ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಮೇಘನಾ ಗಾಂವ್ಕರ್ ಸದ್ಯ ವಿದೇಶ ಪ್ರವಾಸದಲ್ಲಿದ್ದು ಎಂಜಾಯ್ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಅಲ್ಲಿ ನವರಸ ನಾಯಕ ಜಗ್ಗೇಶ್​ ಅವರನ್ನೂ ನೆನಪಿಸಿಕೊಂಡಿದ್ದಾರೆ. ಆ ಬಗ್ಗೆ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ ಕೂಡ.
ಅಮೆರಿಕ ಪ್ರವಾಸದಲ್ಲಿರುವ ಮೇಘನಾ, ಭಾನುವಾರ ಅಲ್ಲಿನ ವಾಷಿಂಗ್ಟನ್​ ಡಿಸಿ ಬಳಿಯ ಫ್ರೆಡ್​ರಿಕ್​ ಸಿಟಿಯಲ್ಲಿನ ದೇವಸ್ಥಾನವೊಂದಕ್ಕೆ ತೆರಳಿದ್ದಾರೆ. ಅಲ್ಲಿನ ದೇವರನ್ನು ನೋಡುತ್ತಿದ್ದಂತೆ ಅವರಿಗೆ ನಟ ಜಗ್ಗೇಶ್​ ಅವರ ನೆನಪಾಗಿದೆ. ಅದಕ್ಕೆ ಕಾರಣ, ರಾಯರು.
ಶ್ರೀಗುರು ರಾಘವೇಂದ್ರರ ಪರಮಭಕ್ತರಾಗಿರುವ ನಟ ಜಗ್ಗೇಶ್​ ಆಗಾಗ್ಯೆ ಮಂತ್ರಾಲಯಕ್ಕೆ ಹೋಗಿ ಬರುತ್ತಿರುತ್ತಾರೆ. ಮಾತ್ರವಲ್ಲ, ಆಗಾಗ ರಾಯರನ್ನು ಸ್ಮರಿಸಿಕೊಂಡು ತಮ್ಮ ಭಕ್ತಿ-ಭಾವದ ಅನುಭವಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಸುಮಾರು ಒಂದು ವರ್ಷದ ಹಿಂದೆ ಬಿಡುಗಡೆಯಾದ ಕವಿರಾಜ್ ನಿರ್ದೇಶನ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದಲ್ಲಿ ಮೇಘನಾ-ಜಗ್ಗೇಶ್​ ಜತೆಯಾಗಿ ಅಭಿನಯಿಸಿದ್ದರು. ಹೀಗಾಗಿ ಅಮೆರಿಕದಲ್ಲಿ ರಾಯರನ್ನು ನೋಡಿದಾಕ್ಷಣ ಮೇಘನಾ ಅವರಿಗೆ ಜಗ್ಗೇಶ್​ ಅವರ ನೆನಪಾಗಿದೆ.
Visited a temple today in Frederick city near Washington DC. Thought of you and clicked a picture specially for you while I was there@Jaggesh2sir. Hope you, Parimala ma’am & family are well and safe. Best regards to you from across the world.pic.twitter.com/Jd0delHmvp
— Meghana Gaonkar (@MeghanaGaonkar)October 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 13 =
Remember me
