ನವದೆಹಲಿ:ನಟಿ ಶಿನೋವಾ ಬಿಜೆಪಿ ನಾಯಕರೊಬ್ಬರು ನನ್ನ ತಂದೆ, ಬೇಕಿದ್ರೆ ಡಿಎನ್​ಎ ಮೂಲಕ ಸಾಬೀತು ಪಡಿಸುವೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಟಿ ಶಿನೋವಾ ಹಾಗೂ ತಾಯಿ ಅಪರ್ಣಾ ಬಿಜೆಪಿ ನಾಯಕ ರವಿ ಕಿಶನ್ ತಮ್ಮನ್ನು ತಿರಸ್ಕರಿಸುತ್ತಿದ್ದಾರೆ ಎಂದು ದೂರಿದ್ದರು. ಇದೀಗ ಮತ್ತೊಮ್ಮೆ ನಟಿ ಶಿನೋವಾ ಭೋಜ್​ಪುರಿ ನಟ, ರಾಜಕಾರಣಿ ರವಿ ಕಿಶನ್ ತನ್ನ ತಂದೆ ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ವಿಡಿಯೋ ಹಂಚಿಕೊಂಡಿರುವ ಶಿನೋವಾ, ರವಿ ಕಿಶನ್​ ಜತೆಗೆ ಪೋಸ್​ ನೀಡುತ್ತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಶಿನೋವಾ ತಾಯಿಯೇ ಅರ್ಪಣಾ ಠಾಕೂರ್​. ಕಳೆದ ಕೆಲವು ದಿನಗಳ ಹಿಂದೆ ಅರ್ಪಣಾ ಠಾಕೂರ್ ನಟ​ ರವಿ ಕಿಶನ್​ ವಿರುದ್ಧ ಆರೋಪ ಮಾಡಿದ್ದರು. ತಾನು ರವಿ ಕಿಶನ್​ ಪತ್ನಿ, ಶಿನೋವಾ ಆತನ ಮಗಳು ಎಂದು ಹೇಳಿದ್ದರು. ಬಳಿಕ ರವಿ ಈಗ ಇದನ್ನು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದರು. ಅರ್ಪಣಾ ಠಾಕೂರ್​ ಈ ವಿಚಾರ ಬಹಿರಂಗ ಪಡಿಸಿದ್ದೇ ತಡ, ರವಿ ಕಿಶನ್​ ಪತ್ನಿ ಪ್ರೀತಿ ಶುಕ್ಲಾ ಪೊಲೀಸ್ ಠಾಣೆ​ ಮೆಟ್ಟಿಲೇರಿದ್ದಾರೆ. ಆಕೆಯ ವಿರುದ್ಧ ದೂರು ಸಲ್ಲಿಸಿದ್ದಾರೆ.
ನಟಿ ಶಿನೋವಾ ಮಾತ್ರ ಸುಮ್ಮನಿರದೆ ಈ ವಿಚಾರವಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಡಿಎನ್​ಎ ಟೆಸ್ಟ್​ ಮಾಡುವಂತೆ ಕೋರಿದ್ದಾರೆ. ಜತೆಗೆ ತಾಯಿ ಅರ್ಪಣಾ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸುವಂತೆ ಕೇಳಿಕೊಂಡಿದ್ದಾರೆ.
ರವಿ ಕಿಶನ್​ ಮಾತ್ರ ಅರ್ಪಾಣ ಮತ್ತು ಶಿನೋವಾ ಮಾಡಿರು ಆರೋಪ ಸುಳ್ಳು, ನನ್ನಿಂದ ಹಣ ಪಡೆಯಲು ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಯಚೂರಿನ ಹನುಮನ ಗುಡಿಯಲ್ಲಿ ಸುದೀಪ್ ದಂಪತಿಯಿಂದ ಹೋಮ,ಹವನ ವಿಶೇಷ ಪೂಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
