ಮುಂಬೈ:ಮದುವೆ ಇಬ್ಬರು ಮನಸ್ಸನ್ನು ಬೆಸೆಯುವ ಬಂದವಾಗಿದೆ. ಆದರೆ ಇಂದಿನ ಯುವ ಪೀಳಿಗೆ ವಿವಾಹ ಎನ್ನುವ ಸುಂದರವಾದ ಬಂಧನದ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದೂರವಾಗುತ್ತಾರೆ.  ಹೀಗೆ  ಬಾಲಿವುಡ್​ ನಟಿಯೊಬ್ಬರ ವಿವಾಹ ಸಂಬಂಧ ಕೂಡಾ 2 ವಾರಕ್ಕೆ ಮಾತ್ರ ಸೀಮಿತವಾಗಿತ್ತು, ನಂತ್ರ ಈ ಮದುವೆ ಮುರಿದು ಬಿದ್ದಿತ್ತು.

ಮಾಡೆಲ್​ ಹಾಗೂ ನಟಿ ಪೂನಂ ಪಾಂಡೆ ಗರ್ಭಕೋಶದ ಕ್ಯಾನ್ಸರ್​ನಿಂದಾಗಿ ಫೆಬ್ರವರಿ 1ರಂದು ಮೃತಪಟ್ಟಿರುವುದಾಗಿ ಆಕೆಯ ತಂಡ ಶುಕ್ರವಾರ (ಫೆ.02) ಬೆಳಗ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈಕೆ ಸಾವಿನ ಸುತ್ತ ಹಲವು ಅನುಮಾನಗಳು ಎಡೆಮಾಡಿಕೊಟ್ಟಿವೆ ಎನ್ನಲಾಗಿದೆ. ಆಗಾಗ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಪೂನಂ ಸರ್ವಿಕಲ್ ಕ್ಯಾನ್ಸರ್ ನಿಂದ ಇಹಲೋಕ ತ್ಯಜಿಸಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ನಟಿ ಸಾವಿನ ಸುದ್ದಿ ವರದಿ ಆಗುತ್ತಿದ್ದಂತೆ ಈಕೆ ಸುತ್ತ ಸುಳಿದಾಡುತ್ತಿದ್ದ ಹಲವು ವಿಚಾರಗಳಿಗೆ ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ. ಈ ಮದುವೆ ಕೆಲವು ದಿನಗಳು ಮಾತ್ರ ಉಳಿದಿತ್ತು.

ಸ್ಯಾಮ್ ಅಹ್ಮದ್ ಬಾಂಬೆ ಹಿಂದಿ ಸಿನಿಮಾ ರಂಗದ ಸೆಲೆಬ್ರಿಟಿ ನಿರ್ಮಾಪಕ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಹುಟ್ಟಿ ಬೆಳೆದವರು.  ಪೂನಂ ಪಾಂಡೆಗೂ ಮುನ್ನ ಸ್ಯಾಮ್ ಬಾಂಬೆ ಮಾಡೆಲ್ ಎಲ್ಲೆ ಅಹ್ಮದ್ ಎಂಬ ಮಾಡೆಲ್ ಒಬ್ಬರನ್ನು ವಿವಾಹವಾಗಿದ್ದರು. ಎಲ್ಲೆಯೊಂದಿಗೆ, ಸ್ಯಾಮ್‌ಗೆ ಇಬ್ಬರು ಮಕ್ಕಳಿದ್ದಾರೆ – ಮಗ ಟ್ರಾಯ್ ಬಾಂಬೆ ಮತ್ತು ಮಗಳು ಟಿಯಾ ಬಾಂಬೆ. ಈ ದಾಂಪತ್ಯ ಬಂಧ ಮುರಿದುಕೊಂಡ ಸ್ಯಾಮ್ ಬಾಂಬೆ.

ಸ್ಯಾಮ್ ಬಾಂಬೆಯನ್ನು ಪೂನಂ ಪಾಂಡೆ 2020ರ ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದರು. ಅಂದು ಸದ್ದಿಲ್ಲದೇ ನಡೆದ ವಿವಾಹದ ಫೋಟೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿತ್ತು.  ವಿವಾದಾತ್ಮಕವಾಗಿ ಬದುಕಿದ್ದ ಪೂನಂ ಪಾಂಡೆ ದಾಂಪತ್ಯ ಬದುಕು ಬಹಳ ಅಲ್ಪಾವಧಿಯದ್ದು,ಲಾಸ್ ಏಂಜಲೀಸ್‌ನಲ್ಲಿ ಹನಿಮೂನ್‌ ಮುಗಿಸಿ ಪತಿ ಸ್ಯಾಮ್ ಬಾಂಬೆ ಜೊತೆಗೆ ಗೋವಾ ತಲುಪಿದ್ದ ಪೂನಂ ಪಾಂಡೆ ಅಲ್ಲಿ ಚಲನಚಿತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅಲ್ಲಿ ಇಬ್ಬರ ನಡುವೆ ಸಂಘರ್ಷವೇರ್ಪಟ್ಟು ಪೂನಂ ಪಾಂಡೆ ಪೊಲೀಸ್ ದೂರು ದಾಖಲಿಸಿದರು.

ಸ್ಯಾಮ್ ಬಾಂಬೆ ದೈಹಿಕ ಹಲ್ಲೆ, ಕೌಟುಂಬಿಕ ಹಿಂಸಾಚಾರ ನಡೆಸಿದ್ದಾಗಿ ಪೂನಂ ಪಾಂಡೆ ದೂರು ದಾಖಲಿಸಿದರು. ಗೋವಾ ಪೊಲೀಸರು ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದರು. ಮಾರನೇ ದಿನವೇ ಸ್ಯಾಮ್‌ಗೆ ಜಾಮೀನು ಸಿಕ್ಕಿತು. ಎರಡೇ ವಾರದಲ್ಲಿ ಸ್ಯಾಮ್ ಬಾಂಬೆ- ಪೂನಂ ಪಾಂಡೆ ದಾಂಪತ್ಯ ಮುರಿದುಬಿತ್ತು.



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 5 =
Remember me
