ಚೆನ್ನೈ: ತಮಿಳು ನಟಿ ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ ಎಂಬ ಪೋಸ್ಟರ್​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಿಂದಾಗಿ ಅವರ ಅಭಿಮಾನಿಗಳು ಶಾಕ್​ ಆಗಿದ್ದು, ನಂತರ ಸತ್ಯ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಅನಿಕಾ ಸುರೇಂದ್ರನ್ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗೌತಮ್ ಮೆನನ್ ಅವರ ಯೆನ್ನೈ ಅರಿಂದಾಲ್, ಆಕೆಯ ತಮಿಳು ಚೊಚ್ಚಲ ಚಿತ್ರವಾಗಿದ್ದು, ಇದು ಆಕೆಗೆ ಮಹತ್ವದ ತಿರುವನ್ನು ನೀಡಿದ ಚಿತ್ರವಾಗಿತ್ತು.
ಇದನ್ನೂ ಓದಿ:50 ಸಾವಿರ ಹರಳುಗಳಿಂದ ತಯಾರಾದ ಗೌನ್​ ಗಿನ್ನಿಸ್ ದಾಖಲೆಗೆ ಭಾಜನ
ನಂತರ, ವಿಶ್ವಾಸಂ ಚಿತ್ರದಲ್ಲಿ ನಟ ಅಜಿತ್​ ಹಾಗೂ ನಟಿ ನಯನತಾರಾ ಮಗಳಾಗಿ ನಟಿಸಿದ ಅನಿಕಾ, ಸದ್ಯ ಪೂರ್ಣ ಪ್ರಮಾಣದ ನಾಯಕಿಯಾಗಿದ್ದು ಹಲವಾರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ತನ್ನ ಚೊಚ್ಚಲ ಚಿತ್ರದಲ್ಲೇ ಲಿಪ್-ಲಾಕ್ ದೃಶ್ಯಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ನಟಿ ಆಘಾತ ನೀಡಿದ್ದರು.ಹೀಗಿರುವಾಗಲೇ ಆಕೆ ಮೃತಪಟ್ಟಿದ್ದಾಳೆ ಎನ್ನುವ ಪೊಸ್ಟರ್​ ಎಲ್ಲೆಡೆ ಸದ್ದು ಮಾಡುತ್ತಿದೆ. ಜುಲೈ 2023ರಂದು ನಿಧನ ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಿರುವುದರಿಂದ, ಇದು ನಿಜವಾದ ಪೋಸ್ಟರ್ ಇರಬಹುದಾ? ಎಂಬ ಪ್ರಶ್ನೆ ಉದ್ಭವಿಸಿತ್ತು.ಕೊನೆಗೆ, ಇದು ನಟಿ ಅನಿಕಾಳ ತಮಿಳು ಚಿತ್ರದ ಪೋಸ್ಟರ್​ ಎಂದು ತಿಳಿದು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿತ್ರದ ಶೂಟಿಂಗ್ ಸ್ಪಾಟ್‌ನಲ್ಲಿ ಅಂಟಿಸಲಾಗಿದ್ದ ಪೋಸ್ಟರ್‌ನ ಫೋಟೋವನ್ನು ಯಾರೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಇದಕ್ಕೆ ಕಾರಣವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fourteen =
Remember me
