ಮುಂಬೈ:ಖ್ಯಾತ ಹಾಲಿವುಡ್‌ ನಟ ವಿನ್ ಡೀಸೆಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪವನ್ನು ಈ ನಟನ ಮಾಜಿ ಸಹಾಯಕಿಯೊಬ್ಬರು ಮಾಡಿದ್ದಾರೆ. ಈ ಘಟನೆ ನಡೆದು 13 ವರ್ಷಗಳ ನಂತರ ತಾನೂ ಯಾಕೆ ಈ ಸುದ್ದಿಯನ್ನು ಈಗ ಹೇಳುತ್ತಿದ್ದೇನೆ ಎನ್ನುವುದಕ್ಕೂ ಸಂತ್ರಸ್ತೆ ಸ್ಪಷ್ಟನೆ  ನೀಡಿದ್ದಾರೆ.
ವಿನ್ ಡೀಸೆಲ್ ಅವರ ಮಾಜಿ ಸಹಾಯಕಿ ಆಸ್ಟಾ ಜೊನಾಸನ್, ʼʼಫಾಸ್ಟ್ ಫೈವ್ʼ (Fast Five) ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ ಅಟ್ಲಾಂಟಾ ಹೋಟೆಲ್ ಕೋಣೆಯಲ್ಲಿ ಡೀಸೆಲ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದ. ಇದಾಗಿ ಕೆಲವು ಗಂಟೆಗಳ ನಂತರ ನಟನ ಸಹೋದರಿ ಮತ್ತು ಮನರಂಜನಾ ಕಂಪನಿ ಒನ್ ರೇಸ್‌ನ ಅಧ್ಯಕ್ಷೆ ಸಮಂತಾ ವಿನ್ಸೆಂಟ್ ನನ್ನನ್ನು ಕರೆದು ಕೆಲಸದಿಂದ ತೆಗೆದುಹಾಕಿರುವ ಸಂಗತಿ ತಿಳಿಸಿದರು. ವಿನ್ ಡೀಸೆಲ್ 2010ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಮತ್ತು ಕೆಲವೇ ಗಂಟೆಗಳ ನಂತರ ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದರುʼʼ ಎಂದು ಆರೋಪಿಸಿದ್ದಾರೆ.  ಟ್ರಿಪಲ್‌ ಎಕ್ಸ್‌ ಚಿತ್ರಗಳ ಖ್ಯಾತಿಯ ಹಾಲಿವುಡ್‌ ನಟ ವಿನ್ ಡೀಸೆಲ್  ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿ ಬಂದಿದೆ.
“ವಿನ್ ಡೀಸೆಲ್ ಅವರ ಲೈಂಗಿಕ ದೌರ್ಜನ್ಯವನ್ನು ಧೈರ್ಯದಿಂದ ವಿರೋಧಿಸಿದ್ದಕ್ಕಾಗಿ ಜೊನಾಸನ್ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ವಿನ್ ಡೀಸೆಲ್ ಅವರನ್ನು ರಕ್ಷಿಸಲಾಗುವುದು ಮತ್ತು ಅವರ ಲೈಂಗಿಕ ದೌರ್ಜನ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಇದರಿಂದ ಸ್ಪಷ್ಟʼʼ ಎಂದು ಆಸ್ಟಾ ಜೊನಾಸನ್ ಪರ ವಕೀಲರು ಅಭಿಪ್ರಾಯ ಪಟ್ಟಿದ್ದಾರೆ.
ಘಟನೆ ನಡೆದು ಸುಮಾರು 13 ವರ್ಷಗಳ ಬಳಿಕ ಆಸ್ಟಾ ಜೊನಾಸನ್ ಈ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರೊಬ್ಬರ ವಿರುದ್ಧ ಮಾತನಾಡಲು ಹೆದರಿ, ಉದ್ಯಮದಿಂದ ಬಹಿಷ್ಕರಿಸಲ್ಪಡಬೇಕಾಗುತ್ತದೆ ಎಂಬ ಭಯದಿಂದ ಇಷ್ಟು ವರ್ಷಗಳ ಕಾಲ ಮೌನವಾಗಿದ್ದೆ” ಎಂದು ಮೊಕದ್ದಮೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − twelve =
Remember me
