ಮುಂಬೈ :ನಟ ಮತ್ತು ಮಿಮಿಕ್ರಿ ಕಲಾವಿದ ಮಾಧವ್​ ಮೋಘೆ ಅವರು ಶ್ವಾಸಕೋಶದ ಕ್ಯಾನ್ಸರ್​ನಿಂದಾಗಿ ಭಾನುವಾರ ಬೆಳಿಗ್ಗೆ ಸಾವಪ್ಪಿದ್ದಾರೆ. ಬಾಲಿವುಡ್​ ನಟ ಸಂಜೀವ್ ಕಪೂರ್​ ಅವರ ಅನುಕರಣೆಗೆ ಜನಪ್ರಿಯವಾಗಿದ್ದ ಮೋಘೆ ಅವರು ಕಾಮೆಡಿ ಶೋಗಳಲ್ಲಿ ಮತ್ತು ಸ್ಟೇಜ್​ ಶೋಗಳಲ್ಲಿ ವೀಕ್ಷಕರ ಮನ ಸೆಳೆದಿದ್ದರು.
ಹಲವು ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೂಡ ನಟಿಸಿದ್ದ ಮೋಘೆ ಅವರು, ‘ದಾಮಿನಿ’, ‘ಘಾತಕ್’, ‘ಮೈನೆ ಪ್ಯಾರ್ ಕ್ಯು ಕಿಯ’, ‘ಪಾರ್ಟ್​ನರ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್​ ನಟರಾದ ಸಂಜೀವ್ ಕಪೂರ್​ ಉತ್ಪಲ್ ದತ್​ ಮತ್ತು ರಾಜ್​ಕುಮಾರ್​ ಅವರ ವಿಶಿಷ್ಟ ಮಾತಿನ ಶೈಲಿಗಳನ್ನು ಸುಲಲಿತವಾಗಿ ಅನುಕರಿಸಿ, ಹಾಸ್ಯ ಸೃಷ್ಟಿಸುತ್ತಿದ್ದರು.
ಇದನ್ನೂ ಓದಿ:BBK8: ನಿರೂಪಕ ಸುದೀಪ್​ಗೆ ಧನ್ಯವಾದ ತಿಳಿಸಿದ ಬಿಗ್​ಬಾಸ್​ ವೀಕ್ಷಕರು..!
ಹಲವು ಟಿವಿ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದ ಮೋಘೆ ಅವರಿಗೆ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್​ ಪತ್ತೆಯಾಗಿತ್ತು. ಕ್ಯಾನ್ಸರ್​ ಅಂತಿಮ ಹಂತದಲ್ಲಿದ್ದ ಕಾರಣ ಬಾಂಬೆ ಹಾಸ್ಪಿಟಲ್​ ವೈದ್ಯರು ಚಿಕಿತ್ಸೆ ಬೇಡವೆಂದು ಮನೆಗೆ ಕಳುಹಿಸಿದ್ದರು. ಮೋಘೆ ಅವರು ತಮ್ಮ ನಿವಾಸದಲ್ಲೇ ಭಾನುವಾರ(ಜುಲೈ 11) ಬೆಳಿಗ್ಗೆ 6 ಗಂಟೆಯ ವೇಳೆ ಕೊನೆಯುಸಿರೆಳೆದರು ಎಂದು ಪುತ್ರಿ ಪ್ರಾಚಿ ಮೋಘೆ ತಿಳಿಸಿದ್ದಾರೆ.(ಏಜೆನ್ಸೀಸ್)
ನಟ ಸುನೀಲ್​ ಶೆಟ್ಟಿ ಅಪಾರ್ಟ್​ಮೆಂಟ್​ ಸೀಲ್!

ಸಿನಿಮೀಯ ಶೈಲಿಯಲ್ಲಿ ವೃದ್ಧನ ಅಪಹರಣ! ಬೆದರಿಸಿ ಆಸ್ತಿಪತ್ರಕ್ಕೆ ಸಹಿ ಪಡೆದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
