ಹೈದ್ರಾಬಾದ್​:ಟಾಲಿವುಡ್​ನ ಖ್ಯಾತ ನಟ ವಿಶಾಲ್ ವಿದೇಶದಲ್ಲಿ ಯುವತಿ ಜತೆ ಸುತ್ತಾಡುತ್ತಿದ್ದಾರೆ ಎನ್ನುವ ವಿಡಿಯೋವೊಂದು ಕಳೆದ ಮೂರು ದಿನಗಳಿಂದ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿತ್ತು. ಈ ಕುರಿತಾಗಿ ಸೋಶಿಯಲ್​ ಮೀಡಯಾದಲ್ಲಿ ಚರ್ಚೆ ಕೂಡಾ ಆಗುತ್ತಿತ್ತು. ಈ ಕುರಿತಾಗಿ ನಟ ವಿಶಾಲ್​ ಸ್ಪಷ್ಟನೆ ನೀಡಿದ್ದಾರೆ.
ನಡೆದಿದ್ದೇನು?:ನಟ ವಿಶಾಲ್ ನ್ಯೂ ಯಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ನಟ ವಿಶಾಲ್ ಕೂಡ ಗೆಳತಿ ಜೊತೆ ನೈಟ್ ವಾಕ್ ಮಾಡಿದ್ದಾರೆ. ಕೆಂಪು ಬಣ್ಣದ ಸ್ವೆಟರ್‌ನಲ್ಲಿ ವಿಶಾಲ್ ಮತ್ತು ಕೆಂಪು ಬಣ್ಣದ ಸ್ವೆಟರ್‌ನಲ್ಲಿ ಗೆಳತಿ ಕಾಣಿಸಿಕೊಂಡಿದ್ದಾರೆ. ಗೆಳತಿ ಜತೆ ವಾಕ್​ ಮಾಡಿಕೊಂಡು ಬರುತ್ತಿದ್ದಾಗ, ಪಾದಾಚಾರಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಂತೆ ವಿಶಾಲ್ ತಮ್ಮ ಮುಖ ಮಾತ್ರವಲ್ಲದೆ ಆ ಗೆಳತಿ ಮುಖ ಕೂಡ ಮುಚ್ಚಿಕೊಂಡು ಓಡಿ ಹೋಗಿದ್ದಾರೆ.
Is that Actor@VishalKOfficialwalking with someone in NYC 🤔pic.twitter.com/ddMESEuKOq— Ramesh Bala (@rameshlaus)December 26, 2023
Is that Actor@VishalKOfficialwalking with someone in NYC 🤔pic.twitter.com/ddMESEuKOq
ವಿಡಿಯೋ ವೈರಲ್​​ ಆಗುತ್ತಿದ್ದಂತೆ ವಿಶಾಲ್​ ಅಭಿಮಾನಿಗಳು ವಿಶಾಲ್ ಜೊತೆ ಇರುವ ಆ ಗೆಳತಿ ಯಾರು? ಯಾಕೆ ಮುಖ ಮುಚ್ಚಿಕೊಂಡರು? ಯಾವ ಸಂಬಂಧ ಇಲ್ಲ ಅಂದ್ಮೇಲೆ ಯಾಕೆ ಓಡಿ ಹೋಗಬೇಕಿತ್ತು? ಇದು ಫೇಕ್ ವಿಡಿಯೋನಾ? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಕೊನೆಗೂ ಈ ವಿಚಾರವಾಗಿ ನಟ ವಿಶಾಲ್​ ಮೌನ ಮುರಿದಿದ್ದಾರೆ.
Sorry guys, I guess it's time to reveal the truth about the recent video. Well well well, it's half true in terms of location, yes I am in New York which is my regular retreat place with my cousins, which is a ritual of destressing myself every year after a super chaotic rest of…— Vishal (@VishalKOfficial)December 27, 2023
Sorry guys, I guess it's time to reveal the truth about the recent video. Well well well, it's half true in terms of location, yes I am in New York which is my regular retreat place with my cousins, which is a ritual of destressing myself every year after a super chaotic rest of…
ಇತ್ತೀಚೆಗಷ್ಟೇ ವಿಶಾಲ್ ಆ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆ ವಿಡಿಯೋ ಬಗ್ಗೆ ವಿಶಾಲ್ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.. ಕ್ಷಮಿಸಿ, ಇತ್ತೀಚೆಗಿನ ವೀಡಿಯೋ ಬಗ್ಗೆ ಸತ್ಯ ಹೇಳಲೇಬೇಕು. ಅದರಲ್ಲಿ ಸ್ವಲ್ಪ ಸತ್ಯವಿದೆ. ನಾನು ನ್ಯೂಯಾರ್ಕ್‌ನಲ್ಲಿದ್ದೇನೆ ಇದು ನಿಜ. ವರ್ಷವಿಡೀ ಕಷ್ಟಪಟ್ಟು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ನಾನು ನ್ಯೂಯಾರ್ಕ್‌ನಲ್ಲಿರುವ ನನ್ನ ಸೋದರಸಂಬಂಧಿ ಇರುವ ಸ್ಥಳಕ್ಕೆ ಹೋಗುತ್ತೇನೆ. ಮತ್ತು ಉಳಿದ ಅರ್ಧವು ತಮಾಷೆಯಾಗಿದೆ. ನಾನು ಮತ್ತು ನನ್ನ ಸೋದರಸಂಬಂಧಿಗಳು ಕ್ರಿಸ್ಮಸ್ ದಿನವನ್ನು ಮೋಜು ಮಾಡಿದ್ದೇವೆ. ನನ್ನಲ್ಲಿರುವ ಮಗು ಯಾವಾಗಲೂ ಹೊರಬರಲು ಮತ್ತು ಈ ವಿನೋದವನ್ನು ಆನಂದಿಸಲು ನಿರ್ಧರಿಸುತ್ತದೆ. ನಿಮ್ಮ ಪತ್ತೇದಾರಿ ಆಲೋಚನೆಗಳನ್ನು ಇಲ್ಲಿಗೆ ಇಲ್ಲಿಸಿ. ಕೆಲವರು ಟಾರ್ಗೆಟ್ ಮಾಡಿ ತುಂಬಾ ಬರೆಯುತ್ತಾರೆ. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಲವ್ ಯು ಆಲ್ ಎಂದು ಪೋಸ್ಟ್ ಮಾಡಿದ್ದಾರೆ.
ಹೀರೋ ವಿಶಾಲ್ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಮ್ ಟ್ರಾವೆಲ್ ಥ್ರಿಲ್ಲರ್ ‘ಮಾರ್ಕ್ ಆಂಟನಿ’ ಮೂಲಕ ಪ್ರೇಕ್ಷಕರ ಮುಂದೆ ಬಂದು ಹಿಟ್ ಗಳಿಸಿದ್ದರು. ಸದ್ಯ ‘ರತ್ನಂ’ ಮತ್ತು ‘ಡಿಟೆಕ್ಟಿವ್ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಮಸ್ಕಾರ ದೇವರು Coming soon ಎಂದ್ರು ಡಾ.ಬ್ರೋ; ‘ನನ್ನ ದೇವ್ರು ಇಷ್ಟು ದಿನ ಎಲ್ಲಿದ್ರಿ’ ಎಂದ ಫ್ಯಾನ್ಸ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 4 =
Remember me
