ಮುಂಬೈ:ಖ್ಯಾತ ಬಾಲಿವುಡ್​ ನಟನ ಪತ್ನಿ ತನಗೆ 58 ಲಕ್ಷ ರೂ. ವಂಚನೆ ಆಗಿದೆ ಎಂದು ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ, ನಿಷೇಧಾಜ್ಞೆ ಜಾರಿಬಾಲಿವುಡ್​ನ ಹಿರಿಯ ನಟ ಜಾಕಿ ಶ್ರಾಫ್ ಪತ್ನಿ ಆಯೇಶಾ ಶ್ರಾಫ್ ಆರೋಪಿ ಅಲನ್ ಫೆರ್ನಾಂಡಿಸ್ ವಿರುದ್ಧ ಐಪಿಸಿ ಸೆಕ್ಷನ್ 420, 408, 465, 467 ಮತ್ತು 468 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗಾಗಲೇ ಈ ಕುರಿತು ನಡೆಸುತ್ತಿದ್ದಾರೆ.
ಏನಿದು ಘಟನೆ?ನಟ ಟೈಗರ್​ ಶ್ರಾಫ್​ ಹಾಗೂ ಆಯೇಶಾ ಶ್ರಾಫ್​ ಒಡೆತನದ MMA ಮ್ಯಾಟ್ರಿಕ್ಸ್ ಜಿಮ್​ನ ನಿರ್ದೇಶಕರಾಗಿ 2018ರ ನವೆಂಬರ್ 20ರಂದು ಅಲನ್​ನ್ನು ಕಂಪನಿಯ ನಿರ್ದೇಶಕರಾಗಿ ನೇಮಿಸಲಾಗಿತ್ತು. ಇಬ್ಬರು ನಟರಾಗಿದ್ದರಿಂದ ಕಂಪನಿಯ ಎಲ್ಲ ಚಟುವಟಿಕೆಗಳನ್ನು ಅಲನ್​ ನೋಡಿಕೊಳ್ಳುತ್ತಿದ್ದರು.
ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಡಿಸೆಂಬರ್ 2018ರಿಂದ ಜನವರಿ 2023ರವರೆಗೆ ಒಟ್ಟು 58,53,591 ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು. ಅಲ್ಲದೆ, ಆರೋಪಿಯು ಕಂಪನಿಯ ಮೂಲಕ ಭಾರತ ಮತ್ತು ಭಾರತದ ಹೊರಗೆ ಒಟ್ಟು 11 ಪಂದ್ಯಾವಳಿಗಳನ್ನು ಆಯೋಜಿಸಲು ಸಾಕಷ್ಟು ಹಣವನ್ನು ತೆಗೆದುಕೊಂಡು ವಂಚಿಸಿದ್ದಾರೆ ಎಂದು ಆಯೇಶಾ ಆರೋಪಿಸಿದ್ದಾಳೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
