ಕೇರಳ:ವಯನಾಡ್ ಭೂಕುಸಿತದಿಂದ ಸಾಕಷ್ಟು ಮಂದಿ ಮನೆ, ಕುಟುಂಬ, ಮಕ್ಕಳು ಎಲ್ಲರನ್ನು ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ನೋವಿನಲ್ಲಿ ತಮಿಳು ನಟ ಮನ್ಸೂರ್ ಅಲಿಖಾನ್ ಅಳಲು ತೋಡಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್​​ ಆಗಿದೆ.
ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ, ಪ್ರಕೃತಿಯೇ ಸರ್ವಸ್ವ ಎಂದರು. ವಯನಾಡಿನಲ್ಲಿ ಹೃದಯವಿದ್ರಾವಕ ದುರಂತವೊಂದು ನಡೆದಿದೆ. ವಯನಾಡ್.. ಜಾತಿ-ಧರ್ಮ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್.. ಮೇಲ್ಜಾತಿ, ಕೆಳಜಾತಿ, ಮೇಲು, ಕೀಳು, ಸಿನಿಮಾ ನಿರ್ಮಾಪಕರು, ರಾಜಕಾರಣಿಗಳು, ಸಂಬಂಧಗಳು, ದ್ವೇಷಗಳಿಲ್ಲ.. ಪ್ರಕೃತಿಯೇ ಎಲ್ಲವೂ. ಹಳ್ಳಿಗಳು, ಕುಟುಂಬಗಳು ಮತ್ತು ಜೀವನ ಎಲ್ಲವೂ ನಾಶವಾಯಿತು. ವಯನಾಡಿನಲ್ಲಿ ಹೃದಯವಿದ್ರಾವಕ ದುರಂತವೊಂದು ನಡೆದಿದೆ. ಪ್ರಾಣ ಕಳೆದುಕೊಂಡ ವಯನಾಡಿನ ಜನತೆಗೆ ನಾನು ನಮನ ಸಲ್ಲಿಸುತ್ತೇನೆ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದಾರೆ. ವೀಡಿಯೊದ ಕೊನೆಯಲ್ಲಿ, ನಟ ಅಳುತ್ತಿರುವುದನ್ನು ಕಾಣಬಹುದು.
A post shared by Mansoor Ali Khan (@mansoor_alikhan_offl)

ಭೂಕುಸಿತದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈವರೆಗೆ 380 ಮೃತದೇಹಗಳು ಪತ್ತೆಯಾಗಿವೆ. ದುರಂತದಲ್ಲಿ 67 ಅಪರಿಚಿತ ಶವಗಳು ಪತ್ತೆಯಾಗಿದೆ. ಕೊಳೆತ ಶವಗಳನ್ನು ಸುಡಲಾಗುತ್ತದೆ. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
40 ಕೋಟಿ ಆಸ್ತಿ ಮಾರಾಟಕ್ಕೆ ಇಟ್ಟ ಸ್ಟಾರ್ ಹೀರೋಯಿನ್ ಕಮ್​​ ಸಂಸದೆ ಕಂಗನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
