ಹೈದರಾಬಾದ್​​:‘ನಂದ ಲವ್ಸ್‌ ನಂದಿತಾ’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ಶ್ವೇತಾ ನಂದಿತಾ ಶ್ವೇತಾ ʼಜಿಂಕೆ ಮರಿ ನಾ.. ನೀನು ಜಿಂಕೆ ಮರಿನಾ ಎಂದು ಹಾಡು ಕೇಳಿದರೆ ಪಡ್ಡೆಗಳಿಗೆ ಈ ನಟಿಯ ನೆನಪು ಆಗುತ್ತದೆ. ಮೊದಲ ಚಿತ್ರ ಸೂಪರ್‌ ಹಿಟ್‌ ಆದರೂ ನಂತರ ಅವರು ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ನಟಿಸಲೇ ಇಲ್ಲ. ಕನ್ನಡ ನಟಿ ನಂದಿತಾ ಶ್ವೇತಾ ಅವರು ತಮಿಳು, ತೆಲುಗಿಗೆ ಪಾದಾರ್ಪಣೆ ಮಾಡಿ ಅವರು ಇಲ್ಲಿಯೂ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ.
ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?
ಸದ್ಯ ನಂದಿತಾ ಶ್ವೇತಾ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಡಿಂಬ ಚಿತ್ರದ ಮೂಲಕ ನಂದಿತಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅನಿಲ್ ನಿರ್ದೇಶನದ ಹಿಡಿಂಬ ಸಿನಿಮಾದಲ್ಲಿ ಓಂಕಾರ್ ಸಹೋದರ ಅಶ್ವಿನ್ ಬಾಬು ನಾಯಕನಾಗಿ ಹಾಗೂ ನಂದಿತಾ ಶ್ವೇತಾ ನಾಯಕಿಯಾಗಿ ನಟಿಸಿದ್ದಾರೆ.
ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್ !
ಹಿಡಿಂಬ ಚಿತ್ರವನ್ನು ಸಸ್ಪೆನ್ಸ್ ಥ್ರಿಲ್ಲರ್ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್‌ನಿಂದ ಚಿತ್ರದ ಬಗ್ಗೆ ಉತ್ತಮ ನಿರೀಕ್ಷೆ ಮೂಡಿದೆ. ಈ ಚಿತ್ರ ಜುಲೈ 20 ರಂದು ಬಿಡುಗಡೆಯಾಗಲಿದೆ. ಇದರೊಂದಿಗೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗಷ್ಟೇ ಈ ಪ್ರಚಾರದ ಭಾಗವಾಗಿ ನಾಯಕಿ ನಂದಿತಾ ಶ್ವೇತಾ ಸಂದರ್ಶನವೊಂದರಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಹೇಳಿದ್ದಾರೆ. ನಂದಿತಾ ಕೂಡ ಖಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!
ನಂದಿತಾ ಶ್ವೇತಾ ಮಾತನಾಡಿ, ಈ ಚಿತ್ರಕ್ಕಾಗಿ ನಾನು ತೂಕ ಇಳಿಸಿಕೊಳ್ಳಬೇಕಿತ್ತು. ಈ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಇದಕ್ಕಾಗಿ ತುಂಬಾ ಕಷ್ಟಪಟ್ಟಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ನಿತ್ಯಾ ಮೆನನ್ ಮನೆಯಲ್ಲಿ ಸೂತಕದ ಛಾಯೆ; ಅಜ್ಜಿಯನ್ನು ನೆನೆದು ಭಾವುಕರಾದ ನಟಿ
ನಾನು ಫೈಬ್ರೊಮ್ಯಾಲ್ಗಿಯಾ ಎಂಬ ಸ್ನಾಯು ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆ. ಅದರಿಂದಾಗಿ ನಾನು ಹೆಚ್ಚು ಡಯಟ್ ಅನುಸರಿಸುತ್ತೇನೆ. ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಿಲ್ಲ. ನಾನು ಇದನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದೇನೆ. ದೇಹದಾದ್ಯಂತ ನಿಮ್ಮ ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದು ನಿಮಗೆ ಆಯಾಸವನ್ನುಂಟುಮಾಡುತ್ತದೆ ಮತ್ತು ಮೆಮೊರಿ ಸಮಸ್ಯೆಗಳಂತಹ ಮಾನಸಿಕ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು!
ಆದರೆ ಈ ಚಿತ್ರಕ್ಕಾಗಿ ಕಸರತ್ತು ಮಾಡಬೇಕಿತ್ತು. ನಿದ್ದೆಯಿಲ್ಲದೆ ದುಡಿಯಬೇಕಿತ್ತು. ಒತ್ತಡ ಮತ್ತು ನಿದ್ರೆಯ ಕೊರತೆಯು ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಆದರೆ ಚಿತ್ರಕ್ಕಾಗಿ ಇಷ್ಟೆಲ್ಲ ಸಹಿಸಿಕೊಂಡು ತೂಕ ಇಳಿಸಿಕೊಂಡೆ ಎಂದು ಭಾವುಕರಾದರು.
ರಾಖಿ ಸಾವಂತ್​ಗೆ ಕೈ ಕೊಟ್ಟ ಕಾರ್​​ ಡ್ರೈವರ್​​​; ಮೊಬೈಲ್​, ಕಾರ್​ ಕೀಯೊಂದಿಗೆ ಎಸ್ಕೇಪ್​​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 3 =
Remember me
