ಚೆನ್ನೈ:ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್​ ಒಟ್ಟು 20 ಕೆಜಿ ತೂಕ ಇಳಿಸಿರುವುದಾಗಿ ತಿಳಿಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಮುಂಚಿನ ಮತ್ತು ಈಗಿನ ಚಿತ್ರಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಫಾಲೋವರ್ಸ್​ಗೆ ನೀವೂ ಫಿಟ್​ ಆಗಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ.
ಈ ಮುನ್ನವೂ ಸಣ್ಣ ಆಗಿ ಸುದ್ದಿ ಮಾಡಿದ್ದ ಖುಷ್ಬೂ, ತಮ್ಮ ಈ ಶಾರೀರಿಕ ಬದಲಾವಣೆಗಾಗಿ ಅವರು ಪಾಲಿಸಿದ ಡಯಟ್​ ಅಥವಾ ಎಕ್ಸರ್ಸೈಸ್​ ಪ್ಲಾನ್​ ಬಗ್ಗೆ ಏನೂ ಮಾಹಿತಿ ನೀಡಿಲ್ಲ. ಆದರೆ, ಅತ್ಯಂತ ಉತ್ತಮ ಆರೋಗ್ಯ ಹೊಂದಿದ್ದೇನೆ ಎಂದು ಬರೆದಿದ್ದಾರೆ. ಜೊತೆಗೆ, ತಮ್ಮ ಅಭಿಮಾನಿಗಳಿಗೂ ತಮ್ಮ ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.
From there to here. 20kgs lighter, I m at my healthiest best. Look after urself,remember, health is wealth. N those who ask if I am sick, thanks for ur concern. I never been so fit ever before. If I inspire even 10 of u out here to lose weight n get fit,I know I have succeeded ❤️pic.twitter.com/tbho2TRBxE
— KhushbuSundar (@khushsundar)December 5, 2021

“ಅಲ್ಲಿಂದ ಇಲ್ಲೀವರೆಗೆ. 20 ಕೆಜಿ ಹಗುರವಾಗಿದ್ದೀನಿ… ಅತ್ಯಂತ ಉತ್ತಮ ಆರೋಗ್ಯ ಹೊಂದಿರುವ ಹಾಗಿದೆ. ನಿಮ್ಮ ಬಗ್ಗೆ ಕಾಳಜಿ ವಹಿಸಿ, ನೆನಪಿರಲಿ, ಆರೋಗ್ಯವೇ ಸಂಪತ್ತು. ಇನ್ನು ನನಗೆ ಹುಷಾರಿಲ್ವ ಎಂದು ಕೇಳುವವರಿಗೆ, ನಾನು ಕಾಳಜಿಗಾಗಿ ಧನ್ಯವಾದ ಹೇಳಬಯಸುತ್ತೇನೆ. ನಾನು ಹಿಂದೆಂದೂ ಇಷ್ಟು ಫಿಟ್​ ಆಗಿರಲಿಲ್ಲ. ನಿಮ್ಮಲ್ಲಿ 10 ಜನಕ್ಕಾದರೂ ತೂಕ ಇಳಿಸಿಕೊಂಡು ಫಿಟ್​ ಆಗಲು ನಾನು ಪ್ರೇರಣೆ ನೀಡಿದರೆ, ನಾನು ಯಶಸ್ವಿಯಾಗಿದ್ದೇನೆ ಎಂದುಕೊಳ್ಳುತ್ತೇನೆ” ಎಂದು ಖುಷ್ಬೂ ಬರೆದಿದ್ದಾರೆ.
ಜಾಕ್ವೆಲಿನ್​ಗೆ ಅರೇಬಿಯನ್​ ಕುದುರೆ ಸೇರಿ 10 ಕೋಟಿ ರೂ. ಗಿಫ್ಟುಗಳು! ಕಾನ್​ಮ್ಯಾನ್​​ ಸುಕೇಶ್​ ವಿರುದ್ಧ ಇಡಿ ಚಾರ್ಜ್​ಶೀಟ್​

ಬೋನಿಗೆ ಬಿದ್ದ ಚಿರತೆ ಮರಿಗಳು; ನೋಡಲು ಮುಗಿಬಿದ್ದ ಜನತೆ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:5 + 7 =
Remember me
