ನವದೆಹಲಿ:ಸದ್ಯ ಕ್ವಾರಂಟೈನ್​ನಲ್ಲಿರುವ ಬಾಲಿವುಡ್‌ನ ಖ್ಯಾತ ನಟ, ಮನೋಜ್ಞ ಅಭಿನಯದ ಮೂಲಕವೇ ಮನೆಮಾತಾಗಿರುವ ನವಾಜುದ್ದೀನ್‌ ಸಿದ್ದಿಕಿ ಅವರಿಗೆ ಪತ್ನಿ ಆಲಿಯಾ ಸಿದ್ದಿಕಿ ವಿಚ್ಛೇದನ ಕೋರಿ ನೋಟಿಸ್​ ಕಳುಹಿಸಿದ್ದಾರೆ.
ಕರೊನಾ ಲಾಕ್​ಡೌನ್ ಪರಿಣಾಮ ಸ್ಪೀಡ್​ ಪೋಸ್ಟ್​ ಲಭ್ಯವಿಲ್ಲದ ಕಾರಣ ಮೇ 7ರಂದು ನವಾಜುದ್ದೀನ್‌ ಸಿದ್ದಿಕಿ ಅವರಿಗೆ ಇಮೇಲ್ ಮತ್ತು ವಾಟ್ಸ್ಆ್ಯಪ್ ಮೂಲಕ ನೋಟಿಸ್​ ಕಳುಹಿಸಲಾಗಿದೆ. ಖುದ್ದು ಆಲಿಯಾ ಕೂಡ ವಿಚ್ಛೇದನ ಕೋರಿದ ನೋಟಿಸ್​ ಅನ್ನು ಪತಿಗೆ ವಾಟ್ಸ್ಆ್ಯಪ್​ ಮಾಡಿದ್ದಾರೆ. ಆದರೆ, ನಟನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಲಿಯಾ ಪರ ವಕೀಲ ಅಭಯ್​ ಸಹೈ ತಿಳಿಸಿದ್ದಾರೆ.
ಇದನ್ನೂ ಓದಿರಿಪಾಕ್ ನಾಯಕನಿಗೆ ಇಂಗ್ಲಿಷ್ ಕಲಿಯುವಂತೆ ಸಲಹೆ
2009ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಸೇಕ್ರೆಡ್ ಗೇಮ್ಸ್ ಸ್ಟಾರ್ ನವಾಜುದ್ದೀನ್ ಮತ್ತು ಆಲಿಯಾಗೆ ಇಬ್ಬರು ಮಕ್ಕಳಿದ್ದಾರೆ. ಈಗ 11 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿಸಿಕೊಳ್ಳಲು ಮುಂದಾಗಿರುವ ಪತ್ನಿಯು ಡಿವೋರ್ಸ್ ಗೆ ಕಾರಣವೇನೆಂದು ಬಹಿರಂಗ ಪಡಿಸಿಲ್ಲ. ಆದರೆ, ಪತಿ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಬಗ್ಗೆ ನೋಟಿಸ್​ನಲ್ಲಿ ಪ್ರಸ್ತಾಪಿಸಲಾಗಿದೆಯಂತೆ.
ಮುಂಬೈನಲ್ಲಿದ್ದ ನವಾಜುದ್ದೀನ್ ಸಿದ್ದಿಕಿ, ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವಾರ ಲಾಕ್​ಡೌನ್​ ವೇಳೆಯೇ ಅಧಿಕಾರಿಗಳ ಅನುಮತಿ ಪಡೆದು ಹುಟ್ಟೂರು ಉತ್ತರಪ್ರದೇಶದ ಬುಧನಾಕ್ಕೆ ತೆರಳಿದರು. ದೂರ ಪ್ರಯಾಣ ಮಾಡಿದ ನಟನೊಂದಿಗೆ ಅವರ ಕುಟಂಬಸ್ಥರನ್ನೂ ಹೋಂ ಕ್ವಾರಂಟೈನಲ್ಲಿ ಇಡಲಾಗಿದೆ. ಈ ಸಂದರ್ಭದಲ್ಲೇ ವಿಚ್ಛೇದನ ಮತ್ತು ಜೀವನಾಂಶ ಕೋರಿ ಪತ್ನಿಯಿಂದ ನೋಟಿಸ್​ ಬಂದಿದೆ.
ಇದನ್ನೂ ಓದಿರಿತೆರೆಮೇಲೆ ಮತ್ತೆ ಮುನ್ನಾಭಾಯಿ, ಸರ್ಕಿಟ್​ ಮೋಡಿ!?
ಲಾಕ್​ಡೌನ್​ ವೇಳೆಯೇ ಮುಂಬೈನಿಂದ ಮುಜಫರ್ ನಗರದ ಬುಧನಾಕ್ಕೆ ಪ್ರಯಾಣ ಮಾಡಿದ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಟೀಕೆಯೂ ಕೇಳಿಬಂದಿತ್ತು. ಸೋಮವಾರ ಟ್ವೀಟ್​ ಮಾಡಿರುವ ನಟ, “ಇತ್ತೀಚೆಗೆ ನಾನು ಕಿರಿಯ ತಂಗಿಯನ್ನು ಕಳೆದುಕೊಂಡೆ. ಈ ಆಘಾತದಿಂದ 71 ವರ್ಷದ ಅಮ್ಮ ಎರಡು ಭಾರಿ ಅನಾರೋಗ್ಯಕ್ಕೀಡಾಗಿದ್ದರು. ರಾಜ್ಯ ಸರ್ಕಾರದ ಎಲ್ಲ ಮಾರ್ಗದರ್ಶಿಯನ್ನೂ ಪಾಲಿಸುತ್ತಿದ್ದೇವೆ. ಬುಧನಾದಲ್ಲಿ 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇದ್ದೇವೆ. ದಯವಿಟ್ಟು # ಸ್ಟೇ ಸೇಫ್ # ಸ್ಟೇ ಹೋಂ” ಎಂದಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿರಿಪಾಕ್ ಕ್ಯಾತೆಗೆ ತಿರುಗೇಟು ಕೊಟ್ಟ ಭಾರತೀಯ ಸೇನೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven − nine =
Remember me
