ಮುಂಬೈ:ಸೂಪರ್​​ ಸ್ಟಾರ್ ರಜನಿಕಾಂತ್ ಅವರು ​​ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ವೇಳೆ ಅವರ ಪಾದ ಮುಟ್ಟಿ ನಮಸ್ಕರಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ಟೀಕೆಗೆ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ.
ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಹಿಮಾಲಯ ಪ್ರವಾಸ ಬಳಿಕ ನೇರವಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಇದೇ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದಿ ಪಾದ ಮುಟ್ಟಿ ನಮಸ್ಕರಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Rajnikanth who is both bigger in stature and age than Yogi Adityanath is touching his feet.
Rajnikanth is 72, Yogi is 51.
Why is a superstar touching the feet of a politician? He lost all respect today.pic.twitter.com/edY8rjJ6g9
— Roshan Rai (@RoshanKrRaii)August 19, 2023

72 ವರ್ಷದ ನಟ 51 ವರ್ಷದ ಸಿಎಂ ಪಾದ ಮುಟ್ಟುವುದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದಾರೆ. ತನಗಿಂತ ಚಿಕ್ಕವರ ಪಾದ ಮುಟ್ಟಿ ನಮಸ್ಕರಿಸಿದ್ದು ಸರಿಯೇ ಅನ್ನೋ ಪ್ರಶ್ನೆ ಎದಿತ್ತು. ನೆಟ್ಟಿಗರು ಈ ಕುರಿತಾಗಿ ಮಿಶ್ರಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಖುದ್ದು ರಜನಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಕೊನೆಗೂ ಸಿಕ್ಕಿದ್ರು ಜಿಂಗಿ ಚಕ.. ಜಿಂಗಿ ಚಕ..ಕುಚ್​ ಕುಚ್..​ಟುವ್ವಿ ಟುವ್ವಿ..ಗಾಯಕ; ಈ ಹಾಡು ಹಾಡಿದ್ದು ಫೇಮಸ್ ನಟ
ಸನ್ಯಾಸಿಯಾಗಲಿ, ಯೋಗಿಯಾಗಲಿ ಅವರು ನನಗಿಂತ ಚಿಕ್ಕವರಾದರೂ ಅವರ ಕಾಲಿಗೆ ಬೀಳುವುದು ನನ್ನ ಅಭ್ಯಾಸ ಅದನ್ನೇ ಮಾಡಿದ್ದೇನೆ. ನನ್ನ ಆಚಾರವನ್ನು ಪಾಲಿಸಿದ್ದೇನೆ ಹೊರತು ಇನ್ನೇನು ಮಾಡಿಲ್ಲ ಎಂದು ನಟ ಹೇಳಿದ್ದಾರೆ.
ಇದನ್ನೂ ಓದಿ:7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?
ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ ಸಖತ್​ ಸೌಂಡ್​​ ಮಾಡುತ್ತಿದೆ. ಇದುವರೆಗೆ ರೂ.500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ತಲೈವಾಗೆ ಈ ದೊಡ್ಡ ಯಶಸ್ಸು ಸಿಕ್ಕಿದೆ.
VIDEO | ಸಿಎಂ ಕಾಲಿಗೆ ನಮಸ್ಕರಿಸಿದ ಸೂಪರ್ ಸ್ಟಾರ್ ರಜನಿಕಾಂತ್…ನೆಟ್ಟಿಗರಿಂದ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 7 =
Remember me
