಂಕರ್ ದಾದಾ ಎಂಬಿಬಿಎಸ್ ಚಿತ್ರಗಳ ಮೂಲಕ ತೆಲುಗು ಜನರಿಗೆ ಚಿರಪರಿಚಿತನಾಗಿದ್ದ. ಆತ ಕಡೆಯದಾಗಿ 2010 ರಲ್ಲಿ ಸೋಚ್ ಲೋ ಎಂಬ ಹಿಂದಿ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದ. ಅದರ ನಂತರ ಆತ ಬೇರೆ ಯಾವುದೇ ಚಲನಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ.
ದಯವಿಟ್ಟು ನನ್ನ ಆನೆಯನ್ನು ವಾಪಸ್​ ಕೊಡಿ ಸರ್​…ಮಾವುತ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
