ಬೆಂಗಳೂರು:ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಭುವನ್‌ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಿಸುತ್ತಿದ್ದಾರೆ. ಹೀಗೆ ಲಗ್ನ ಪತ್ರಿಕೆ ನೀಡಲು ಹೋದ ವೇಳೆ ಹಿರಿಯ ನಟಿಯೊಬ್ಬರು ಹರ್ಷಿಕಾ ಪೂಣಚ್ಚ ಅವರಿಗೆ ಬಂಗಾರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಹಿರಿಯ ನಟಿ ಜಯಾಮಾಲಾ ಮನೆಗೆ ಹೋಗಿ ಮದ್ವೆ ಆಮಂತ್ರಣ ಪತ್ರಿಕೆ ನೀಡಿದ್ದು, ಈ ವೇಳೆ ನವಜೋಡಿಗೆ ಜಯಮಾಲಾ ಸರ್‌ಪ್ರೈಸ್​​ ನೀಡಿದ್ದಾರೆ. ಹರ್ಷಿಕಾ ಪೂಣಚ್ಚಗೆ ಚಿನ್ನದ ಓಲೆ ಗಿಫ್ಟ್ ನೀಡಿ ಜಯಮಾಲಾ ಆಶೀರ್ವದಿಸಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹರ್ಷಿಕಾಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಜಯಮಾಲ ಸಂಭ್ರಮಿಸಿದ್ದು, ಈ ವೇಳೆ ಜತೆಗೆ ಭುವನ್ ಪೊನ್ನಣ್ಣ ಜಯಮಾಲಾ ಪುತ್ರಿ ಸೌಂದರ್ಯಾ ಜಯಮಾಲಾ ಜತೆಗಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಹರ್ಷಿಕಾ ಮತ್ತು ಭುವನ್ ಪರಸ್ಪರ ವಿವಾಹವಾಗುತ್ತಿದ್ದು ಇದೇ ತಿಂಗಳ 24 ಹಾಗೂ 25ರಂದು ಈ ಯುವಜೋಡಿಯ ವಿವಾಹ ಸಮಾರಂಭ ಕೊಡಗಿನಲ್ಲಿ ಅದ್ಧೂರಿಯಾಗಿ ಜೊತೆಗೆ ಕೊಡವ ಸಂಪ್ರದಾಯದಂತೆ ನಡೆಯಲಿದೆ. ಸ್ಯಾಂಡಲ್‌ವುಡ್‌ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ.
Naga Panchami 2023: ರುಚಿ ರುಚಿಯಾದ ಹಬ್ಬದ ಅಡುಗೆ ನೀವೂ ಒಮ್ಮೆ ಟ್ರೈ ಮಾಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
