ಮುಂಬೈ:ಕಸದಿಂದ ರಸ ತಯಾರಿಸುವ ಕಲೆ ಇವತ್ತು ನಿನ್ನೆಯದಲ್ಲ. ಬೇಡವಾದ ವಸ್ತುಗಳಿಂದ ಬಳಕೆಗೆ ಬರುವ ವಸ್ತುಗಳನ್ನು ತಯಾರಿಸಬಹುದಾಗಿದೆ. ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿರುವ ವಿಡಿಯೋವೊಂದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ವೇತಾ ಮಹಾದಿಕ್ ಅವರು, ಹಳೆಯ ಅಕ್ಕಿ ಚೀಲವನ್ನು ಬಳಸಿ ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಆಗಿ ಪರಿವರ್ತಿಸಿದ್ದಾರೆ. ಇದೇ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಉರ್ಫಿ ಜಾವೇದ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಟಿ ಶ್ವೇತಾ ಮಹಾದಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀಲಿ ಬಣ್ಣದ ಅಕ್ಕಿ ಚೀಲವನ್ನು ತುಂಡು ತುಂಡುಗಳಾಗಿ ಕತ್ತರಿಸಿಕೊಂಡಿದ್ದಾರೆ. ಬ್ಯಾಗ್ ತಯಾರಿಸಲು ಬೇಕಾದಂತೆ ಕತ್ತರಿಸಿ ನಂತರ ನೆರಿಗೆ ನೆರಿಗೆಯಾಗಿ ಹೊಲಿದು ಮಧ್ಯದಲ್ಲಿ ಜಿಪ್ ಕೂರಿಸಿ ಎರಡು ಕೈಗಳನ್ನು ಅಳವಡಿಸಿ ಸುಂದರವಾದ ಬ್ಯಾಗ್ ನಿರ್ಮಿಸಲಾಗಿದೆ. ನಂತರ ಸ್ಟೈಲಿಶ್‌ ಆಧುನಿಕ ಧಿರಿಸಿನ ಜೊತೆ ಈ ಬ್ಯಾಗ್ ಹಿಡಿದು ಶ್ವೇತಾ ಮಹಾದಿಕ್ ಫೋಸ್ ನೀಡಿದ್ದಾರೆ.
ಇದನ್ನೂ ಓದಿ:ನಾಮಪತ್ರ ಹಿಂಪಡೆಯಲು JDS ಅಭ್ಯರ್ಥಿಗೆ ಆಮಿಷ? ಆಡಿಯೋ ವೈರಲ್​ ಬಗ್ಗೆ ಸೋಮಣ್ಣ ಸ್ಪಷ್ಟನೆ ಹೀಗಿದೆ…​
ಈ ವಿಡಿಯೋ ನೋಡಿ ನಟಿ ಉರ್ಫಿ ಜಾವೇದ್ ಕೂಡ ಇಂಪ್ರೆಸ್ ಆಗಿದ್ದು ಕಾಮೆಂಟ್ ಮಾಡಿದ್ದಾರೆ. ನಿಮಗೆ ವಿಶ್ವದ ಅತ್ಯಂತ ಪರಿಸರ ಸ್ನೇಹಿ ಕಲಾವಿದ ಪ್ರಶಸ್ತಿಯನ್ನು ನೀಡಬೇಕು ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

A post shared by Shweta Mahadik (@shwetmahadik)
ದೇವಸ್ಥಾನಕ್ಕೆ ಹಸುವನ್ನು ದಾನ ಮಾಡಿದ ಮುಸ್ಲಿಂ ಕುಟುಂಬ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
