ನವದೆಹಲಿ:ಟಾಲಿವುಡ್​ ನಟಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಬಹಳ ಸಮಯದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಆದರೆ ಈ ಜೋಡಿ ನಿನ್ನೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್​​ ಆಗಿತ್ತು. ಆದರೆ ಅಸಲಿ ಸಂಗತಿಯೆ ಬೇರೆ ಇದೆ.
ಸಿದ್ಧಾರ್ಥ್ ಮತ್ತು ನಾಯಕಿ ಅದಿತಿ ರಾವ್ ಹೈದರಿ ಕೆಲವು ಸಮಯದಿಂದ ಒಟ್ಟಿಗೆ ಸುತ್ತಾಡುತ್ತಿದ್ದಾರೆ. ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಇಬ್ಬರೂ ಅವರ ಬಗ್ಗೆ ಯಾವತ್ತೂ ಮಾತನಾಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಾ, ಅದು ನಿಜವೆಂಬಂತೆ ಸುತ್ತಾಡುತ್ತಿದ್ದಾರೆ. ಆದರೆ ನಿನ್ನೆಯಿಂದ ಇಬ್ಬರೂ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
A post shared by Aditi Rao Hydari (@aditiraohydari)

ನಿನ್ನೆ(ಮಾರ್ಚ್27) ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಜೋಡಿಯ ವಿವಾಹವಾಗಿದೆ ಎಂದು ವರದಿಯಾಗಿದೆ. ಇದು ಇಬ್ಬರಿಗೂ 2ನೇ ಮದುವೆ ಎನ್ನುವು ವಿಶೇಷವಾಗಿದೆ. ಆದರೆ ಇಲ್ಲಿಯವರೆಗೆ ಸಿದ್ಧಾರ್ಥ್ ಮತ್ತು ಅತಿಥಿಯಿಂದ ಈ ಮದುವೆಯ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಆದರೆ ಸಿನಿಮಾವೊಂದರ ಶೂಟಿಂಗ್ ನೆಪದಲ್ಲಿ ಸಿದ್ಧಾರ್ಥ್ ಮದುವೆಯಾಗಿದ್ದಾರೆ ಎಂಬುದು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆದರೆ ಈ ಕುರಿತಾಗಿ ಹೊಸ ಸುದ್ದಿಯೊಂದು ವೈರಲ್​​ ಆಗಿತ್ತು.
ಈ ಜೋಡಿ ನಿನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರೀತಿಯನ್ನು ಇಂದು ಅದಿತಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಜೋಡಿ ಯಾವಾಗ ಮದುವೆ ಆಗುತ್ತಾರೋ ನೋಡೋಣ. ಇದೀಗ ಅದಿತಿ ಶೇರ್ ಮಾಡಿರುವ ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು, ನೆಟ್ಟಿಗರು, ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.
ಸಿನಿಮಾ ಶೂಟಿಂಗ್ ಎಂದು ಸುಳ್ಳು ಹೇಳಿ ಮದುವೆಯಾದ ಸಿದ್ಧಾರ್ಥ್ ಜೋಡಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − twelve =
Remember me
