ಮುಂಬೈ: ಬಾಲಿವುಡ್ ನಟಿ, ಮಾಜಿ ಕಾಂಗ್ರೆಸ್ ನಾಯಕಿ ಊರ್ಮಿಳಾ ಮಾತೋಂಡ್ಕರ್ ಮಂಗಳವಾರ ಶಿವಸೇನಾ ಪಕ್ಷಕ್ಕೆ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ತಿಳಿಸಿದ್ದಾರೆ. ಊರ್ಮಿಳಾ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ ಬಳಿಕ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದರು.
ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ಕೋಟಾದಲ್ಲಿ ನಾಮನಿರ್ದೇಶನ ಸದಸ್ಯತ್ವದ ಕೋಟಾದಲ್ಲಿ ಊರ್ಮಿಳಾ ಹೆಸರನ್ನು ಸರ್ಕಾರ ರವಾನಿಸಿದೆ. ರಾಜ್ಯಪಾಲ ಬಿ.ಎಸ್.ಕೋಶ್ಯಾರಿ ಅವರು ಒಟ್ಟು 12 ಸದಸ್ಯರ ಪಟ್ಟಿಯನ್ನು ಅಂಗೀಕರಿಸಬೇಕಾಗಿದೆ. ಹನ್ನೊಂದು ಸದಸ್ಯರ ಪಟ್ಟಿಯನ್ನು ಮಹಾ ವಿಕಾಸ್ ಅಘಾಡಿ ಇತ್ತೀಚೆಗಷ್ಟೇ ರವಾನಿಸಿತ್ತು.
ಇದನ್ನೂ ಓದಿ:ಮನೆಯಲ್ಲಿದ್ದುಕೊಂಡೇ ಮದುವೆ ನೋಡಿ, ಕಾರ್ಬನ್ ಫ್ರೀ ಫುಡ್ ಸವಿಯಿರಿ – ಗಮನಸೆಳೆಯಿತು ಹೊಸ ಟ್ರೆಂಡ್ !
ಊರ್ಮಿಳಾ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್​ನಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅದಾಗಿ, ಮುಂಬೈ ಕಾಂಗ್ರೆಸ್ ಘಟಕದ ಕಾರ್ಯವೈಖರಿಗೆ ಅಸಮಾಧಾನಗೊಂಡು ಪಕ್ಷ ತ್ಯಜಿಸಿದ್ದರು. (ಏಜೆನ್ಸೀಸ್)
ಕೇರಳದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಲ್​ಡಿಎಫ್ ಅಭ್ಯರ್ಥಿ ‘ಮೋದಿ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
