ಮುಂಬೈ:ಬಾಲಿವುಡ್‌ನಲ್ಲಿ ತಮ್ಮದೇಯಾದ ನಟನೆ ಮೂಲಕ ಅಪಾರ ಮೆಚ್ಚುಗೆ ಗಳಿಸಿ ಸಾಕಷ್ಟು ವಿವಾದಾತ್ಮಕ ಜೀವನವನ್ನು ನಡೆಸಿರುವ ನಟಿ ರೇಖಾ ತಾವು ಅನುಭವಿಸಿದ ಮುಜುಗರದ ಘಟನೆಯೊಂದರ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ:ನಾಸಿರುದ್ದೀನ್ ಶಾ ಅವರಿಗೆ ‘ಕೇರಳ ಸ್ಟೋರಿ’ ಬಗ್ಗೆ ಸಮಸ್ಯೆಯಿದ್ದರೆ ಕೋರ್ಟ್​ಗೆ ಹೋಗಲಿ: ಮನೋಜ್ ತಿವಾರಿ
ಇಂದಿಗೂ ಯುವನಟಿಯರಿಗೆ ಸೌಂದರ್ಯ ಹಾಗೂ ಫ್ಯಾಷನ್​ ಸೆನ್ಸ್​​ನಲ್ಲಿ ಸ್ಪರ್ಧೆ ನೀಡುವ ಹಿರಿಯ ನಟಿ ತಮ್ಮ ಆತ್ಮಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ ಚಿತ್ರರಂಗದ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ರೇಖಾ ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ 1969 ರಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅಂಜಾನಾ ಸಫರ್ ಎಂಬ ಸಿನಿಮಾದಲ್ಲಿ ನಟಿಸುವಾಗ ನಟ ಬಿಸ್ವಜಿತ್ ಚಟರ್ಜಿಯು ಶೂಟಿಂಗ್​ ವೇಳೆ ಬಲವಂತವಾಗಿ ತಮಗೆ ಚುಂಬಿಸಿದ್ದರು.
ಈ ದೃಶ್ಯ ಮೊದಲೇ ನಿಗದಿಯಾಗಿತ್ತು. ಆದರೆ ನಿರ್ದೇಶಕರು ತನಗೆ ಮಾಹಿತಿ ನೀಡಿರಲಿಲ್ಲ. ಆ ವೇಳೆ ತನಗೆ ಕೇವಲ 15 ವರ್ಷವಿದ್ದು, ಇದರಿಂದಾಗಿ ತುಂಬಾ ಭಯಭೀತಳಾಗಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
