ಬೆಂಗಳೂರು:ಕನ್ನಡದ ‘ಅಮೃತವರ್ಷಿಣಿ’ ಸಿನಿಮಾದಲ್ಲೂ ಅಭಿನಯಿಸಿ ಗಮನ ಸೆಳೆದಿದ್ದ ಬಹುಭಾಷಾ ನಟ ಶರತ್​ಬಾಬು ಅನಾರೋಗ್ಯ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತಿರುವಂಥದ್ದೇ. ಆದರೆ ಈ ಮಧ್ಯೆ ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ದೇವಾಲಯಗಳಲ್ಲಿ ನಾಳೆ ‘ಹನುಮಾನ್ ಚಾಲೀಸಾ’ ಪಠಣ
ನಟ ಕಮಲಹಾಸನ್ ಅವರು ಶರತ್​ಬಾಬುವನ್ನು ಸಹೋದರ, ಗೆಳೆಯ, ಹಿತೈಷಿ ಎಂದೆಲ್ಲ ಸಂಬೋಧಿಸಿ, ನೀವು ಸದಾ ನೆನಪಿನಲ್ಲಿರುತ್ತೀರಿ ಎಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಶರತ್ ಅವರು ಜೀವಂತವಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದರಿಂದ, ಕಮಲಹಾಸನ್​ ಇಂದು ರಾತ್ರಿ 9.20ಕ್ಕೆ ಮಾಡಿದ್ದ ಟ್ವೀಟನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ:ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಅಲ್ಲದೆ ಶರತ್​ ಅವರು ಅನಾರೋಗ್ಯದಲ್ಲಿರುವುದು ನಿಜ. ಆದರೆ ಅವರು ಸಾವಿಗೀಡಾಗಿಲ್ಲ ಎಂದು ಅವರ ಆಪ್ತವರ್ಗದ ಹಲವರು ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ, ಶರತ್​ಬಾಬು ಅವರ ಕುರಿತು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಶರತ್​ಬಾಬು ಅವರು ಚೇತರಿಸಿಕೊಂಡಿದ್ದು, ವಾರ್ಡ್​ಗೆ ಸ್ಥಳಾಂತರಿಸಲಾಗಿದೆ ಎಂದು ಅವರ ಸಹೋದರಿ ಸ್ಪಷ್ಟನೆ ನೀಡಿದ್ದಾಗಿ ಆಪ್ತಮೂಲಗಳು ತಿಳಿಸಿವೆ.
ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
