ಕರ್ನಾಟಕದ ಕ್ರಶ್ಆಗಿದ್ದ ನಟಿ ರಶ್ಮಿಕಾ ಮಂದಣ್ಣ ನಂತರ ನ್ಯಾಶಿನಲ್ ಕ್ರಶ್ ಆಗಿದ್ದು ಎಲ್ಲರಿಗು ಗೊತ್ತೇ ಇದೆ. ಹಲವು ಭಾಷೆಗಳಲ್ಲಿ ಬಣ್ಣ ಹಚ್ಚುವ ಮೂಲಕ ಬ್ಯುಸಿಯಾಗಿರುವ ನಟಿ ರಶ್ಮಿಕಾ ಪೋಷಕರಿಗೆ ಇತ್ತೀಚೆಗೆ ಕೆಲವು ಕಾರಣಗಳಿಂದ ಬೇಜಾರಾಗಿದ್ದಾರಂತೆ.
ಕೋವಿಡ್-19 ಮಹಾಮಾರಿ ಎಲ್ಲಾ ಕಡೆ ಆವರಿಸಿದ್ದು, ಇದರ ಬಗ್ಗೆ ಎಚ್ಚರ ವಹಿಸಬೇಕಿದ್ದ ಮಗಳು ಶೂಟಿಂಗ್ ಅಂತ ಎಲ್ಲಾ ಕಡೆ ತಿರುಗಾಡುತ್ತಿರುವುದು ರಶ್ಮಿಕಾ ಪೋಷಕರನ್ನು ಚಿಂತೆಗೀಡು ಮಾಡಿದೆಯಂತೆ.‘ಮಿಶನ್ ಮಜ್ನು’ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಬಾಲಿವುಡ್​​ಗೆ ಕಾಲಿಟ್ಟಿರುವ ಮಂದಣ್ಣ, ಇತ್ತೀಚೆಗೆ ಮುಂಬೈ ನಗರದಲ್ಲಿ ಒಂದು ಅಪಾರ್ಟ್​ಮೆಂಟ್ ಕೂಡ ಖರೀದಿಸಿದ್ದರು. ‘
ಇದನ್ನೂ ಓದಿ:ಸೆಮಿಫೈನಲ್ ಪ್ರವೇಶಿಸಿದ ಕುಸ್ತಿಪಟುಗಳು, ಪದಕಕ್ಕೆ ಒಂದೇ ಹೆಜ್ಜೆ
ಇದೆಲ್ಲದರ ನಡುವೆ ಶೂಟಿಂಗ್ ಕೆಲಸ ನಿಮಿತ್ತ ಮಂದಣ್ಣ ಎಲ್ಲಾ ಕಡೆ ತಿರುಗಾಡುತ್ತಿರುವುದು ಪೋಷಕರಿಗೆ ಬೇಜಾರಾಗಿದೆಯಂತೆ. ಅಲ್ಲದೇ ಕೋವಿಡ್​​ನಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲಾ ಕಡೆ ತಿರುಗಾಡುವುದು ಪೋಷಕರಿಗೆ ಇಷ್ಟವಿಲ್ಲವಂತೆ. ​​
ಈ ವಿಚಾರವಾಗಿ ಮಾತನಾಡಿರುವ ರಶ್ಮಿಕಾ ನಾನು ಕೂಡ ವೈದ್ಯೆಯಾಗಿದ್ದು, ಶೂಟಿಂಗ್ ಸಮಯದಲ್ಲಿ ಯಾರಾದರೂ ಮಾಸ್ಕ್ ಹಾಕದೆ ಇದ್ದರೆ ನಾನು ಅವರನ್ನು ಪ್ರಶ್ನಿಸುತ್ತೇನೆ. ನನ್ನ ಪೋಷಕರ ಕಾಳಜಿ ನನಗೆ ಗೊತ್ತು, ಆದರೆ ಕೆಲಸ ಕೂಡ ನನಗೆ ಅಷ್ಟೇ ಮುಖ್ಯ. ನನಗೆ ಸಿನಿಮಾದವರು ಹಣ ಕೊಟ್ಟಿದ್ದಾರೆ, ಹಾಗಾಗಿ ನನ್ನ ಕೆಲಸವನ್ನು ನಾನು ಮುಗಿಸುತ್ತೇನೆ ಎಂದು ಹೇಳಿದ್ದಾರೆ.ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಇದೇ ಡಿಸೆಂಬರ್ 25 ರಂದು ತೆರೆಗೆ ಅಪ್ಪಳಿಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
