ಮುಂಬೈ:ನಟಿ ಪ್ರಿಯಾಂಕಾ ಮೋಹನ್​​ ಅಭಿನಯಿಸಿರುವ ಟಿಕ್​ಟಾಕ್​ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಪ್ರಿಯಾಂಕಾ ಮೋಹನ್ ಅಭಿನಯದ 20 ನಿಮಿಷಗಳ ದೃಶ್ಯಗಳು ಕಾಣೆಯಾಗಿವೆ. ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸಬೇಕಾಯಿತು ಆರೋಪಿಸಿ ತಮಿಳಿನ ಟಿಕ್​ಟಾಕ್​ ಸಿನಿಮಾದ ನಿರ್ಮಾಪಕ ಮದನ್ ಚೆನ್ನೈನಲ್ಲಿ ದೂರು ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಇಷ್ಟು ದಿನಗಳ ಕಾಲ ಸರಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಪ್ರಿಯಾಂಕಾ ಬೆಡ್​​ರೂಮ್​​ ಸೀನ್​, ಲಿಪ್​ಲಾಕ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದೆ ಇಲ್ಲ ಎಂದು ಹೇಳಿರುವುದು ಸಖತ್​  ವೈರಲ್​ ಆಗಿದೆ.
ಇದುವರೆಗೂ ಪ್ರಿಯಾಂಕಾ ಮೋಹನ್​, ಹೋಮ್ಲಿ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಆದರೆ, ಟಿಕ್​ಟಾಕ್​ ಸಿನಿಮಾದ 20 ನಿಮಿಷದ ದೃಶ್ಯಗಳಲ್ಲಿ ಮೊದಲ ಬಾರಿಗೆ ಬೆಡ್​ರೂಮ್​ನಲ್ಲಿ ಹಸಿಬಿಸಿ ಅವತಾರಗಳಲ್ಲಿ ಪ್ರಿಯಾಂಕಾ ನಟಿಸಿದ್ದರು. ಟ್ರೈಲರ್​ನಲ್ಲಿ ಈ ದೃಶ್ಯದ ಝಲಕ್​ ನೋಡಿ ಅಭಿಮಾನಿಗಳೇ ಶಾಕ್​ ಆಗಿದ್ದರು. ಆದರೆ, ಈ ದೃಶ್ಯ ಚಿತ್ರಮಂದಿರಗಳಲ್ಲಿ ಇರಲೇ ಇಲ್ಲ.
ನಟಿಸಿದ ಸಿನಿಮಾಗಳಲ್ಲಿ ಎಲ್ಲಿಯೂ ಪ್ರಿಯಾಂಕಾ ಮೋಹನ್​ಬೋಲ್ಡ್​ ಆಗಿ ಕಾಣಿಸಿಲ್ಲ. ಡಾಕ್ಟರ್​, ಡಾನ್​ ಮತ್ತು ಎತರ್ಕ್ಕುಂ ತೂನಿಂಧವನ್ ಸಿನಿಮಾಗಳಲ್ಲಿ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಮೋಹನ್ ಬೆಡ್‌ ರೂಮ್‌ ಸೀನ್‌ಗೆ ಬಿಗ್ No ಎಂದು ಹೇಳಿದ್ದಾರೆ.
ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಯಶಸ್ಸಿನಲ್ಲಿರುವ ಪ್ರಿಯಾಂಕಾ ಆನ್‌ಸ್ಕ್ರೀನ್‌ನಲ್ಲಿ ಕಿಸ್ ಮಾಡಲು ಇಚ್ಚಿಸುತ್ತಾರಾ? ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ನಟಿ ಖಡಾ ಖಂಡಿತವಾಗಿ ನಾನು ಮಾಡೋದೆ ಇಲ್ಲ ಎನ್ನುವ ಹಾಗೆ ಉತ್ತರ ನೀಡಿದ್ದಾರೆ. ಈ ಸುದ್ದಿ ವೈರಲ್​ ಆಗುತ್ತಿದೆ.
