ತಮಿಳುನಾಡು: ಭಾರತೀಯ ಜನತಾಪಾರ್ಟಿಯು ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ರಾಧಿಕಾ ಶರತ್‌ಕುಮಾರ್‌ ಅವರಿಗೆ ಟಿಕೆಟ್‌ ನೀಡಿದೆ. ನಟಿಗೆ ಇರುವ ಆಸ್ತಿ ಕುರಿತಾಗಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ….
ಸದ್ಯ ಲೋಕಸಭೆ ಚುನಾವಣೆಯಲ್ಲಿ ಬಾಲಿವುಡ್ ಜತೆಗೆ ಸೌತ್ ನಾಯಕಿಯರೂ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಕೂಡ ಕಂಗನಾ ರಣಾವತ್‌ಗೆ ಲೋಕಸಭಾ ಸ್ಥಾನವನ್ನು ನೀಡಿತ್ತು. ಈ ಹಿಂದೆ ಬಿಜೆಪಿ ನಾಯಕತ್ವವು ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಎಂಪಿ ಟಿಕೆಟ್ ನೀಡಿದೆ. ತಮಿಳುನಾಡಿನ ವಿರುದುನಗರದಿಂದ ಸ್ಪರ್ಧಿಸುತ್ತಿದ್ದಾರೆ,ಈ ಹಿನ್ನಲೆಯಲ್ಲಿ ರಾಧಿಕಾ ಶರತ್ ಕುಮಾರ್ ಆಸ್ತಿಯ ಬಗ್ಗೆ ಚರ್ಚೆ ಶುರುವಾಗಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಆಸ್ತಿ ವಿವರಗಳನ್ನು ಅಫಿಡವಿಟ್‌ನಲ್ಲಿ ಸಲ್ಲಿಸಬೇಕು. ಮೊದಲ ಹಂತದ ಮತದಾನಕ್ಕೆ ಈಗಾಗಲೇ ಅಧಿಸೂಚನೆ ಹೊರಬಿದ್ದಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿರುದುನಗರದಿಂದ ಸ್ಪರ್ಧಿಸಿರುವ ರಾಧಿಕಾ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯನ್ನು ನಮೂದಿಸಿದ್ದಾರೆ.
ಚುನಾವಣಾ ಅಫಿಡವಿಟ್​​ನಲ್ಲಿ ನಟಿ ರಾಧಿಕಾ ಶರತ್‌ಕುಮಾರ್‌ ಅವರ ಒಟ್ಟು ಆಸ್ತಿ ಮೌಲ್ಯ 53.45 ಕೋಟಿ ರೂ. ಆಗಿದೆ. ಪ್ರಸ್ತುತ 33.01 ಲಕ್ಷ ರೂಪಾಯಿ ನಗದು, 75 ತೊಲ ಚಿನ್ನ, 5 ಕೆಜಿ ಬೆಳ್ಳಿ ಆಭರಣಗಳು ಸೇರಿದಂತೆ 27.05 ರೂ. ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ರಾಧಿಕಾ ನಾಮಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.
26.40 ರೂ. ಕೋಟಿ ಸ್ಥಿರಾಸ್ತಿ ಹಾಗೂ 14.79 ರೂ. ಕೋಟಿ ಸಾಲವಿದೆ ಎಂದು ತಿಳಿಸಿದರು. ಪ್ರಸ್ತುತ, ಅವರು ರೇಡಾನ್ ಮೀಡಿಯಾ ವರ್ಕ್ಸ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅದೇ ರೀತಿ ರಾಧಿಕಾ ಶರತ್‌ಕುಮಾ‌ರ್ ಅವರು ತಮ್ಮ ಪತಿ ಶರತ್‌ಕುಮಾರ್‌ಗೆ 8 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿ ಮತ್ತು 21 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 14 ಕೋಟಿ ಸಾಲವಿದೆ ಎಂದು ನಾಮಪತ್ರದಲ್ಲಿ ನಮೂದಿಸಿದ್ದಾರೆ.
ರಾಧಿಕಾ ಶರತ್‌ಕುಮಾರ್ ಅವರು ತಮ್ಮ ಚುನಾವಣಾ ಅಫಿಡವಿಟ್‌ ನಲ್ಲಿ 3.9 ಕೋಟಿ ರೂಪಾಯಿ ಆದಾಯ ತೆರಿಗೆ ಮತ್ತು 2.6 ಕೋಟಿ ರೂಪಾಯಿ ಜಿಎಸ್‌ಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದ ನಮೂದಿಸಿದ್ದಾರೆ. ಸರ್ಕಾರಕ್ಕೆ ಪಾವತಿಸಲಾಗಿದೆ. ಅದೇ ರೀತಿ, ಅವರ ಪತಿ ನಟ ಶರತ್‌ಕುಮಾರ್ ಸರ್ಕಾರಕ್ಕೆ ರೂ.8 ಕೋಟಿಗೂ ಹೆಚ್ಚು ಬಾಕಿಯಿದೆ.
ಕೆಲವು ದಿನಗಳ ಹಿಂದೆಯಷ್ಟೇ ರಾಧಿಕಾ ಹಾಗೂ ಅವರ ಪತಿ, ಹಿರಿಯ ನಟ ಶರತ್‌ಕುಮಾರ್‌ ಅವರು ಬಿಜೆಪಿ ಸೇರಿದ್ದರು. ಮೋದಿ ಅವರು ತಮಿಳುನಾಡಿಗೆ ಬಂದಾಗ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ರಾಧಿಕಾ ಪತಿ, ನಟ ಆರ್. ಶರತ್ ಕುಮಾರ್ ಅವರು ತಮ್ಮ ಪಕ್ಷ ಅಖಿಲ ಭಾರತ ಸಮತುವ ಮಕ್ಕಳ ಕಚ್ಚಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದು ಗೊತ್ತೇ ಇದೆ.
ಕನ್ನಡದಲ್ಲಿ ಜೀವನಚಕ್ರ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರೊಂದಿಗೆ ನಟಿಸಿದ್ದ ರಾಧಿಕಾ ಗಮನ ಸೆಳೆದಿದ್ದರು. ಪ್ರಚಂಡ ಕುಳ್ಳ, ಸತ್ಯಂಶಿವಂ ಸುಂದರಂ, ನಾಗಿಣಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲೂ ದೊಡ್ಡ ಹೆಸರನ್ನು ಮಾಡಿದ್ದಾರೆ. 62 ವರ್ಷದ ರಾಧಿಕಾ ಅವರು ನಾಲ್ಕೂವರೆ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಬೇಸಿಗೆಯಲ್ಲಿ ಪ್ರತಿನಿತ್ಯ ರಾಗಿ ಅಂಬಲಿ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲೇ ಬೇಕು..

