ಹೈದರಾಬಾದ್​:ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಬಿರುಸು ಪಡೆದುಕೊಂಡಿದೆ. ಟಾಲಿವುಡ್​ ಸ್ಟಾರ್​ ನಟರು ಬೆಳ್ಳಂಬೆಳಗ್ಗೆಯೇ ಮತಗಟ್ಟೆಗೆ ಆಗಮಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಯುವಜನರಿಗೆ ತಪ್ಪದೇ ಮತದಾನ ಮಾಡವಂತೆ ಕರೆ ನೀಡಿದ್ದಾರೆ.

ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಏಕಾಂಗಿಯಾಗಿ ಬಂದು ಮತದಾನ ಮಾಡಿದರೆ, ಜೂ. ಎನ್​ಟಿಆರ್​ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಮೆಗಾಸ್ಟಾರ್​ ಚಿರಂಜೀವಿ ಸಹ ತಮ್ಮ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು. ಸ್ಟಾರ್​ ನಿರ್ದೇಶಕ ರಾಜಮೌಳಿ ಅವರು ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಹಕ್ಕು ಚಲಾಯಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಕೆಲವು ವಾರಗಳ ಚುನಾವಣಾ ಪ್ರಚಾರದ ಭರಾಟೆಯ ನಡುವೆ ಇಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಅಲ್ಲು ಅರ್ಜುನ್​ ಅವರು ಜುಬಿಲಿ ಹಿಲ್ಸ್​ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಈ ವೇಳೆ ಅಭಿಮಾನಿಗಳ ಮನವಿ ಮೇರೆಗೆ ಸೆಲ್ಫಿಗೆ ಪೋಸ್​ ಸಹ ನೀಡಿದರು. ಮತ ಚಲಾಯಿಸಿದ ಫೋಟವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್​, ದಯವಿಟ್ಟು ಮತದಾನ ಮಾಡಿ ನಿಮ್ಮ ನಿಮ್ಮ ಜವಬ್ದಾರಿ ಮೆರೆಯುವಂತೆ ಕೇಳಿಕೊಂಡಿದ್ದಾರೆ.

ನೀವು ವೋಟ್​ ಮಾಡಲ್ವಾ?ತಮ್ಮ ಕುಟುಂಬ ಸಮೇತ ಜುಬಿಲಿ ಹಿಲ್ಸ್​ ಮತಗಟ್ಟೆಯಲ್ಲಿ ವೋಟ್​ ಮಾಡಲು ಬಂದಿದ್ದ ಜೂ. ಎನ್​ಟಿಆರ್​ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದು, ಎಲ್ಲರ ಗಮನ ಸೆಳೆಯಿತು. ಕ್ಯೂನಲ್ಲಿ ನಿಂತಿರುವ ಸಮಯದಲ್ಲಿ ಮಾಧ್ಯಮ ಮತ್ತು ಯೂಟ್ಯೂಬ್​ ಮಂದಿ ಎನ್​ಟಿಆರ್​ ಫೋಟೋ ಮತ್ತು ವಿಡಿಯೋಗಾಗಿ ಮುಗಿಬಿದ್ದರು. ಈ ವೇಳೆ ಅವರನ್ನು ನೋಡಿ ನೀವು ವೋಟ್​ ಮಾಡುವುದಿಲ್ಲವೇ? ಇಲ್ಲಿಯೇ ಇರುತ್ತೀರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ವ್ಯಕ್ತಿಯೊಬ್ಬರು ಉತ್ತರ ನೀಡಿ, ನೀವು ವೋಟ್​ ಮಾಡಿದ ಬಳಿಕ ನಾವು ಮಾಡುತ್ತೇವೆ ಎಂದರು.

ಚಿರಂಜೀವಿ, ಜೂ. ಎನ್​ಟಿಆರ್​, ರಾಣಾ ದಗ್ಗುಬಾಟಿ, ವೆಂಕಟೇಶ್​ ದಗ್ಗುಬಾಟಿ ಸೇರಿದಂತೆ ಸ್ಟಾರ್​ ನಟರುಗಳು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಶೂಟಿಂಗ್​ ಹಿನ್ನೆಲೆಯಲ್ಲಿ ಮೈಸೂರಿನಲ್ಲಿದ್ದ ರಾಮ್​ ಚರಣ್​, ನಿನ್ನೆಯೇ ಹೈದರಾಬಾದ್​ಗೆ ಆಗಮಿಸಿ ಇಂದು ತಮ್ಮ ಹಕ್ಕನ್ನು ಚಲಾಯಿಸಿ, ಇತರರಿಗೆ ಮಾದರಿಯಾಗಿದ್ದಾರೆ.(ಏಜೆನ್ಸೀಸ್​)
ಐಪಿಎಲ್​ ಹರಾಜು ನೋಂದಣಿಗೆ ಇಂದು ಕೊನೇ ದಿನ: ಈ ಸ್ಟಾರ್​ ಆಟಗಾರರ ಮೇಲಿದೆ ಎಲ್ಲರ ಕಣ್ಣು!

‘ಮಾನವ ಶ್ರಮದ ಜಯಭೇರಿ’: ಉತ್ತರಕಾಶಿ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಿದ ರೀತಿಗೆ ಹಾಡಿಹೊಗಳಿದ ವಿದೇಶಿ ಮಾಧ್ಯಮಗಳು

ಬಾ ಎಂದು ಕರೆದೆ ಆದ್ರೆ ಅವಳು… ಬಿಗ್​ಬಾಸ್​ ಮನೆಯಲ್ಲಿ ಮದುವೆ ರಹಸ್ಯ ಬಿಚ್ಚಿಟ್ಟ ವರ್ತೂರ್​ ಸಂತೋಷ್!​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + twenty =
Remember me
