ಅಯೋಧ್ಯೆ:ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಗೂ ಮುನ್ನ ಪ್ರಧಾನಿ ಮೋದಿ ಕರೆ ನೀಡಿರುವ ದೇಶಾದ್ಯಂತ ದೇವಸ್ಥಾನ ಸ್ವಚ್ಛತಾ ಅಭಿಯಾನಕ್ಕೆ ಬಾಲಿವುಡ್​ ಬ್ಯೂಟಿ ಕಂಗನಾ ರಣಾವತ್​ ಸಾಥ್​ ನೀಡಿದ್ದಾರೆ. ಅಯೋಧ್ಯೆಯಲ್ಲಿರುವ ಹನುಮಾನ್​ ಗರ್ಹಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ ಕಂಗನಾ, ದೇವಸ್ಥಾನದ ನೆಲವನ್ನು ಸ್ವಚ್ಛಗೊಳಿಸಿದರು.
ಸೋಮವಾರ (ಜ.22) ನಡೆಯಲಿರುವ ಪ್ರಾಣ ಪ್ರತಿಷ್ಠಾಗೂ ಒಂದು ದಿನ ಮುಂಚಿತವಾಗಿಯೇ ಕಂಗನಾ, ಅಯೋಧ್ಯೆಗೆ ಆಗಮಿಸಿದ್ದಾರೆ. ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಜನರನ್ನು ಪೊರಕೆ ಹಿಡಿಯುವಂತೆ ಪ್ರೇರೇಪಿಸಲು ನಾನು ಬಯಸುತ್ತೇನೆ. ನಗರವನ್ನು ಸುಂದರಗೊಳಿಸಲಾಗಿದ್ದು, ರಾಮ ಮಂದಿರ ಉದ್ಘಾಟನಾ ದಿನದಂದು ಹಬ್ಬದ ನೋಟವನ್ನು ಹೆಚ್ಚಿಸಿದೆ ಎಂದು ಕಂಗನಾ ಹೇಳಿದರು.
#WATCH| Ayodhya: Actress Kangana Ranaut says "Ayodhya has been decorated like a bride. Bhajans and Yagya are being organised at several places. It feels like we have reached 'Dev Lok'…We cannot say anything about those who do not want to come…It feels really good to be in…pic.twitter.com/3CgfCw3owJ
— ANI (@ANI)January 21, 2024

ಕಂಗನಾ ಅವರು ಪೊರಕೆ ಹಿಡಿದು ದೇವಸ್ಥಾನದ ನೆಲಹಾಸನ್ನು ಸ್ವಚ್ಛಗೊಳಿಸುತ್ತಿರುವ ಸಾಕಷ್ಟು ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಕಂಗನಾ, ಹೇರ್​ಬನ್​ನಿಂದ ತಮ್ಮ ಕೂದಲನ್ನು ಕಟ್ಟಿಕೊಂಡು, ತುಂಬಾ ಒಡವೆಯನ್ನು ಧರಿಸಿ, ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದರು.
#WATCH| Uttar Pradesh: Actress Kangana Ranaut participates in cleanliness drive at Hanuman Garhi Temple in Ayodhya.
She is in Ayodhya to attend the Pran Pratishtha ceremony tomorrow.pic.twitter.com/LpElT3ROdf
— ANI (@ANI)January 21, 2024

ಇದೇ ಸಂದರ್ಭದಲ್ಲಿ ಹನುಮಾನ್​ ಗರ್ಹಿ ದೇವಸ್ಥಾನದಲ್ಲಿ ಕಂಗನಾ ಪ್ರಾರ್ಥನೆ ಸಹ ಸಲ್ಲಿಸಿದರು.
ದೇಶಾದ್ಯಂತ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಈ ತಿಂಗಳ ಆರಂಭದಲ್ಲೇ ಪ್ರಧಾನಿ ಮೋದಿ ಕರೆ ನೀಡಿದರು. ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ನಡೆಯಲಿರುವ ಜ.22ರ ಸೋಮವಾರದವರೆಗೂ ಇದು ಮುಂದುವರಿಯಲಿದೆ. ಇತ್ತೀಚೆಗಷ್ಟೇ ನಟ ಜಾಕಿ ಶ್ರಾಫ್​ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಲಾರಾಮ್ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ, ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿದ್ದರು. ಮಾಪ್ ಮತ್ತು ಬಕೆಟ್‌ನೊಂದಿಗೆ ದೇವಾಲಯದ ನೆಲ ಒರೆಸುವ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗಿದ್ದವು. ಅಂದಿನಿಂದ ಈ ಅಭಿಯಾನವನ್ನು ಹಲವಾರು ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ರಾಜ್ಯಗಳಾದ್ಯಂತ ಮುಂದುವರೆಸಿದ್ದಾರೆ.(ಏಜೆನ್ಸೀಸ್​)
ಇದಕ್ಕೇನಾ ಪ್ರೀತಿಯಿಂದ ಸಾಕಿ ಸಲುಹಿದ್ದು? ದತ್ತು ಪುತ್ರಿಯ ದುಷ್ಕೃತ್ಯ ನೆನೆದು ಶಕೀಲಾ ಕಣ್ಣೀರು

ಶ್ರೀರಾಮ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಭಾಗವಹಿಸುತ್ತಿಲ್ಲ, ಯಾಕೆ ಗೊತ್ತಾ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + thirteen =
Remember me
