ಮುಂಬೈ :ಟೆಲಿವಿಷನ್ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರಾಮ್​ ಕಪೂರ್ ನವನವೀನ ಕಾರುಗಳನ್ನು ಕೊಳ್ಳುವುದಕ್ಕೆ ಹೆಸರಾಗಿದ್ದಾರೆ. ಅವರು ಇತ್ತೀಚೆಗೆ ತಮ್ಮ ಗ್ಯಾರೇಜಿಗೆ ಸೇರಿಸಿಕೊಂಡ ವಾಹನ ಯಾವುದು ಗೊತ್ತೆ? 1.84 ಕೋಟಿ ರೂ.ಗಳ ಶೋರೂಂ ಬೆಲೆಯುಳ್ಳ ಪಾರ್ಶೆ​ 911 ಕಾರ್ರೆರಾ ಎಸ್​!
ಪಾರ್ಶೆ ಸೆಂಟರ್​ ಮುಂಬೈನಿಂದ ರಾಮ್​ ಕಪೂರ್​ ದಂಪತಿ ಹೊಸ ಕಾರಿನ ಡೆಲಿವರಿ ಪಡೆದ ಫೋಟೊವನ್ನು ಕಂಪೆನಿ ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದೆ. ಅವರು ಖರೀದಿಸಿರುವ ಜೆಂಟಿಯನ್ ಬ್ಲೂ ಮೆಟಾಲಿಕ್​ ಪೇಂಟ್​ ಹೊಂದಿದ ಟೂ-ಡೋರ್ ಕೂಪ್​ ಆಕರ್ಷಕವಾಗಿದೆ.
ಇದನ್ನೂ ಓದಿ:ಕಾರಲ್ಲಿ ಬರ್ತಾರೆ- ಹೊಂಡ ಮುಚ್ಚುತ್ತಾರೆ: ನಿದ್ದೆ ಮಾಡುತ್ತಿರೋ ಅಧಿಕಾರಿಗಳಿಗಾಗಿ 11 ವರ್ಷಗಳಿಂದ ಈ ಕಾರ್ಯ!
ಪಾರ್ಶೆ​ 911 ಕಾರ್ರೆರಾ ಎಸ್​ ಮಾಡೆಲ್​ ಭಾರತದಲ್ಲಿ ಮೂರು ವಿಧಗಳಲ್ಲಿ ಬರುತ್ತದೆ – ಕೂಪ್, ಕಾಬ್ರಿಯೋಲೆಟ್ ಮತ್ತು ಟರ್ಗಾ. 3.0-ಲೀಟರ್​-6-ಸಿಲಿಂಡರ್​ ಹೊಂದಿದ, ಹಿಂಭಾಗದಲ್ಲಿ ಅಳವಡಿಸಲಾದ ಟರ್ಬೋಚಾರ್ಜಡ್​ ಇಂಜಿನ್​ನೊಂದಿಗೆ ಬರುವ ಈ ಮಾಡೆಲ್​ನಲ್ಲಿ ಮೋಟಾರಿಗೆ 8-ಸ್ಪೀಡ್​ ಆಟೋಮೆಟಿಕ್ ಟ್ರಾನ್ಸ್​ಮಿಷಿನ್ ಸೌಲಭ್ಯವಿದೆ. ಸೊನ್ನೆಯಿಂದ 100 ಕಿಲೋಮೀಟರ್​ ಪರ್ ಅವರ್ ವೇಗವನ್ನು 3.7 ಸೆಕೆಂಡುಗಳಲ್ಲಿ ಈ ಕಾರು ಸಾಧಿಸಬಲ್ಲದು. 306 ಕಿಲೋಮೀಟರ್​ ಪರ್ ಅವರ್ ವೇಗದವರೆಗೆ ಓಡಬಲ್ಲದು ಎನ್ನಲಾಗಿದೆ.(ಏಜೆನ್ಸೀಸ್)
ಮನೆ ಮುಂದೆ ನಿಲ್ಲಿಸುವ ದ್ವಿಚಕ್ರವಾಹನಗಳೇ ಈತನ ಟಾರ್ಗೆಟ್!

ಕಡಿಮೆ ಬೆಲೆಗೆ ಮೊಬೈಲ್ ಫೋನು ಎಂದು ದುಡ್ಡು ಪೀಕುತ್ತಿದ್ದ ಖದೀಮರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
