ಮುಂಬೈ :ತೂಕವುಳ್ಳ ಪಾತ್ರಗಳಲ್ಲಿ ತಮ್ಮ ವಿಶಿಷ್ಟ ನಟನೆಗೆ ಹೆಸರಾಗಿರುವ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರು ಮಾದಕ ವಸ್ತುಗಳ ವ್ಯಸನದ ವಿರುದ್ಧದ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ‘ಇಂಟರ್​ನಾಷನಲ್ ಡೇ ಎಗೆನೆಸ್ಟ್​ ಡ್ರಗ್ ಅಬ್ಯೂಸ್ ಅಂಡ್ ಇಲ್ಲಿಸಿಟ್​ ಟ್ರಾಫಿಕಿಂಗ್’​ ಆದ ಇಂದು, ಯುವಜನರಲ್ಲಿ ಅರಿವು ಮೂಡಿಸುವಲ್ಲಿ ಸಿನಿಮಾ ನಟನಾಗಿ ಮಹತ್ವದ ಪಾತ್ರ ವಹಿಸಬಹುದು ಎಂದಿದ್ದಾರೆ.
ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ(ಎನ್​ಸಿಬಿ)ನ ಪಟ್ನ ಜೋನಲ್ ಘಟಕವು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ವಿಚಾರವಾಗಿ ತಮ್ಮನ್ನು ಸಂಪರ್ಕಿಸಿರುವುದಾಗಿ ತ್ರಿಪಾಠಿ ತಿಳಿಸಿದ್ದಾರೆ. ಅದಕ್ಕೆ ಬೆಂಬಲ ವ್ಯಕ್ತಪಡಿಸಿರುವ ತ್ರಿಪಾಠಿ, “ಬಿಹಾರಕ್ಕೆ ಸಂಬಂಧಪಟ್ಟದ್ದು ಮತ್ತು ಸಾರ್ವಜನಿಕ ಕಾಳಜಿ ಇರುವಂಥದ್ದು ಯಾವುದೇ ಇರಲಿ, ಅಂಥ ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ನನ್ನ ವೈಯಕ್ತಿಕ ಆಸಕ್ತಿ ಇದ್ದೇ ಇರುತ್ತದೆ” ಎಂದಿದ್ದಾರೆ.
ಇದನ್ನೂ ಓದಿ:ಬೀದಿದೀಪ ಖರೀದಿಗೆ ಒಪ್ಪಿಗೆ ನೀಡದ ಜಿಲ್ಲಾಡಳಿತ: ಕಂಬಗಳಿಗೆ ಲಾಟೀನ್ ಕಟ್ಟಿ ಆಕ್ರೋಶ
“ಸಿನಿಮಾ ಯುವಜನರ ನೆಚ್ಚಿನ ಮಾಧ್ಯಮ. ಆದ್ದರಿಂದ ಒಬ್ಬ ನಟನಾಗಿ ನಾನು ಯಾವುದೇ ಜಾಗೃತಿ ಅಭಿಯಾನ ಆರಂಭಸಿದರೂ ಅತಿಹೆಚ್ಚು ಜನರನ್ನು ತಲುಪಿ, ಅಧಿಕ ಪ್ರಭಾವ ಉಂಟುಮಾಡಬಹುದು. ಇದು ಒಬ್ಬ ನಟನಾಗಿ ಮತ್ತು ನಾಗರೀಕನಾಗಿ ನನ್ನ ಕರ್ತವ್ಯವನ್ನು ಆದಷ್ಟು ಪೂರೈಸುವ ಸಾಮಾಜಿಕ ಜವಾಬ್ದಾರಿಯಾಗಿದೆ” ಎಂದಿದ್ದಾರೆ.(ಏಜೆನ್ಸೀಸ್)
VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ!

ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ. ಬಹುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − seven =
Remember me
