ನವದೆಹಲಿ:ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಪಾರ್ಟಿ, ಕಾರು ಚಾಲನೆ ಇತ್ಯಾದಿ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿರುವ ಸೆಲೆಬ್ರಿಟಿಗಳ ಲಿಸ್ಟ್‌ನಲ್ಲಿ ಈಗ ಪ್ರಸಿದ್ಧ ಬಾಲಿವುಡ್‌ ನಟಿ ಅನಿತಾ ರಾಜ್‌ ಸರದಿ.ನಿಯಮ ಉಲ್ಲಂಘಿಸಿ ಮನೆಯಲ್ಲಿ ಸ್ನೇಹಿತರ ಜತೆಗೂಡಿ ಮದ್ಯದ ಪಾರ್ಟಿ ಮಾಡಿರುವ ಆರೋಪ ಇವರ ಮೇಲಿದೆ. ಅನಿತಾ ರಾಜ್ ಮತ್ತು ಅವರ ಪತಿ ತಮ್ಮ ಪಾಲಿ ಹಿಲ್ ನಿವಾಸದಲ್ಲಿ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಮದ್ಯ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ.ಈ ವಿಷಯ ಮೊದಲು ಮನೆಯ ಕಾವಲುಗಾರನಿಗೆ ತಿಳಿದಿದೆ. ಅವನು ಪೊಲೀಸರಿಗೆ ದೂರು ನೀಡಿದ್ದಾನೆ. ಕೂಡಲೇ ಪೊಲೀಸ್‌ ಅಧಿಕಾರಿಯಿಂದ ನೀತಾ ರಾಜ್‌ಗೆ ಕರೆ ಬಂದಿದೆ. ‘ದೊಡ್ಡದಾಗ ಬಂಗಲೆಯಲ್ಲಿ ತಾವು ಯಾರನ್ನಾದರೂ ಕರೆದರೆ, ಅದು ಪೊಲೀಸರವರೆಗೆ ವಿಷಯ ಹೋಗಲಾರದು ಎಂದು ತಿಳಿದುಕೊಂಡಿದ್ದ ಅನಿತಾ ಪೊಲೀಸರ ಕರೆ ಬರುತ್ತಿದ್ದಂತೆಯೇ ಕಕ್ಕಾಬಿಕ್ಕಿಯಾಗಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ತಮ್ಮ ಬಗ್ಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು ಯಾರು ಎಂದು ವಿಚಾರಣೆ ಮಾಡಿದಾಗ ಕಾವಲುಗಾರನ ವಿಷಯ ತಿಳಿದಿದೆ. ಕೂಡಲೇ ಕೆಂಡಾಮಂಡಲವಾದ ನಟಿ ಕಾವಲುಗಾರನ್ನು ಚೆನ್ನಾಗಿ ನಿಂದಿಸಿದ್ದಾರೆ. ಸುಳ್ಳು ಪ್ರಚಾರ ಮಾಡುತ್ತಿರುವುದಾಗಿ ಕೆಟ್ಟದಾಗಿ ಬೈದಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಇದರ ವೀಡಿಯೋ ಕೂಡ ಮಾಡಿದ್ದು, ಅದು ಈಗ ವೈರಲ್ ಆಗಿದೆ.ಹೇಳಿಕೇಳಿ ನಟಿ, ಕೇಳಬೇಕೆ? ಈ ವಿಷಯ ಶರವೇಗದಲ್ಲಿ ಎಲ್ಲೆಡೆ ಹರಡಿದೆ. ನಂತರ ತಾವು ಯಾವುದೇ ರೀತಿಯ ಪಾರ್ಟಿ ಮಾಡುತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿರುವ ನಟಿ ಹೇಳಿದ್ದೇನೆಂದರೆ, ‘“ನನ್ನ ಪತಿ ವೈದ್ಯರಾಗಿದ್ದಾರೆ. ಅವರ ಸ್ನೇಹಿತರೊಬ್ಬರಿಗೆ ತುರ್ತಾಗಿ ಚಿಕಿತ್ಸೆಯ ಅವಶ್ಯಕತೆ ಇತ್ತು. ಮಾನವೀಯ ನೆಲೆಯ ಆಧಾರದ ಮೇಲೆ ಅವರು ಮತ್ತು ಪತ್ನಿಯನ್ನು ಮನೆಗೆ ಕರೆಯಲಾಗಿತ್ತು. ನಮ್ಮ ಪತಿ ಅವರಿಗೆ ಚಿಕಿತ್ಸೆ ನೀಡಿದರು, ಯಾವ ಪಾರ್ಟಿಯನ್ನೂ ನಾವು ಮಾಡಿಲ್ಲ. ಕಾವಲುಗಾರ ಸುಳ್ಳು ದೂರನ್ನು ನೀಡಿದ್ದಾನೆ’ ಎಂದಿದ್ದಾರೆ.ದೂರು ಬಂದ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದರು. ನಂತರ ನನ್ನ ತಪ್ಪು ಇಲ್ಲ ಎಂದು ತಿಳಿದು ಕ್ಷಮೆಯಾಚಿಸಿ ವಾಪಸ್‌ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.57 ವರ್ಷದ ಅನಿತಾ ರಾಜ್ ಪ್ರೇಮ್ ಗೀತ್ (1981), ಜರಾ ಸಿ ಜಿಂದಗಿ (1983), ಜಮೀನ್ ಆಸ್ಮಾನ್ (1984), ಮಾಸ್ಟರ್ಜಿ ಸೇರಿದಂತೆ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅದಾದ ಮೇಲೆ ಕಿರುಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve + one =
Remember me
