ಮುಂಬೈ:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಕೆಲವು ಘಟನೆಗಳಿಂದ ಸುದ್ದಿಯಲ್ಲಿದ್ದಾರೆ. ಈಗ ಅಂತದ್ದೇ ಮತ್ತೊಂದು ಸಂಕಷ್ಟ ಎದುರಾಗಿದ್ದು, ಶಿಲ್ಪಾ ಮತ್ತು ಅವರ ತಾಯಿ ಸುನಂದ ಶೆಟ್ಟಿ ಬಂಧನ ಭೀತಿ ಎದುರಿಸುತ್ತಿದ್ದಾರೆ.
ಕಳೆದ ತಿಂಗಳು ಶಿಲ್ಪಾ ಪತಿ ರಾಜ್ ಕುಂದ್ರಾರನ್ನು ಅಶ್ಲೀಲ ಚಿತ್ರ ನಿರ್ಮಾಣ ವಿಚಾರವಾಗಿ ಬಂಧನ ಮಾಡಲಾಗಿತ್ತು. ಇದರ ನಡುವೆ ಶಿಲ್ಪಾ ಮತ್ತವರ ತಾಯಿ ಬಂಧನ ಭೀತಿ ಎದುರಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ನಟಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದ ಶೆಟ್ಟಿ ವಿರುದ್ದ ಹಜರತ್​ಗಂಜ್ ಮತ್ತು ವಿಭೂತಿಖಂಡ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಿಚಾರಣೆ ನಡೆಸಲು ಲಖ್ನೋ ಪೊಲೀಸರು ಮುಂಬೈಗೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ:
ಶಿಲ್ಪಾ ಶೆಟ್ಟಿ ನಟನೆ ಜೊತೆಗೆ ಫಿಟ್‌ನೆಸ್ ನಲ್ಲಿ ಪರಿಣಿತಿ ಹೊಂದಿದ್ದಾರೆ. ವೆಲ್‌ನೆಸ್ ಸೆಂಟರ್‌ ಎಂಬ ಫಿಟ್‌ನೆಸ್ ಸಂಸ್ಥೆ ಹೊಂದಿರುವ ಶಿಲ್ಪಾ, ಆ ಕಂಪನಿಯ ಮಾಲಕಿ. ಇದೇ ಕಂಪನಿಗೆ ತಾಯಿ ಸುನಂದಾ ಶೆಟ್ಟಿ ನಿರ್ದೇಶಕಿ ಆಗಿದ್ದಾರೆ. ಈ ಸಂಸ್ಥೆಯ ಹೊಸ ಶಾಖೆಯೊಂದನ್ನು ಪ್ರಾರಂಭಿಸುವುದಾಗಿ ಇಬ್ಬರಿಂದ ಶಿಲ್ಪಾ ಹಾಗೂ ತಾಯಿ ಸುನಂದಾ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ ಎನ್ನಲಾಗಿದೆ.
ಆದರೆ, ಈವರೆಗೂ ವೆಲ್‌ನೆಸ್ ಸೆಂಟರ್‌ನ ಹೊಸ ಶಾಖೆ ಆರಂಭಿಸಿಲ್ಲ. ಹೀಗಾಗಿ, ಹಣ ನೀಡಿದ ಜ್ಯೋತ್ಸ್ನಾ ಚೌಹಾಣ್ ಮತ್ತು ವೀರ್ ಸಿಂಗ್ ಎಂಬುವರು ಶಿಲ್ಪಾ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ವಿರುದ್ಧ ಎರಡು ಠಾಣೆಗಳಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + sixteen =
Remember me
