ಮುಂಬೈ:ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಸರಿಯಾದ ಸಮಯದಲ್ಲಿ ಸಿಪಿಆರ್ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್) ನೀಡುವುದರಿಂದ ಜೀವ ಉಳಿಸಬಹುದು. ರಸ್ತೆಯಲ್ಲಿ ಕುಸಿದು ಬಿದ್ದ ವ್ಯಕ್ತಿಗೆ ನಟ ಗುರ್ಮೀತ್ ಚೌಧರಿ ಸಿಪಿಆರ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕುರಿತಾದ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.
ಮುಂಬೈನ ಬೀದಿಯಲ್ಲಿ ಕುಸಿದುಬಿದ್ದ ವ್ಯಕ್ತಿಗೆ ಟಿವಿ ಮತ್ತು ಚಲನಚಿತ್ರ ನಟ ಗುರ್ಮೀತ್ ಚೌಧರಿ ಸಿಪಿಆರ್ ನೀಡುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಎಲ್ಲರೂ ಗುರ್ಮೀತ್ ಚೌಧರಿ ಅವರನ್ನು ಹೊಗಳುತ್ತಿದ್ದಾರೆ. ಕುಸಿದುಬಿದ್ದ ವ್ಯಕ್ತಿಗೆ ಸಿಪಿಆರ್  ಮಾಡಿ ಮತ್ತು ಸ್ಟ್ರೆಚರ್ ಅನ್ನು ಮೇಲಕ್ಕೆ ಸಾಗಿಸಲು ನಟ ಸಹಾಯ ಮಾಡಿದರು. ವಿಡಿಯೋ ನೋಡಿದ ನೆಟ್ಟಿಗರು ಅವರೊಬ್ಬ ಮಾನವೀಯ ನಟ… ನಿಜವಾದ ಹೀರೋ ಎಂದು ಕಾಮೆಂಟ್ ಮಾಡಿದ್ದಾರೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.
A post shared by Manav Manglani (@manav.manglani)
ಗುರ್ಮೀತ್ ಚೌಧರಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಜೀವನದ ಹಲವು ವಿಷಯಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಗುರ್ಮೀತ್ ತಮ್ಮ ಪತ್ನಿದೇವೀನಾ ಬೋನರ್ಜಿಅವರೊಂದಿಗೆ ಗಣೇಶ್ ಆಚರಣೆಯಲ್ಲಿ ಪಾಲ್ಗೊಂಡಿದ್ದರು . ಈ ಸಂಬಂಧ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೋವಿಡ್ ನಂತ್ರ ಬಂತು ಸ್ಕ್ರಬ್ ಟೈಫಸ್​ ವೈರಸ್!; ಭೀತಿ ಹುಟ್ಟಿಸಿದ ಈ ರೋಗ ಲಕ್ಷಣಗಳೇನು?

Sign in to your account
Please enter an answer in digits:five × 5 =
Remember me
