ನವದೆಹಲಿ:ಒಂದು ಕಾಲದಲ್ಲಿ ನಾಯಕಿಯಾಗಿ ಜನಪ್ರಿಯರಾಗಿದ್ದ ಭೂಮಿಕಾ ಚಾವ್ಲಾ ಪ್ರಸ್ತುತ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬ್ಯುಸಿಯಾಗಿದ್ದಾರೆ. ಒಂದೆಡೆ ಸಿನಿಮಾ ಮಾಡುತ್ತಲೇ ಉದ್ಯಮ ಕಡೆಗೆ ತಿರುಗಿದ್ದಾರೆ ಭೂಮಿಕಾ. ಗೋವಾದಲ್ಲಿ ಹೊಸ ಹೋಟೆಲ್ ಉದ್ಘಾಟನೆಯ ಫೋಟೋಗಳನ್ನು ಭೂಮಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಭೂಮಿಕಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ತಾನು ಗೋವಾದಲ್ಲಿ ಹೊಸ ಹೋಟೆಲ್ ಅನ್ನು ತೆರೆದಿದ್ದೇನೆ ಎಂದು ಬಹಿರಂಗಪಡಿಸಿದೆ. ಫೋಟೋದಲ್ಲಿ, ಅವರು ತಮ್ಮ ಪತಿ ಮತ್ತು ಮಗನೊಂದಿಗೆ ಹೋಟೆಲ್ ತೆರೆಯುತ್ತಿರುವುದನ್ನು ನೋಡ ಬಹುದಾಗಿದೆ.
‘ಸಮರ’ ವೆಲ್ ನೆಸ್ ಹೋಟೆಲ್ ಎಂಬ ಹೆಸರಿನ ಬೋರ್ಡ್ ಕಾಣಿಸುತ್ತದೆ. ಬೀಚ್ ಬಳಿ ಇರುವ ಈ ಹೋಟೆಲ್ ಸ್ಪಾ, ಸಂಗೀತ ಮತ್ತು ನೃತ್ಯದಂತಹ ವಿವಿಧ ಚಿಕಿತ್ಸೆಗಳನ್ನು ಒದಗಿಸುತ್ತದೆ ಎಂದು ಭೂಮಿಕಾ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಒಂದೆಡೆ ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ನಟಿಸಿ ಬ್ಯುಸಿಯಾಗಿರುವ ಭೂಮಿಕಾ ಮತ್ತೊಂದೆಡೆ ಬಿಸ್ನೆಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಭೂಮಿಕಾ ಪೋಸ್ಟ್‌ಗೆ ನೆಟಿಜನ್‌ಗಳು ವಿಶ್ ಮಾಡಿದ್ದಾರೆ.
A post shared by Bhumika Chawla (@bhumika_chawla_t)

2015ರಲ್ಲಿ ತೆಲುಗಿನ ‘ಲವ್ ಯು ಆಲಿಯಾ’ ಸಿನಿಮಾದಲ್ಲಿ ಭೂಮಿಕಾ ಚಾವ್ಲಾ ನಟಿಸಿದ್ದರು. ‘ಎಂ ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲೂ ಕೂಡ ಆಲಿಯಾ ಅಭಿನಯಿಸಿದ್ದರು. 2017ರಲ್ಲಿ ಭೂಮಿಕಾ ನಟನೆಯ ‘ಮಿಡಲ್ ಕ್ಲಾಸ್ ಅಬ್ಬಾಯಿ’ ಸಿನಿಮಾ ರಿಲೀಸ್ ಆಗಿತ್ತು. ‘ಯು ಟರ್ನ್’, ‘ಸವ್ಯಸಾಚಿ’, ‘ರೂಲರ್’ ಸಿನಿಮಾದಲ್ಲಿ ಭೂಮಿಕಾ ನಟಿಸಿದ್ದರು.
‘ಸೀಟಿಮಾರ್’ ಸಿನಿಮಾದಲ್ಲಿ ಗೋಪಿಚಂದ್, ತಮನ್ನಾ ಜೊತೆಗೆ ಭೂಮಿಕಾ ನಟಿಸುತ್ತಿದ್ದಾರೆ. 2000ರಲ್ಲಿ ತೆಲುಗಿನ ‘ಯುವುಕುಡು’ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಭೂಮಿಕಾ ಚಾವ್ಲಾ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜಪುರಿ, ಪಂಜಾಬಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಉಪೇಂದ್ರ ನಟನೆಯ ‘ಗಾಡ್ ಫಾದರ್’ಮ ರವಿಚಂದ್ರನ್ ನಟನೆಯ ‘ಲವ್ ಯು ಆಲಿಯಾ’ ಸಿನಿಮಾದಲ್ಲಿ ಭೂಮಿಕಾ ನಟಿಸಿದ್ದರು.
ಆರ್ಥಿಕ ಸಂಕಷ್ಟ; ತಳ್ಳುಗಾಡಿಯಲ್ಲಿ ಬೀದಿಗಳಲ್ಲಿ ತರಕಾರಿ ಮಾರುತ್ತಿರುವ ಪಿಎಚ್ ಡಿ ಪದವೀಧರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
