ಇಂದೋರ್​:ಈಗಿನ ಕಾಲದಲ್ಲಿ 10 ರೂಪಾಯಿ ರಸ್ತೆ ಮೇಲೆ ಸಿಕ್ಕರೂ ಹಿಂದಿರುಗಿಸುವವರೂ ತೀರಾ ವಿರಳ, ಅಂತಹದ್ರರಲ್ಲಿ ಲಕ್ಷ ರೂ. ಹಣ ಕಳೆದುಕೊಂಡ ಕಿರುತೆರೆ ನಟಿ ಪಾಡು  ಏನಾಗಿರಬಹುದು.
ಪಾನಿಪೂರಿ ಆಸೆಗೆ ಬಿದ್ದು, ಪಾನಿಪೂರಿ ತಿನ್ನಲು ಬೀದಿಬದಿ ಅಂಗಡಿಗೆ ಹೋಗ ಹಿಂದಿ ಕಿರುತೆರೆ ನಟಿ ಕಾವ್ಯಾ ಪಂಜಾಬಿ ತಮ್ಮ ಬಳಿಯಿದ್ದ 1 ಲಕ್ಷ ರೂ.ಹಣವನ್ನು ಅಲ್ಲೇ ಬಿಟ್ಟುಬಂದಿದ್ದಾರೆ.ಇಂದೋರ್​​ನ ಬೀದಿಯಲ್ಲಿ ಮೊನ್ನೆ ರಾತ್ರಿ ಪಾನಿಪೂರಿ ತಿಂದ ಕಾಮ್ಯ ಅವರು ತಮ್ಮ ಕೈಯಲ್ಲಿದ್ದ ಬ್ಯಾಗ್​​ಅನ್ನು ಅಲ್ಲೇ ಇಟ್ಟಿದ್ದಾರೆ. ಪಾನಿಪೂರಿ ರುಚಿಯಲ್ಲೇ ಮಗ್ನರಾಗಿದ್ದ ಇವರು ತಿಂದ ಮೇಲೆ ಬ್ಯಾಗನ್ನು ಎತ್ತಿಕೊಳ್ಳದೇ ಹಾಗೆ ಬಂದುಬಿಟ್ಟಿದ್ದಾರೆ. ಹೋಟೆಲ್​ಗೆ ಬಂದು ನೋಡಿದ ಅವರಿಗೆ ಶಾಕ್​​!
ಇಂದೋರ್​​ನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಕಾಮ್ಯ ಪಂಜಾಬಿ ಅವರು ವಾಪಸ್ಸಾಗುವ ವೇಳೆ ರಸ್ತೆ ಬದಿಯಲ್ಲಿದ್ದ ಪಾನಿಪೂರಿ ಅಂಗಡಿಯ ಬಳಿ ತಮ್ಮ ಕಾರು ನಿಲ್ಲಿಸಿ,ಪಾನಿಪೂರಿ ಸವಿದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಕಾಮ್ಯ ಹೇಳಿಕೊಂಡಿದ್ದಾರೆ. ಅದೇನು ಸಣ್ಣ ಮೊತ್ತವೇನಿರಲಿಲ್ಲ, ಒಂದು ಲಕ್ಷ ಹಣ ಇದ್ದಿದ್ದರಿಂದ ನನಗೆ ತುಂಬಾ ಭಯ ಆಯಿತು, ನಾನು ಹಣವನ್ನು ಕಳೆದುಕೊಂಡಿದ್ದೀನಿ ವಾಪಸ್​​ ಪಡೆಯುವುದು ಸಾಧ್ಯವಿಲ್ಲ ಎಂದೆನಿಸಿತು. ಸ್ವಲ್ಪ ಹಣವಾಗಿದ್ದರೆ ಹಿಂದಿರುಗಿಸುತ್ತಾರೆ ಎಂಬ ವಿಶ್ವಾಸವಿರುತ್ತದೆ. ಆದರೆ ಇಷ್ಟು ಮೊತ್ತದ ಹಣವನ್ನು ಯಾರು ನೀಡುತ್ತಾರೆ ಎಂದು ಸುಮ್ಮನಾಗಿದ್ದರಂತೆ.
ಸದ್ಯ ಪಾನಿಪೂರಿ ಅಂಗಡಿಯವನು ಒಳ್ಳೆಯವನಾಗಿದ್ದ, ಆತ ತನ್ನ ಜತೆಯೇ ಇದ್ದ ಸ್ನೇಹಿತನಿಗೆ ಕರೆದು ಹಣವಿದ್ದ ಬ್ಯಾಗ್​ನ್ನು ನೀಡಿದ್ದಾನೆ. ನಂತರ ತಿಳಿಯಿತು ಇಷ್ಟು ಹಣ ಸಿಕ್ಕರೂ ವಾಪಸ್​ ಕೊಡುವ ದೊಡ್ಡ ಮನಸ್ಸಿನವರೂ ಇಂದಿಗೂ ಇದ್ದಾರೆ ಎಂದು ಹಣ ಸಿಕ್ಕ ಖುಷಿಯನ್ನು ನಟಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್​)
ತಿರುಪತಿ ಮಾತ್ರವಲ್ಲ ಮಲೆಮಹದೇಶ್ವರ ಬೆಟ್ಟದಲ್ಲೂ ಜನವೋ ಜನ..! ನಿರೀಕ್ಷೆಗೂ ಮೀರಿ ಆಗಮಿಸಿದ ಭಕ್ತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nineteen =
Remember me
