ಮುಂಬೈ :ಬಾಲಿವುಡ್​ನ ಹಿರಿಯ ನಟ ರಣಧೀರ್ ಕಪೂರ್ ಅವರಿಗೆ ಕರೊನಾ ಸೋಂಕು ತಗುಲಿದೆ. 74 ವರ್ಷ ವಯಸ್ಸಿನ ಕಪೂರ್​, ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎನ್ನಲಾಗಿದೆ.
“ರಣಧೀರ್​ ಅವರು ನಿನ್ನೆ ರಾತ್ರಿ ಕರೊನಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರು ಸ್ಟೇಬಲ್ ಆಗಿದ್ದಾರೆ. ಚಿಂತೆ ಮಾಡುವ ಅಗತ್ಯ ಇಲ್ಲ” ಎಂದು ಅವರ ಚಿಕಿತ್ಸೆ ಮಾಡುತ್ತಿರುವ ಡಾ. ಸಂತೋಷ್​ ಶೆಟ್ಟಿ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ:ಕರೊನಾದಿಂದ ಬೇಗ ಗುಣಮುಖವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟ
ಸಿನಿಮಾ ಕ್ಷೇತ್ರದ ದಿಗ್ಗಜ ದಿವಂಗತ ರಾಜ್​ ಕಪೂರ್​ ಅವರ ಹಿರಿಯ ಪುತ್ರರಾದ ರಣಧೀರ್ ಕಪೂರ್​, ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಮತ್ತು ಕರಿಷ್ಮಾ ಕಪೂರ್​ ಅವರ ತಂದೆಯಾಗಿದ್ದಾರೆ. ಕಳೆದ ವರ್ಷ ಏಪ್ರಿಲ್ 30 ರಂದು ರಣಧೀರ್​ ಅವರ ತಮ್ಮ ನಟ ರಿಷಿ ಕಪೂರ್ ಕ್ಯಾನ್ಸರ್​ ರೋಗದಿಂದ ನಿಧನರಾಗಿದ್ದರು. ಈ ಫೆಬ್ರವರಿಯಲ್ಲಿ ಮತ್ತೊಬ್ಬ ತಮ್ಮ ರಾಜೀವ್ ಕಪೂರ್ ಹೃದಯಾಘಾತದಿಂದ ನಿಧನಗೊಂಡಿದ್ದರು.(ಏಜೆನ್ಸೀಸ್)
ರಾಜ್ಯ ಸರ್ಕಾರಗಳಿಗೆ ಅಗ್ಗವಾದ ಕೋವಾಕ್ಸಿನ್

ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
