ನವದೆಹಲಿ:ಸಿನಿಮಾದಲ್ಲಿ ಮಾತ್ರವಲ್ಲದೇ ನಿಜವಾದ ಜೀವನದಲ್ಲಿಯೂ ಹೀರೋ ಆಗಿ ಹಲವು ತಿಂಗಳುಗಳಿಂದ ಸಮಾಜ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಬಾಲಿವುಡ್‌ ನಟ ಸೋನು ಸೂದ್‌ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ.
ಇದಾಗಲೇ ಎಪ್ಪತ್ತೈದು ವರ್ಷ ವಯಸ್ಸಿನ ಒಬ್ಬ ಅಜ್ಜಿ ಪುಣೆಯ ಬೀದಿಯಲ್ಲಿ ‘ಸ್ವಯಂರಕ್ಷಣೆಯ ಕಲೆ’ ಪ್ರದರ್ಶಿಸಿ ಭಿಕ್ಷೆ ಬೇಡುತ್ತಿದ್ದ ವಿಡಿಯೋ ನೋಡಿದ್ದ ಸೋನು ಸೂದ್‌ ಅವರು, ಅಜ್ಜಿಯ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ದೇಶದ ಮಹಿಳೆಯರಿಗೆ ಕೆಲ ರಕ್ಷಣಾ ತಂತ್ರಗಳನ್ನು ಕಲಿಸಿಕೊಡಲು ಇವರ ಅವಶ್ಯಕತೆ ಇದೆ. ಈ ಕುರಿತು ಸಣ್ಣ ತರಬೇತಿ ಶಾಲೆಯನ್ನು ತೆರೆಯಬೇಕೆಂದುಕೊಂಡಿದ್ದೇನೆ. ಹೀಗಾಗಿ ಇವರ ಬಗ್ಗೆ ಮಾಹಿತಿ ಕಳುಹಿಸಿ ಎಂದು ಕೇಳಿ’ ಎಂದು ಕೇಳಿಕೊಂಡಿದ್ದಾರೆ.
ಅಜ್ಜಿಯ ಸುದ್ದಿ ಡಿಟೇಲ್ಸ್‌ ಇಲ್ಲಿದೆ ನೋಡಿ:ವಿಳಾಸ ಕೊಡಿ ಪ್ಲೀಸ್‌… ಅಜ್ಜಿಯ ಹುಡುಕಾಟದಲ್ಲಿ ನಟ ಸೋನು
ಅದರ ಬೆನ್ನಲ್ಲೇ ಇದೀಗ ಇನ್ನೊಂದು ಟ್ವೀಟ್‌ ಮಾಡಿರುವ ನಟ, ಆನ್‌ಲೈನ್‌ ಕ್ಲಾಸ್‌ಗಾಗಿ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡಿಸುವ ಉದ್ದೇಶದಿಂದ ಜೀವನಕ್ಕೆ ಆಧಾರವಾಗಿದ್ದ ಹಸುವನ್ನೇ ಮಾರಾಟ ಮಾಡಿರುವ ಸುದ್ದಿಯನ್ನು ಓದಿ ವಿಚಲಿತಗೊಂಡಿದ್ದಾರೆ. ಆ ಹಸುವನ್ನು ಅವರಿಗೆ ವಾಪಸ್‌ ನೀಡಲು ಇಚ್ಛಿಸಿರುವ ಸೋನು, ಈ ಬಡ ದಂಪತಿಯ ಬಗ್ಗೆ ಮಾಹಿತಿ ಇದ್ದರೆ ಕೊಡಿ ಎಂದು ಕೇಳಿದ್ದಾರೆ.ತಮ್ಮ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು, ಆದ್ದರಿಂದ ಹಸುವನ್ನು ಮಾರಿರುವುದಾಗಿ ಹೇಳಿದ್ದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ತಹಸಿಲ್‌ನ ಗುಮ್ಮರ್ ಗ್ರಾಮದ ನಿವಾಸಿ ಕುಲದೀಪ್ ಕುಮಾರ್ ಅವರ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇವರ ಕುಟುಂಬಕ್ಕೆ ಇದ್ದುದು ಒಂದು ಹಸು ಮಾತ್ರ. ಅದರ ಹಾಲನ್ನು ಮಾರಿ ಜೀವನ ಸಾಗಿಸುತ್ತಿದೆ ಈ ಕುಟುಂಬ. ಆದರೆ ಈಗ ಕೇವಲ ಆರು ಸಾವಿರ ರೂಪಾಯಿಗೆ ಅದನ್ನು ಮಾರಿ ಫೋನ್‌ ತರಿಸಿಕೊಟ್ಟಿದ್ದಾರೆ. ಇದು ಸೋನು ಅವರ ಮನಸ್ಸನ್ನು ಕಲಕಿದೆ. ಅದಕ್ಕಾಗಿ ಇಂಥದ್ದೊಂದು ಟ್ವೀಟ್‌ ಮಾಡಿದ್ದಾರೆ.
ಹಸು ಮಾರಿರುವ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಆನ್‌ಲೈನ್‌ ಕ್ಲಾಸ್‌: ಫೋನಿಗಾಗಿ ಜೀವನಾಧಾರ ಹಸು ಮಾರಿದ ಅಪ್ಪ!
ಸೋನು ಅವರ ಟ್ವೀಟ್‌ಗೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಒಬ್ಬ ನಟ ಏಕಾಂಗಿಯಾಗಿ ನಮ್ಮ ದೇಶದ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅಂತೆಯೇ ದೇಶದಲ್ಲಿರುವ ಎಲ್ಲಾ ರಾಜಕೀಯ ವ್ಯಕ್ತಿಗಳಿಂದ ಎಷ್ಟು ಇಂತಹ ಮಾನವೀಯ ಕೆಲಸಗಳು ಆಗಬಹುದು ಎಂದು ನೀವೇ ಊಹಿಸಿಕೊಳ್ಳಿ. ಎಲ್ಲರೂ ಇಂಥದ್ದೊಂದು ಸತ್ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕಮೆಂಟಿಗರು ಹೇಳಿದ್ದಾರೆ.
Let’s get this guy’s cows back. Can someone send his details please.https://t.co/zv0Mj8DCh9
— sonu sood (@SonuSood)July 23, 2020

ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಬಾಲಕಿಗೆ ಏಳು ಲಕ್ಷ ಪರಿಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
