ಬೆಂಗಳೂರು:ನವ್ಯಾ ನಾಯರ್ ಇತ್ತೀಚೆಗೆ ತಾಜ್ ಮಹಲ್‌ಗೆ ಭೇಟಿ ಕೊಟ್ಟಿದ್ದರು. ಆ ವೇಳೆ ನವ್ಯಾ ನಾಯರ್ ಅಲ್ಲಿ ಮುದ್ದಾದ ಮಗುವನ್ನು ನೋಡಿ ಎತ್ತಿಕೊಂಡು ಮುದ್ದಾಡಿದ್ದಾರೆ. ಈ ವಿಡಿಯೋವನ್ನ ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿ ತಮಗೆ ಈ ಹಿಂದೆ ಆಗಿರುವ ಅನುಭವವನ್ನು ಹಂಚಿಕಂಡೊಂಡಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಳ್ಳುವುದರೊಂದಿಗೆ ಈ ಹಿಂದೆ ತಮ್ಮ ಸಂಬಂಧಿಯಿಂದಲೇ ಆದ ಅವಮಾನದಿಂದಾಗಿ ಮಕ್ಕಳ ಪ್ರೀತಿಯಿಂದ ದೂರು ಉಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ.
ಹಿಂದೊಮ್ಮೆ ನವ್ಯಾ ನಾಯರ್ ತಮ್ಮ ಸಂಬಂಧಿಯ ಮಗುವನ್ನು ಎತ್ತಿಕೊಂಡು ಚುಂಬಿಸಿದ್ದರು. ಆ ಮಗುವಿನ ಕೆನ್ನೆ, ಹಣೆ ಮುತ್ತನ್ನು ನೀಡಿದ ಬಳಿಕ ತಾಯಿ ಕೋಪಗೊಂಡು, ಅಪರಿಚಿತರೊಂದಿಗೆ ಈ ರೀತಿ ಕಿಸ್ ಮಾಡಬೇಡ ಎಂದು ಹೇಳಿದ್ದರು. ಆ ವೇಳೆ ಅವರ ಕಣ್ಣುಗಳು ಒದ್ದೆಯಾಗಿದ್ದವು. ಒಂದೇ ಒಂದು ಮಾತು ಆಡದೆಯೂ ಅಲ್ಲಿಂದ ಹೊರಟು ಬಂದಿದ್ದೇನು. ಆ ಘಟನೆ ಬಳಿಕ ಆ ಮಗುವಿನ ತಾಯಿಯಿಂದ ಕೇಳಬಾರದ ಮಾತುಗಳನ್ನೆಲ್ಲ ಕೇಳಿದ್ದೇನು. ಅಲ್ಲಿಂದ ಮಕ್ಕಳ ಹತ್ತಿರ ಹೋಗುವುದನ್ನೇ ನಿಲ್ಲಿಸಿದ್ದೇನು. ಈ ಘಟನೆ ಹೃದಯಕ್ಕೆ ನೋವುಂಟು ಮಾಡಿತ್ತು. ಇಂತಹ ಕೆಟ್ಟ ಅನುಭವದ ಬಳಿಕ ಮಕ್ಕಳೊಂದಿಗೆ ಬೆರೆಯುತ್ತಿರಲಿಲ್ಲ ಎಂದು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
A post shared by Navya Nair (@navyanair143)

ಈ ವಿಡಿಯೋಗೆ ನವ್ಯಾ ನಾಯರ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅವರ ವಿಡಿಯೋ ನೋಡಿದ ಬಳಿಕ ತಮ್ಮ ಅನುಭವಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಮಲಯಾಳಂ ನಟಿ ಕನ್ನಡಿಗರಿಗೂ ಚಿರಪರಿಚಿತ. ದರ್ಶನ್ ನಟಿಸಿದ ಸೂಪರ್ ಹಿಟ್ ಸಿನಿಮಾ ‘ಗಜ’, ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ‘ದೃಶ್ಯಂ’ ಸೀರಿಸ್‌ಗಳಲ್ಲಿ ನಟಿಸಿದ್ದಾರೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × 1 =
Remember me
