ಚೆನ್ನೈ:ನೆರೆಯ ರಾಜ್ಯ ತಮಿಳುನಾಡಿನಲ್ಲಿ ವಿಧಾನಸಭೆಯ ಚುನಾವಣೆಯ ಕಾವು ರಂಗೇರಿದ್ದು, ಪ್ರಚಾರದ ಅಬ್ಬರದ ನಡುವೆ ನಟ ಮನ್ಸೂರ್​ ಅಲಿ ಖಾನ್ ಶನಿವಾರ ಕಸದ ತೊಟ್ಟಿಯ ಪಕ್ಕದಲ್ಲಿ ಬೀದಿ ನಾಯಿಯೊಂದಿಗೆ ಕಾಣಿಸಿಕೊಂಡು ಪ್ರಚಾರ ಮಾಡಿದ್ದು, ಎಲ್ಲರ ಗಮನ ಸೆಳೆಯಿತು.
ಮನ್ಸೂರ್​ ಅವರು ಕೊಯಮತ್ತೂರಿನ ತೊಂಡಮುತೂರ್ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಲ್ಲದೆ, ಅವರ ನಾಮಪತ್ರಗಳನ್ನು ಸಹ ಚುನಾವಣಾ ಅಧಿಕಾರಿಗಳು ನಿನ್ನೆಯೇ ಮೌಲ್ಯೀಕರಿಸಿದ್ದಾರೆ.
ತಮ್ಮ ವಿಭಿನ್ನ ಪ್ರಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮನ್ಸೂರ್​, ನಾಯಕರು ಮತ್ತು ರಾಜಕಾರಣಿಗಳು ಕೇವಲ ಸುಳ್ಳು ಭರವಸೆಗಳೊಂದಿಗೆ ತಮಿಳುನಾಡನ್ನು ನಾಶ ಮಾಡುತ್ತಿದ್ದಾರೆ. ಯಾವುದನ್ನು ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿರಿ:ಈ ರಾಶಿಯವರು ಧೈರ್ಯದಿಂದ ಮುನ್ನುಗ್ಗಿದರೆ ಕಷ್ಟಗಳು ನಿವಾರಣೆ ಆಗುತ್ತವೆ: ವಾರಭವಿಷ್ಯ
ಏಕಾಂಗಿಯಾಗಿ ವಿಭಿನ್ನ ಪ್ರಚಾರದ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನವನ್ನು ನಟ ಮನ್ಸೂರ್​ ಮಾಡುತ್ತಿದ್ದಾರೆ. ಶನಿವಾರವಷ್ಟೇ ಪ್ರಚಾರದ ಅಖಾಡಕ್ಕೆ ಧುಮುಕಿರುವ ಮನ್ಸೂರ್​, ಮೊದಲು ಪೆರೂರ್​ ಪಟ್ಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಅಂಗಡಿ ವ್ಯಾಪಾರಿಗಳನ್ನು ಭೇಟಿ ಮಾಡಿ ಪ್ರಚಾರ ಮಾಡಿದ್ದರು.
ಇದಾದ ಬಳಿಕ ಹತ್ತಿರದಲ್ಲೇ ಇದ್ದ ಕಸದ ತೊಟ್ಟಿಯ ಬಳಿ ತೆರಳಿದ ಮನ್ಸೂರ್​, ಅಲ್ಲಿ ಬಿದ್ದಿರುವ ಕಸದ ನಿರ್ವಹಣೆ ಜವಬ್ದಾರಿ ಯಾರದ್ದು ಎಂದು ವಿಚಾರಣೆ ಮಾಡಿದರು. ಬಳಿಕ ಅಲ್ಲಿಯೇ ಇದ್ದ ಬೀದಿ ನಾಯಿಯನ್ನು ಕರೆದು ಅದರೊಂದಿಗೆ ಕೆಲ ಕಾಲ ಆಟವಾಡಿದರು. ಈ ವೇಳೆ ಅವರ ಮುಂದೆ ಹಾದುಹೋಗುತ್ತಿದ್ದ ಜನರನ್ನು ತಡೆದು ಸಮಸ್ಯೆಗಳನ್ನು ಆಲಿಸಿ, ನೋಟ್​ಬುಕ್​ನಲ್ಲಿ ವಿಳಾಸದ ಜತೆಗೆ ಬರೆದುಕೊಳ್ಳುತ್ತಿದ್ದರು. ಶಾಸಕನಾದರೆ ಖಂಡಿತ ಸಮಸ್ಯೆಗಳನ್ನು ಬಹೆಹರಿಸುತ್ತೇನೆಂದು ಭರವಸೆ ನೀಡುತ್ತಿದ್ದರು. ಹೀಗೆ ತಮ್ಮ ವಿಭಿನ್ನ ಮತಬೇಟೆಯ ಮೂಲಕ ಮನ್ಸೂರ್​ ಕೊಯಮತ್ತೂರ್​ ಜನರ ಗಮನ ಸೆಳೆದರು.(ಏಜೆನ್ಸೀಸ್​)
ಪ್ರತೀಕಾರ ತೀರಿಸಿಕೊಳ್ಳಲು ಕಾಂಗ್ರೆಸ್ ಮುಖಂಡನ ಕೊಲೆ, ಐವರ ಬಂಧನ

ಎರಡನೇ ಬಾರಿ ಗ್ರಾಮ ಪಂಚಾಯತ್ ಎಲೆಕ್ಷನ್​ ಮುಂದೂಡಿಕೆ; ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

ಮಸ್ಕಿ ಉಪ ಚುನಾವಣಾ ಪ್ರಚಾರದಲ್ಲೂ ಜೋಡೆತ್ತುಗಳು!; ಮಂಡ್ಯವನ್ನು ನೆನಪಿಸಿದ ಚುನಾವಣಾ ಕಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