ನಾನಿನ್ನೂ ಬದುಕಿದ್ದೇನೆ, ಯಾಕೆ ವಿಲನ್‌ ರೀತಿ ನೋಡ್ತಿರಾ? ತನ್ನ ಸ್ಥಿತಿ ನೆನೆದು ಕಣ್ಣೀರಿಟ್ಟ ಆಶಿಶ್ ವಿದ್ಯಾರ್ಥಿ

ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ…

VIDEO| ನಿಮ್ಮ ಬೈಕ್​ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್​​ಗೆ 90 ಕಿ.ಮೀ ಮೈಲೇಜ್ ಪಕ್ಕಾ!

ಸರ್ವರೋಗಕ್ಕೂ ಮದ್ದು ಹಾವಿನ ರಕ್ತ; ಈ ಜನ ಗಟಗಟನೆ ರಕ್ತ ಕುಡಿಯುತ್ತಾರೆ….!

ಮಗಳಿಗೆ ಓದು ಅಂತಾ ಕಳುಹಿಸಿದ್ರೆ ಹೀಗೆ ಮಾಡ್ತಿದ್ದಾಳೆ! ಬದಲಾಯಿಸಲು ಸಾಧ್ಯವಿಲ್ಲ ಎಂದ ನಟಿ ಊರ್ವಶಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + thirteen =
Remember me
