ಚೆನ್ನೈ:ಬಹುಭಾಷಾ ನಟ ಸಿದ್ದಾರ್ಥ್ ಅವರು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯಾ ಅವರನ್ನು, ಗಲ್ಲು ಶಿಕ್ಷೆಗೆ ಗುರಿಯಾಗಿ ಸತ್ತಿರುವ ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅವರು ಇಂದು ಮಾಡಿದ್ದ ಟ್ವೀಟ್ ವೈರಲ್ ಆಗುತ್ತಿದ್ದಂತೆ ಆ ಟ್ವೀಟ್​ನ್ನು ಡಿಲೀಟ್ ಮಾಡಿದ್ದಾರೆ.
ಕರೊನಾ ವಿಷಯವಾಗಿ ಬೆಂಗಳೂರು ಬಿಬಿಎಂಪಿ ವಾರ್​ರೂಮ್​​ನಲ್ಲಿ ನಡೆಯುತ್ತಿದೆ ಎನ್ನಲಾದ ಬೆಡ್ ಹಗರಣದ ಬಗ್ಗೆ ತೇಜಸ್ವಿ ಸೂರ್ಯ ಗಮನ ಸೆಳೆದು, ವಾರ್​ರೂಮ್​ನಲ್ಲಿ ಹೆಚ್ಚು ಮುಸ್ಲಿಂರೇ ಕೆಲಸ ಮಾಡುತ್ತಿದ್ದಾರೆ, ಇದನ್ನೇನು ಮದರಸಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದರು.
ಈ ಬಗ್ಗೆ ಪರ ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಇದನ್ನು ಖಂಡಿಸುವ ಭರದಲ್ಲಿ ನಟ ಸಿದ್ದಾರ್ಥ್ ಅವರು ‘ಅಜ್ಮಲ್ ಕಸಬ್​ಗಿಂತ ಹತ್ತು ವರ್ಷ ಚಿಕ್ಕವನಾದ ತೇಜಸ್ವಿ ಸೂರ್ಯ ಕಸಬ್​ಗಿಂತೂ ಅಪಾಯಕಾರಿ’ ಎಂದು ಟ್ವೀಟ್ ಮಾಡಿದ್ದರು.
ಒಬ್ಬ ಜನಪ್ರತಿನಿಧಿಯನ್ನು ಉಗ್ರನಿಗೆ ಹೋಲಿಸಿ ಮಾತನಾಡಿದ್ದಕ್ಕೆ ನೆಟ್ಟಿಗರು ಸಿದ್ದಾರ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತುಕೊಂಡು ಸಿದ್ದಾರ್ಥ್ ತಮ್ಮ ವಿವಾದಾತ್ಮಕ ಟ್ವೀಟ್​ನ್ನು ಅಳಿಸಿ ಹಾಕಿದ್ದಾರೆ.
ಕಾಂಗ್ರೆಸ್ ಯುವ ಮುಖಂಡ ನಲಪಾಡ್ ಪೊಲೀಸ್ ವಶಕ್ಕೆ!; ಹೈಗ್ರೌಂಡ್ಸ್​ನಲ್ಲಿ ಹೈಡ್ರಾಮಾ.. ಆಮೇಲೇನಾಯ್ತು?

ಕರೊನಾದಿಂದ ಮನೆಯಲ್ಲೇ ಕೂತು ಕೂತು ಹೊಟ್ಟೆ ಬರಿಸಿಕೊಂಡ ಹಾಲಿವುಡ್ ನಟ ವಿಲ್ ಸ್ಮಿತ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