‘ಈ ವಿಚಾರದ ಬಗ್ಗೆ ಹೇಳಲು ನನಗೆ ಏನೂ ಇಲ್ಲ. ಆದರೆ ಚಿತ್ರಕಥೆ ಎಷ್ಟೇ ಡಿಮ್ಯಾಂಡ್ ಮಾಡಿದರು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ಕಿಸ್ ಮಾಡಲು ಆಗಲ್ಲ. ನಿರ್ಮಾಪಕರು ನನಗೆ ಎಷ್ಟೇ ಕೋಟಿ ಕೊಟ್ಟರು ಸಿನಿಮಾದಲ್ಲಿ ಲಿಪ್‌ಲಾಕ್‌, ಬೆಡ್‌ ರೂಮ್‌ ದೃಶ್ಯಗಳಲ್ಲಿ ಮಾಡಲ್ಲ ಎಂದಿದ್ದಾರೆ.
ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಂಕಾ, 2019ರಲ್ಲಿ ಒಂದು ಕಥೆ ಹೇಳಾ ಎಂಬ ಕನ್ನಡ ಸಿನಿಮಾದಲ್ಲಿ ನಟಸಿದ್ದರು. ನಟ ದನುಷ್ ಮತ್ತು ನಟಿ ಪ್ರಿಯಾಂಕಾ ಅರುಲ್ ಮೋಹನ್‌ ನಟನೆಯ ಕ್ಯಾಪ್ಟನ್ ಮಿಲ್ಲರ್ ಬ್ಲಾಕ್ ಬಸ್ಟರ್ ಹಿಟ್‌ ಸಿನಿಮಾವಾದಿದೆ. ಕಾಲಿವುಡ್​ ಸ್ಟಾರ್​ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಮೆಗಾ ಹಿಟ್​ “ಡಾಕ್ಟರ್​” ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದ ನಟಿ ಪ್ರಿಯಾಂಕಾ ಮೋಹನ್​, ಇದೀಗ ತಮಿಳು ಚಿತ್ರರಂಗದಲ್ಲಿ ಸ್ಟಾರ್​ ನಟಿಯರ ಸಾಲಿಗೆ ಸೇರಿದ್ದಾರೆ.  ಇಂಜಿನಿಯರ್​ ಆಗಿದ್ದುಕೊಂಡು ಮಾಡೆಲಿಂಗ್​ ಸಹ ಮಾಡುತ್ತಿದ್ದರು. ಆದರೆ, ಡಾಕ್ಟರ್​ ಸಿನಿಮಾದಲ್ಲಿ ನಟಿಸಿದರ ಬಳಿಕ ಪ್ರಿಯಾಂಕಾ ಲಕ್​ ಬದಲಾಯಿತು. ಸಾಕಷ್ಟು ಸಿನಿಮಾ ಆಫರ್​ಗಳು ಹುಡುಕೊಂಡು ಬಂದವು.
ಇದುವರೆಗೂ ತಾವು ನಟಿಸಿದ ಸಿನಿಮಾಗಳಲ್ಲಿ ಎಲ್ಲಿಯೂ ಪ್ರಿಯಾಂಕಾ ಮೋಹನ್​ಬೋಲ್ಡ್​ ಆಗಿ ಕಾಣಿಸಿಲ್ಲ. ಡಾಕ್ಟರ್​, ಡಾನ್​ ಮತ್ತು ಎತರ್ಕ್ಕುಂ ತೂನಿಂಧವನ್ ಸಿನಿಮಾಗಳಲ್ಲಿ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಧನುಷ್​ ನಟನೆಯ ಕ್ಯಾಪ್ಟನ್​ ಮಿಲ್ಲರ್​ ಸಿನಿಮಾದಲ್ಲಿಯೂ ಪ್ರಿಯಾಂಕಾ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ.
ನೀವು ನಿಜವಾದ ಪ್ರೇಮಿ ಆಗಿದ್ದರೆ ಇಲ್ಲಿ ಅಡಗಿಸಿರುವ ಹೃದಯವನ್ನು 10 ಸೆಕೆಂಡುಗಳಲ್ಲಿ ಪತ್ತೆ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eight =
Remember me
