ಮುಂಬೈ:ಮುಕೇಶ್​ ಅಂಬಾನಿ-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ವಿವಾಹ ಸಮಾರಂಭವು ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್​​ ಕನ್ವೆಂಷನ್​ ಸೆಂಟರ್​ನಲ್ಲಿ ನಡೆಯಲಿದ್ದು, ವಿವಾಹ ಮಹೋತ್ಸವು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮದುವೆ ಕಾರ್ಯಕ್ರಮಕ್ಕೆ ಪ್ಯಾನ್​ ಇಂಡಿಯಾ ನಟ ಯಶ್​ರನ್ನು ಆಹ್ವಾನಿಸಲಾಗಿದ್ದು, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆಯಲ್ಲಿ ಪಾಲ್ಗೊಳ್ಳಲು ಪತ್ನಿ ರಾಧಿಕಾ ಜೊತೆ ಯಶ್​ ಮುಂಬೈಗೆ ಬಂದು ಇಳಿದಿದ್ದಾರೆ. ಈ ವೇಳೆ ಅವರ ಟಾಕ್ಸಿಕ್​ ಚಿತ್ರದ ಲುಕ್​ ರಿವೀಲ್​ ಆಗಿದೆ.
ಕೆಜಿಎಫ್​-2 ಬಳಿಕ ನಟ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರ​ ಟಾಕ್ಸಿಕ್​ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು, ಚಿತ್ರದ ಶೂಟಿಂಗ್​ ಭರದಿಂದ ಸಾಗಿದೆ. ಕೆಜಿಎಫ್​ ಚಿತ್ರಕ್ಕಾಗಿ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟುಕೊಂಡು ಗಮನ ಸೆಳೆದಿದ್ದ ನಟ ಯಶ್​ ಇದೀಗ ಹೊಸ ಸಿನಿಮಾಗಾಗಿ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಈ ಲುಕ್​ ಸಖತ್​ ವೈರಲ್​ ಆಗುತ್ತಿದೆ.
Rocking Star Yash in new look 👌Usually actors look odd when they change hairstyle Especially something like KGF look but this guy is different breed 😁🔥#ToxicTheMovie@TheNameIsYashpic.twitter.com/IjaQEwJJEp
ಇದನ್ನೂ ಓದಿ:ಹುತಾತ್ಮ ಕ್ಯಾ. ಆಂಶುಮಾನ್​ ಕುಟುಂಬದಲ್ಲಿ ಒಡಕು; NOP ಪಾಲಿಸಿ ಪರಿಷ್ಕರಿಸಲು ಪಟ್ಟು ಹಿಡಿದ ಪೋಷಕರು
ಗೀತು ಮೋಹನ್​ ದಾಸ್​ ನಿರ್ದೇಶನದ ಟಾಕ್ಸಿಕ್​ ಚಿತ್ರದ ಫಸ್ಟ್​ಲುಕ್​ ಹಾಗೂ ಪೋಸ್ಟರ್​ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಡ್ರಗ್ಸ್​ ಸಾಮ್ರಾಜ್ಯದ ಕುರಿತಾದ ಚಿತ್ರ ಎಂದು ಸಿನಿರಸಿಕರು ಊಹಿಸಿದ್ದಾರೆ. ಇದರಲ್ಲಿ ಭರ್ಜರಿ ಆ್ಯಕ್ಷನ್ ಕೂಡ ಇರಲಿದ್ದು, ಈ ಚಿತ್ರಕ್ಕಾಗಿ ಯಶ್​ ಅವರ ಲುಕ್​ ಹೇಗಿರಲಿದೆ ಎಂದು ಅನುಮಾನ ಮೂಡಲು ಶುರುವಾಗಿತ್ತು. ಇದೀಗ ಅದಕ್ಕೆಲ್ಲಾ ಉತ್ತರ ದೊರೆತ್ತಿದ್ದು, ರಾಕಿ ಭಾಯ್​ನ ಹೊಸ ಹೇರ್​ಸ್ಟೈಲ್​ ಎಲ್ಲರ ಗಮನ ಸೆಳೆಯುತ್ತಿದೆ.
ಯಶ್​ ಅವರ ಹೊಸ ಹೇರ್​ಸ್ಟೈಲ್​ ನೋಡುವುದಾರೆ ಉದ್ದನೆಯ ಕೂದಲನ್ನು ಶಾರ್ಟ್​​ ಮಾಡಿಸಿದ್ದು, ಅವರ ಗಡ್ಡದ ಲುಕ್​ ಸ್ವಲ್ಪ ಬದಲಾಗಿದೆ. ಅವರ ಈ ಹೊಸ ಹೇರಸ್ಟೈಲ್​ ಯಾವ ರೀತಿ ಟ್ರೆಂಡ್​ ಸೃಷ್ಟಿಸಲಿದೆ ಎಂದು ಕಾದು ನೋಡಬೇಕಿದೆ. ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿರುವ ಟಾಕ್ಸಿಕ್​ ಸಿನಿಮಾವು 2025ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.
#Yasharrives for#AnantAmbaniand#RadhikaMerchant's wedding tonight in Mumbai.#Trending#FilmfareLenspic.twitter.com/4LlfzzTBlj
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 5 =
Remember me
