ಮುಂಬೈ:ದ್ವೇಷ ಬಿತ್ತುವ ಫೊಸ್ಟ್​ಗಳನ್ನು ಪದೇ ಪದೇ ಟ್ವಿಟ್ಟರ್​ನಲ್ಲಿ ಪ್ರಕಟಿಸುತ್ತಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್​ ಖಾತೆಯನ್ನು ಟ್ವಿಟ್ಟರ್​ ಸಂಸ್ಥೆ ಮಂಗಳವಾರ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಕಂಗನಾ ಟ್ವಿಟ್ಟರ್​​ ಸಂಸ್ಥೆಗೆ ತಿರುಗೇಟು ನೀಡಿದ್ದಾರೆ.
‘ಟ್ವಿಟ್ಟರ್​ ಅಮೆರಿಕ ಮೂಲದ್ದು. ಅಲ್ಲಿನ ಬಿಳಿಯರು, ಕಂದು ಬಣ್ಣದವರನ್ನು ಗುಲಾಮಗಿರಿಗೆ ಅರ್ಹರೆಂದುಕೊಂಡಿದ್ದಾರೆ. ನಾನು ಏನು ಮಾಡಬೇಕು, ಏನು ಮಾತನಾಡಬೇಕು ಎಂಬುದನ್ನು ಅವರು ನನಗೆ ಹೇಳಬೇಕಂತೆ, ಟ್ವಿಟ್ಟರ್​ನಿಂದ ತನ್ನನ್ನು ಬ್ಯಾನ್​ ಮಾಡಿರಬಹುದು. ಆದರೆ, ಅದೃಷ್ಟವಶಾತ್ ನನಗೆ ನನ್ನ ವಿಚಾರಧಾರೆಗಳನ್ನು ವ್ಯಕ್ತಪಡಿಸುವುದಕ್ಕೆ ಸಿನಿಮಾ ಸೇರಿದಂತೆ ಹಲವಾರು ವೇದಿಕೆಗಳಿವೆ. ನಾನಂತೂ ನನ್ನ ದೇಶದ ಜನರ ದ್ವನಿಯಾಗಿ ಇರುತ್ತೇನೆ. ಯಾರು ನನ್ನನ್ನು ತಡೆಯಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ.
ಕಂಗನಾ ಅವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಟ್ವಿಟ್ಟರ್ ವಿರುದ್ಧ ತಮ್ಮ ಈ ಅಸಮಾಧಾನವನ್ನು ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ನಂತರ ಅಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಆಗುತ್ತಿದೆ. ಬೆಂಕಿ ಹಚ್ಚಲಾಗುತ್ತಿದೆ. ಇದನ್ನೆಲ್ಲಾ ಟಿಎಂಸಿ ಹಾಗೂ ಮಮತಾ ಮಾಡಿಸುತ್ತಿದ್ದಾರೆ ಎಂದು ಕಂಗನಾ ಟ್ವಿಟ್ಟರ್​ನಲ್ಲಿ ಸರಣಿ ಪೋಸ್ಟ್​​ಗಳನ್ನು ಹಾಕಿದ್ದರು. ಅಲ್ಲದೇ ಈ ಹಿಂದೆ ಕೂಡ ಅವರು ಹಲವಾರು ಬಾರಿ ಟ್ವಿಟ್ಟರ್​ನ ನಿಯಮಗಳನ್ನು ಉಲ್ಲಂಘನೆ ಮಾಡಿ ದ್ವೇಷ ಬಿತ್ತುವ ಪೋಸ್ಟ್​​ಗಳನ್ನು ಹಾಕಿದ್ದರು. ಅಲ್ಲದೇ ಈ ಹಿಂದೆ ಇದೇ ವಿಷಯವಾಗಿ ಕಂಗಾನಾಗೆ ಟ್ವಿಟ್ಟರ್​ ಎಚ್ಚರಿಕೆಯನ್ನೂ ನೀಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್ ವಕ್ತಾರರು, ಕಂಗನಾ ಅವರು ನಮ್ಮ ಟ್ವಿಟ್ಟರ್​​ನ ನಿಯಮಗಳನ್ನು ಮೀರಿದ್ದು ಕಂಡು ಬಂದಿದ್ದರಿಂದ ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್​ ಮಾಡಿದ್ದೇವೆ. ನಮ್ಮ ಎಲ್ಲ ಟ್ವಿಟ್ಟರ್​ ಬಳಕೆದಾರರಿಗೆ ಎಲ್ಲ ನಿಯಮಗಳೂ ಒಂದೇ ಎಂದು ಹೇಳಿದ್ದಾರೆ.
ಇನ್ನು ಕಂಗನಾ ಅವರ ಟ್ವಿಟ್ಟರ್ ಖಾತೆ ಶಾಶ್ವತವಾಗಿ ಅಮಾನತಾಗಿರುವುದಕ್ಕೆ ಅವರು ಇಡೀ ದಿನ ಟ್ವಿಟ್ಟರ್​ನಲ್ಲಿ ಟ್ರೆಂಡಿಂಗ್ ಆಗಿದ್ಧಾರೆ. ಟ್ವಿಟ್ಟರ್​ನಲ್ಲಿ ಕಂಗನಾ 30 ಲಕ್ಷ ಫಾಲೋವರ್​ಗಳನ್ನು ಹೊಂದಿದ್ದರು.
ಕೋವಿಡ್‌ ಹೆಸರಿನಲ್ಲಿ ನಟ ಸೋನು ಸೂದ್‌ ಮೋಸದಾಟ- ಟ್ವೀಟ್‌ಗೆ ಲೈಕ್‌ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಂಗನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
