ಮುಂಬೈ:ತನ್ನ ಮುಂಬರುವ ಚಿತ್ರದ ಪ್ರಚಾರದ ವೇಳೆ ಕಾಣಿಸಿಕೊಂಡಿದ್ದ ಬಾಲಿವುಡ್​ ನಟಿ ಜಾಹ್ವನಿ ಕಪೂರ್​ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​​ಗಳಿಗಳಾಗಿದ್ದಾರೆ.
ಬಿಡುಗಡೆಗೆ ರೆಡಿಯಾಗಿರುವ ಗುಡ್​ ಲಕ್​​ ಚಿತ್ರದ ಪ್ರಚಾರದಲ್ಲಿ ಧರಿಸಿದ್ದ ಬಟ್ಟೆಯಿಂದಾಗಿ ಜಾಹ್ನವಿ ಈಗ ಚರ್ಚೆಯಲ್ಲಿದ್ದಾರೆ. ಸದಾ ಫ್ಯಾಷನ್​​ ಉಡುಗೆಯನ್ನು ತೊಟ್ಟು ಆಗ್ಗಾಗ್ಗೆ ಸುದ್ದಿಯಾಗುವ ಜಾಹ್ನವಿ ಈ ಬಾರಿಯೂ ಇದೇ ಕಾರಣಕ್ಕೆ ಚರ್ಚೆಯಲ್ಲಿದ್ದಾರೆ.
ಅಮೆರಿಕ ನಟಿ ಹಾಗೂ ಮಾಡೆಲ್​​ ಅನ್ನೆಹ್ಯಾಥ್ವೇ ಅವರು ಧರಿಸಿದ ರೀತಿಯ ಬಟ್ಟೆಯನ್ನು ಧರಿಸಿರುವುದು ಈಗ ಟೀಕೆಗೆ ಗುರಿಯಾಗಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ಸಮಾರಂಭವೊಂದರಲ್ಲಿ ನೀಲಿ ಹಾಗೂ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ಇದೇ ರೀತಿಯ ವಿನ್ಯಾಸವಿರುವ ಬಟ್ಟೆಯನ್ನು ಜೂನ್​ 18 ರಂದು ಜಾಹ್ನವಿ ಕಪೂರ್ ಧರಿಸಿದ್ದಾರೆ. ಇದು ಈಗ ಜಾಲತಾಣದಲ್ಲಿ ನಟಿಗೆ ಟೀಕೆಗಳ ಸುರಿಮಳೆಯೇ ಆಗುತ್ತಿದೆ.

ಖ್ಯಾತ ವಸ್ತ್ರ ವಿನ್ಯಾಸಕ ಡೇವಿಡ್​ ಕೊಮಾ ಎಂಬುವವರು ವಿನ್ಯಾಸ ಮಾಡಿರುವ ಈ ಉಡುಪು ಫ್ಯಾಷನ್​ ಪ್ರಿಯರಿಗೆ ಭಾರೀ ಮೆಚ್ಚುಗೆಯಾಗಿದೆ. ಈ ಮೊದಲೇ ಹಾಲಿವುಡ್​ ನಟಿ ಧರಿಸಿದ್ದರಿಂದ ಅದನ್ನೇ ನಕಲು ಮಾಡುವ ಅಗತ್ಯವಿರಲಿಲ್ಲ ಎಂದು ಟೀಕಿಸಿದ್ದಾರೆ.
ಡೇವಿಡ್​ ಕೊಮಾ ವಸ್ತ್ರ ವಿನ್ಯಾಸಕರಾಗಿರುವ ಇವರು ಲಂಡನ್​ ಮೂಲದವರಾಗಿದ್ದು, ಖ್ಯಾತ ಸೆಲೆಬ್ರಿಟಿಗಳಿಗಾಗಿ ವಿಶೇಷ ವಿನ್ಯಾಸ ಮಾಡಿಕೊಡುತ್ತಾರೆ. ವಿಶ್ವದಾದ್ಯಂತ ಇವರ ಡಿಸೈನ್​ಗೆ ಭಾರೀ ಬೇಡಿಕೆ ಇದೆ.(ಏಜೆನ್ಸೀಸ್​)
VIDEO: ಬೈಕ್​ ಸಮೇತ ಡ್ರೈನೇಜ್​​ ಗುಂಡಿಗೆ ಬಿದ್ದ ಪೊಲೀಸ್​​​ ದಂಪತಿ! ಸಿಸಿಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿ ಬೀಳಿಸುವ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
